ಬೆಂಗಳೂರು: ನಟ ದರ್ಶನ್ (Actor Darshan) ಭಾಗಿ ಆಗಿರುವ ರೇಣುಕಾ ಸ್ವಾಮಿ ಕೊಲೆ (Ranuka Swamy Murder) ಪ್ರಕರಣದಲ್ಲಿ, ಸಾಕ್ಷಿಗಳು (Witness) ಮೂವರು ಆರೋಪಿಗಳನ್ನು ಐಡೆಂಟಿಫಿಕೇಶನ್ ಸಂದರ್ಭದಲ್ಲಿ ನಿಖರವಾಗಿ ಪತ್ತೆ ಹಚ್ಚಿದ್ದಾರೆ. ಜೈಲಿನಲ್ಲಿ ನಡೆದ ಈ ಐಡೆಂಟಿಫಿಕೇಶನ್ ಪರೇಡ್‌ನಲ್ಲಿ (Identification parade) ಹತ್ತಾರು ಇತರ ಕೈದಿಗಳ ನಡುವೆ ಆರೋಪಿಗಳನ್ನು ಸಾಕ್ಷಿಗಳು ಖಚಿತವಾಗಿ ಕಂಡು ಹಿಡಿದರು.
ತುಮಕೂರು ಜೈಲಿನಲ್ಲಿ ಇಬ್ಬರು, ಬೆಂಗಳೂರು ಜೈಲಲ್ಲಿ ಒಬ್ಬನನ್ನು ಗುರುತು ಹಿಡಿಯಲಾಗಿದೆ. ಸಾಕ್ಷಿಗಳ ಮುಂದೆ ಪೊಲೀಸರು ಆರೋಪಿಗಳ ಐಡೆಂಟಿಫಿಕೇಶನ್ ಪರೇಡ್ ನಡೆಸಿದರು. ಕೃತ್ಯದ ದಿನ ಆರೋಪಿಗಳನ್ನು ನೋಡಿದ ಸಾಕ್ಷಿಗಳಿಂದ, ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿಯೇ ಐಡೆಂಟಿಫಿಕೇಶನ್ ಪೆರೇಡ್ ನಡೆಯಿತು.
ಈ ಪರೇಡ್‌ನಲ್ಲಿ ಆರೋಪಿಗಳನ್ನು ಜೈಲಿನಲ್ಲಿರುವ ಇತರ ಕೈದಿಗಳ ನಡುವೆ ನಿಲ್ಲಿಸಿ, ತಾನು ನೋಡಿದ ಆರೋಪಿಯ ಗುರುತು ಹಿಡಿಯಲು ಸಾಕ್ಷಿಗೆ ಸೂಚಿಸಲಾಗುತ್ತದೆ. ಈ ವೇಳೆ ತಾಲೂಕು ದಂಡಾಧಿಕಾರಿಗಳು ಹಾಜರಿರುತ್ತಾರೆ. ಈ ರೀತಿಯಾಗಿ ಕಾರ್ತಿಕ್, ನಿಖಿಲ್ ನಾಯಕ್ ಹಾಗೂ ರಘುಗೆ ಐಡೆಂಟಿಫಿಕೇಶನ್ ಪೆರೇಡ್ ನಡೆಸಲಾಯಿತು. ತುಮಕೂರು ಜೈಲಲ್ಲಿ ಕಾರ್ತಿಕ್ ಹಾಗೂ ನಿಖಿಲ್‌ಗೆ, ಪರಪ್ಪನ ಆಗ್ರಹಾರ ಜೈಲಿನಲ್ಲಿ ರಘುಗೆ ಐಡೆಂಟಿಫಿಕೇಶನ್ ಪರೇಡ್ ನಡೆಯಿತು. ಈ ಐಡೆಂಟಿಫಿಕೇಶನ್ ಪರೇಡ್‌ನಲ್ಲಿ ಪತ್ತೆ ಹಚ್ಚಿದ್ದು ಐ ವಿಟ್ನೆಸ್ ಆಗಿ ಪರಿಗಣನೆ ಆಗಲಿದೆ.
ದರ್ಶನ್ ಕೇಸಲ್ಲೂ ಎರಡು ಪೆನ್ ಡ್ರೈವ್
ಈ ಪ್ರಕರಣದಲ್ಲೂ ದರ್ಶನ್ (Actor Darshan) ವಿರುದ್ಧ ಎರಡು ಪೆನ್ ಡ್ರೈವ್‌ಗಳು ಪ್ರಮುಖ ಸಾಕ್ಷಿಗಳಾಗಿವೆ. ಆದರೆ ಇವು ಆರೋಪಿ ಮಾಡಿದ್ದಲ್ಲ, ಬದಲಾಗಿ ಆರೋಪಿಗಳ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿದ್ಧಪಡಿಸಿರುವ ಪೆನ್ ಡ್ರೈವ್.
8 ಜಿಬಿಯ ಎರಡು ಪೆನ್ ಡ್ರೈವ್ ಸಿದ್ಧಪಡಿಸಿರುವ ಪೊಲೀಸರು, ಆರೋಪಿಗಳಾದ ದೀಪಕ್ ಹಾಗೂ ನಂದೀಶ್ ಇವರ ಗೂಗಲ್ ಟೈಮ್ ಲೈನ್ ಡಾಟಾವನ್ನು ಅದರಲ್ಲಿ ಸಂಗ್ರಹಿಸಿದ್ದಾರೆ. ದೀಪಕ್ ಶಾಸಕರ ಸಂಬಂಧಿ, ನಂದೀಶ್ ದರ್ಶನ್ ಮನೆಯ ಕೆಲಸದವನು. ಇಬ್ಬರ ಮೊಬೈಲ್‌ನಲ್ಲೂ ಗೂಗಲ್ ಟೈಮ್ ಲೈನ್ ಇತ್ತು. ಅಪರಾಧ ನಡೆದ ಪ್ರತಿ ಜಾಗಕ್ಕೂ ಇವರಿಬ್ಬರು ಓಡಾಡಿದ್ದಾರೆ. ಹೀಗಾಗಿ ಇದನ್ನು ಎರಡು ಪೆನ್ ಡ್ರೈವ್‌ಗಳಲ್ಲಿ ಪೊಲೀಸರು ಶೇಖರಿಸಿಟ್ಟಿದ್ದಾರೆ. ಆರೋಪಿಗಳು ಘಟನಾ ಸ್ಥಳದಲ್ಲಿ ಇದ್ದರು ಎನ್ನುವುದಕ್ಕೆ ಈ ಎರಡು ಪೆನ್ ಡ್ರೈವ್ ನಲ್ಲಿರುವ ಡಾಟಾ ಮಹತ್ವದ ಸಾಕ್ಷಿಯಾಗಿದೆ.
ಪವಿತ್ರ ಗೌಡ ಆಪ್ತೆ, ಶಾಸಕರ ಕಾರು ಚಾಲಕನಿಗೆ ಸಂಕಷ್ಟ; 2ನೇ ಬಾರಿ ವಿಚಾರಣೆ, ಬಂಧನ?
ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ (Renuka swamy Murder) ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಪೊಲೀಸರು ತೀವ್ರವಾಗಿ ಪ್ರಶ್ನಿಸುತ್ತಿದ್ದು, ಇಂದು ಮತ್ತೆ ಎರಡನೇ ಬಾರಿ ವಿಚಾರಣೆಗಾಗಿ ಕರೆಸಿದ್ದಾರೆ. ಪ್ರಕರಣದಲ್ಲಿ ಇವರಿಬ್ಬರ ಭಾಗೀದಾರಿಕೆ ಗಂಭೀರ ಸ್ವರೂಪದ್ದಾಗಿದ್ದು, ಇಬ್ಬರಿಗೂ ಬಂಧನ ಭೀತಿ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರಲ್ಲಿ ಒಬ್ಬಾಕೆ ನಟ ದರ್ಶನ್ (Actor Darshan) ಹಾಗೂ ಪವಿತ್ರ ಗೌಡ (Pavithra Gowda) ಅನ್ನು ಭೇಟಿಯಾಗಲು ಜೈಲಿಗೆ ಬಂದಿದ್ದವಳು.
ಇವರಲ್ಲಿ ಒಬ್ಬಾತ ಕಾರ್ತಿಕ್ ಪುರೋಹಿತ್. ಈತನಿಗೆ ಇಂದು ಇಂದು ವಿಚಾರಣೆಗೆ ಹಾಜರಾಗಲು ನೊಟೀಸ್ ಹೋಗಿದೆ. ಶನಿವಾರ ಸುಮಾರು ನಾಲ್ಕೈದು ಗಂಟೆಗಳ ಕಾಲ ಪೊಲೀಸರು ವಿಚಾರಣೆ ಮಾಡಿದ್ದರು. ಶಾಸಕರೊಬ್ಬರ ಕಾರು ಚಾಲಕನಾಗಿರುವ ಕಾರ್ತಿಕ್ ಪುರೋಹಿತ್, ರೇಣುಕಾ ಸ್ವಾಮಿ ಮೃತದೇಹ ಬಿಸಾಡಿದ ಬಳಿಕ ಆರೋಪಿ ಪ್ರದೋಶ್ ಅನ್ನು ಪಿಕ್‌ಅಪ್ ಮಾಡಿದ್ದ. ತನ್ನದೇ ಕಾರಿನಲ್ಲಿ ಪ್ರದೋಶ್‌ನನ್ನು ಗಿರಿನಗರಕ್ಕೆ ಕರೆದುಕೊಂಡು ಬಂದಿದ್ದ.
ಹೀಗಾಗಿ ಆವತ್ತು ಏನೆಲ್ಲಾ ಆಯ್ತು, ಕೊಲೆಯ ಮಾಹಿತಿ ಕಾರ್ತಿಕ್‌ಗೆ ಇತ್ತೇ ಎಂದು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಕೊಲೆ ಮಾಹಿತಿ ಇದ್ದೂ ಪೊಲೀಸರಿಗೆ ತಿಳಿಸಲಿಲ್ಲವಾದರೆ ಸಂಕಷ್ಟ ಗ್ಯಾರಂಟಿ ಆಗಿದೆ. ಜೊತೆಗೆ ಎರಡು ದಿನಗಳ ಕಾಲ ಆರೋಪಿಗೆ ಆಶ್ರಯ ಕೊಟ್ಟಿರುವ ಶಂಕೆ ಇದೆ. ಆಶ್ರಯದ ಜೊತೆಗೆ ಹಣಕಾಸು ಸಹಾಯವೂ ಮಾಡಿರುವ ಅನುಮಾನ ಇದೆ. ಹೀಗಾಗಿ ಇಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ.
ಜೊತೆಗೆ ಇಂದು ಪವಿತ್ರ ಗೌಡ ಆಪ್ತೆ ಸಮತಾ ವಿಚಾರಣೆ ಕೂಡ ನಡೆಯಲಿದೆ. ಈಗಾಗಲೇ ಸಮತಾ ಒಂದು ಬಾರಿ ವಿಚಾರಣೆಗೆ ಹಾಜರಾದ್ದಾಳೆ. ಈಕೆ ಆರೋಪಿ ಧನರಾಜ್‌ಗೆ 3 ಸಾವಿರ ರೂಪಾಯಿ ಹಣ ಕಳುಹಿಸಿದ್ದಳು. ಇದೇ ಹಣದಲ್ಲಿ ಧನರಾಜ್ ಎಲೆಕ್ಟ್ರಿಕ್ ಶಾಕ್ ಡಿವೈಸ್ ಖರೀದಿ ಮಾಡಿರುವ ಶಂಕೆ ಇದೆ. ಹೀಗಾಗಿ ಸಮತಾಳನ್ನು ಮತ್ತೆ ವಿಚಾರಣೆಗೆ ಪೊಲೀಸರು ಕರೆದಿದ್ದು, ಇಂದು ಹಾಜರಾಗಲು ಸೂಚಿಸಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯ ಎಸಿಪಿ ಕಚೇರಿಯಲ್ಲಿ ತನಿಖಾಧಿಕಾರಿ ಎಸಿಪಿ ಚಂದನ್ ಮುಂದೆ ಸಮತಾ ಹಾಜರಾಗಲಿದ್ದಾಳೆ.
ಇದನ್ನೂ ಓದಿ: Actor Darshan: ದರ್ಶನ್‌ಗಾಗಿ ವಿಶೇಷ ಪೂಜೆ ಮಾಡಿಸಿದ್ರಾ ವಿಜಯಲಕ್ಷ್ಮಿ? ಅಸಲಿ ಕಥೆ ಬೇರೆಯೇ ಇದೆ!