ನವದೆಹಲಿ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರೂ ಡೇಟಿಂಗ್ ಆ್ಯಪ್‌ನಲ್ಲಿ ಸಕ್ರಿಯನಾಗಿದ್ದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ (aftab amin poonawalla) ಹಾಗೂ ಕೊಲೆಯಾದ ಶ್ರದ್ಧಾ ವಾಳ್ಕರ್ (shraddha walker) ನಡುವೆ ಇದೇ ಕಾರಣಕ್ಕೆ ಜಗಳವಾಗುತ್ತಿತ್ತು. ಕೊಲೆ ನಡೆಯುವ ಮುಂಚೆ, ಅಫ್ತಾಬ್, ತನ್ನ ಫೋನ್ ಮೂಲಕ ಬೇರೆ ಬೇರೆ ಹುಡುಗಿಯರಿಗೆ ಮೆಸೇಜ್ ಮಾಡುತ್ತಿದ್ದ. ಇದನ್ನು ಶ್ರದ್ಧಾ ನೋಡಿದ್ದರಿಂದ ಇಬ್ಬರ ಮಧ್ಯೆ ಸಿಕ್ಕಾಪಟ್ಟೆ ಜಗಳ ನಡೆದಿದೆ. ಕೊನೆಗೆ ಆರೋಪಿ ಅಫ್ತಾಬ್, ಶ್ರದ್ಧಾಳನ್ನು ಕೊಂದಿದ್ದಾನೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ(Delhi Crime).
ಶ್ರದ್ಧಾಳನ್ನು ಕೊಂದ ಬಳಿಕ, ಸಾಕ್ಷ್ಯಗಳನ್ನು ಹೇಗೆ ನಾಶ ಮಾಡುವುದು, ರಕ್ತದ ಕಲೆಗಳನ್ನು ಹೇಗೆ ಅಳಿಸಿ ಹಾಕುವುದು ಎಂಬುದರ ಬಗ್ಗೆ ಗೂಗಲ್‌ನಲ್ಲಿ ಆರೋಪಿ ಅಫ್ತಾಬ್ ಸರ್ಚ್ ಮಾಡಿದ್ದ ಎಂಬುದು ಸರ್ಚ್ ಹಿಸ್ಟರಿಯಿಂದ ತಿಳಿದು ಬಂದಿದೆ. ಇಡೀ ದೇಶವೇ ಬೆಚ್ಚಿ ಬೀಳಿಸುತ್ತಿರುವ ಶ್ರದ್ಧಾಳ ಕೊಲೆಯ ಬಗ್ಗೆ ಹೊರ ಬೀಳುತ್ತಿರುವ ಒಂದೊಂದೇ ಮಾಹಿತಿಗಳು ದಿಗಿಲು ಬೀಳಿಸುತ್ತಿವೆ.
ಶ್ರದ್ಧಾಳನ್ನು 35 ಭಾಗಗಳಾಗಿ ಕತ್ತರಿಸಿ, ಆ ತುಂಡುಗಳನ್ನು 300 ಲೀಟರ್ ಫ್ರಿಡ್ಜ್‌ನಲ್ಲಿಟ್ಟಿದ್ದ. ದುರ್ನಾತ ಗೊತ್ತಾಗದಿರಲಿ ಎಂದು ಅಗರಬತ್ತಿ ಹಚ್ಚುತ್ತಿದ್ದ. ಜತೆಗೇ ರೂಮ್ ಫ್ರೆಶ್‌ನರ್ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 18ರಿಂದ 20 ದಿನಗಳ ಕಾಲ ಪ್ರತಿ ರಾತ್ರಿ 2 ಗಂಟೆಗೆ ಹತ್ತಿರದ ಅರಣ್ಯಕ್ಕೆ ಹೋಗಿ ಶ್ರದ್ಧಾಳ ಕತ್ತರಿಸಿದ್ದ ದೇಹದ ಭಾಗಗಳನ್ನು ಎಸೆಯುತ್ತಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ | ವಿಸ್ತಾರ Explainer | ಏನಿದು ಡೆಕ್ಸ್‌ಟರ್ ಕ್ರೈಮ್ ಥ್ರಿಲ್ಲರ್ ಶೋ? ಶ್ರದ್ಧಾಳ ಬರ್ಬರ ಕೊಲೆಗೆ ಹೇಗೆ ಪ್ರೇರಣೆ?