Site icon Vistara News

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ AN-94 ರೈಫಲ್‌, AK-47ಕ್ಕಿಂತ ಅಪಾಯಕಾರಿ

AN 94 RIFFLE

ನವದೆಹಲಿ: ಪಂಜಾಬ್‌ನಲ್ಲಿ ಕಳೆದ ಭಾನುವಾರ ನಡೆದ ಖ್ಯಾತ ಗಾಯಕ ಸಿಧು ಮೋಸೆವಾಲಾ ಅವರ ಹತ್ಯೆಗೆ ಹಂತಕರು ಬಳಸಿದ AN-‌94 ರೈಫಲ್‌, ಎಕೆ-47 ಕ್ಕಿಂತಲೂ ಅಪಾಯಕಾರಿ.

ಗ್ಯಾಂಗ್‌ವಾರ್‌ಗಳಲ್ಲಿ ಇದೇ ಮೊದಲ ಸಲ ಈ ಮಾರಕಾಸ್ತ್ರದ ಬಳಕೆಯಾಗಿದೆ. ಈ ಅಪಾಯಕಾರಿ ರೈಫಲ್‌, ಕೇವಲ 2 ನಿಮಿಷಗಳಲ್ಲಿ 30 ರೌಂಡ್‌ ಗುಂಡುಗಳನ್ನು ಸಿಡಿಸಬಲ್ಲುದು.

ವರದಿಗಳ ಪ್ರಕಾರ, ಹಂತಕರು ಸಿಧು ಮೂಸೆವಾಲದ ಭದ್ರತೆಗೆ ನಿಯೋಜಿತರಾಗಿದ್ದ ಕಮಾಂಡೊಗಳ ಬಳಿ ಎಕೆ 47 ಇರುವುದನ್ನು ಕಂಡ ಬಳಿಕ ಎಎನ್-‌94 ರೈಫಲ್‌ ಬೇಕೆಂದು ಗೋಲ್ಡಿ ಬ್ರಾರ್‌ಗೆ ತಿಳಿಸಿದ್ದರು. ಅದು ಸಿಕ್ಕಿದ ನಂತರ ಹತ್ಯೆಯ ಸ್ಕೆಚ್‌ ತಯಾರಾಗಿತ್ತು.

ಏನಿದು AN-94 ರೈಫಲ್‌ ?

ರೈಫಲ್‌ನಲ್ಲಿ AN ಎಂದರೆ Avtomat Nikonv (ಆಟೊಮ್ಯಾಟ್‌ ನಿಕೋವ್ನ್)‌. 1994ರ ಮಾದರಿ. ಇದರ ಮುಖ್ಯ ವಿನ್ಯಾಸಗಾರ ಗೆನ್ಯಾಡಿ ನಿಕೊನೋವ್ ಹೆಸರಿಡಲಾಗಿದೆ. ಈತ ನಿಕೊನೋವ್‌ ಮೆಶೀನ್‌ ಗನ್‌ ಅನ್ನು ಅಭಿವೃದ್ಧಿಪಡಿಸಿದ್ದ. ಎಎನ್-‌94 ರೈಫಲ್‌ ತಯಾರಿಸಲು 1980 ರಲ್ಲಿ ಕೆಲಸ ಆರಂಭಿಸಿ 1994 ರಲ್ಲಿ ಮುಕ್ತಾಯಗೊಳಿಸಿದ.

1997ರಲ್ಲಿ ರಷ್ಯಾ ಸೇನೆಗೆ ಇದರ ಸೇರ್ಪಡೆಯಾಯಿತು. ಆದರೆ ಈಗಲೂ ಅದರ ಬಳಕೆ ಮುಂದುವರಿದಿದೆ.

AN-94 ರೈಫಲ್‌ ವಿಶೇಷತೆಗಳೇನು?

ಇದನ್ನೂ ಓದಿ: Sidhu MooseWala: ಪಂಜಾಬಿ ಸಿಂಗರ್ ಸಿಧು ಮೂಸೆವಾಲಾ ಗುಂಡಿಗೆ ಬಲಿ

Exit mobile version