Site icon Vistara News

ಆ್ಯಪ್ ಡೌನ್‌ಲೋಡ್‌ ವಿಷಯಕ್ಕೆ ಪತ್ನಿ ಜತೆ ಜಗಳ; ಹೆಂಡತಿ ಮೇಲಿನ ಕೋಪಕ್ಕೆ ಮಗನಿಗೆ ಚಾಕು ಇರಿದ ತಂದೆ

Man Stabs Father While Angry Over Downloading App

Angry over delay in downloading mobile app, Delhi man stabs his son

ನವದೆಹಲಿ: ಗಂಡ-ಹೆಂಡತಿ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬ ಮಾತಿದೆ. ಆದರೆ, ದೆಹಲಿಯಲ್ಲಿ ಗಂಡ-ಹೆಂಡತಿ ಜಗಳದ ಮಧ್ಯೆ ಕೂಸಲ್ಲ, 23 ವರ್ಷದ ಯುವಕ ಬಡವಾಗಿದ್ದಾನೆ. ಹೌದು, ಮೊಬೈಲ್‌ ಆ್ಯಪ್ ಡೌನ್‌ಲೋಡ್‌ ಆಗುವಲ್ಲಿ ವಿಳಂಬವಾಯಿತು ಎಂದು ಕೋಪಗೊಂಡ ವ್ಯಕ್ತಿಯೊಬ್ಬರು ತಮ್ಮ 23 ವರ್ಷದ ಮಗನಿಗೇ ಚಾಕು ಇರಿಯುವ ಮೂಲಕ ವಿಕೃತಿ ಮೆರೆದಿದ್ದಾರೆ.

ಹೌದು, ಅಶೋಕ್‌ ಸಿಂಗ್‌ (64) ಎಂಬುವರು ತಮ್ಮ ಮಗನಿಗೇ ಚಾಕು ಇರಿದಿದ್ದಾರೆ. ಇವರು ಇತ್ತೀಚೆಗಷ್ಟೇ ಗುರುಗ್ರಾಮದಲ್ಲಿ ಫ್ಲ್ಯಾಟ್‌ ಖರೀದಿಸಿದ್ದಾರೆ. ಅದಕ್ಕಾಗಿ ಪೇಮೆಂಟ್‌ ಮಾಡುವುದು ಬಾಕಿ ಇದ್ದ ಕಾರಣ ಮೊಬೈಲ್‌ಗೆ ಒಂದು ಆ್ಯಪ್ ಇನ್‌ಸ್ಟಾಲ್‌ ಮಾಡಿ ಕೊಡು ಎಂದು ಪತ್ನಿ ಮಂಜು ಸಿಂಗ್‌ ಅವರಿಗೆ ಕೇಳಿದ್ದಾರೆ. ಆಗ ಅವರ ಪತ್ನಿಯು ಆ್ಯಪ್ ಡೌನ್‌ಲೋಡ್‌ ಮಾಡಲು ಮುಂದಾಗಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಆ್ಯಪ್ ಡೌನ್‌ಲೋಡ್‌ ವಿಳಂಬವಾಗಿದೆ. ಇದರಿಂದ ಕೋಪಗೊಂಡ ಅಶೋಕ್‌ ಸಿಂಗ್‌ ಪತ್ನಿ ಜತೆ ಜಗಳವಾಡಿದ್ದಾರೆ.

ಮೊಬೈಲ್‌ ಬಳಕೆ ವಿಷಯಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಮಗ ಆದಿತ್ಯ ಸಿಂಗ್‌, “ಒಂದು ಆ್ಯಪ್ ಡೌನ್‌ಲೋಡ್‌ ವಿಷಯಕ್ಕೆ ಯಾಕಿಷ್ಟು ಕೋಪ ಡ್ಯಾಡಿ” ಎಂದು ಕೇಳಿದ್ದಾರೆ. ಆಗ ಅಶೋಕ್‌ ಸಿಂಗ್‌ ಅವರು ಹೆಂಡತಿ ಮೇಲಿನ ಕೋಪವನ್ನು ಮಗನ ಮೇಲೆ ತೀರಿಸಿಕೊಂಡಿದ್ದಾರೆ. ಅಡುಗೆ ಮನೆಯಲ್ಲಿದ್ದ ಚಾಕು ತಂದು ಮಗನಿಗೆ ಇರಿದಿದ್ದಾರೆ.

ಮಗನ ಸ್ಥಿತಿ ಈಗ ಹೇಗಿದೆ?

ವೃತ್ತಿಯಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆಗಿರುವ ಆದಿತ್ಯ ಸಿಂಗ್‌ ಅವರನ್ನು ಲಾಲ್‌ ಬಹದ್ದೂರ್‌ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು ಇರಿತದಿಂದ ಅವರ ಪಕ್ಕೆಲುಬಿಗೆ ಎರಡು ಗಾಯಗಳಾಗಿವೆ. ಆದಾಗ್ಯೂ, ಗಂಭೀರ ಪ್ರಮಾಣದ ಗಾಯಗಳು ಆಗಿಲ್ಲ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಒಂದು ಆ್ಯಪ್ ವಿಚಾರಕ್ಕಾಗಿ ಮಗನಿಗೇ ಚಾಕು ಇರಿದ ಅಶೋಕ್‌ ಸಿಂಗ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

ಅಂದಹಾಗೆ, ಮಗನಿಗೆ ಚಾಕು ಇರಿದ ಅಶೋಕ್‌ ಸಿಂಗ್‌ ಅನಕ್ಷರಸ್ಥರಲ್ಲ. ಅವರು ಎಂಜಿನಿಯರ್ಸ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿ ನಿವೃತ್ತರಾಗಿದ್ದಾರೆ. ಇಷ್ಟೆಲ್ಲ ಓದಿಕೊಂಡು, ಉನ್ನತ ಹುದ್ದೆ ಅಲಂಕರಿಸಿ, ಹಣ-ಹೆಸರು ಗಳಿಸಿದ್ದ ಅಶೋಕ್‌ ಸಿಂಗ್‌ ಅವರು ಒಂದು ನಿಮಿಷ ಕೋಪದ ಕೈಗೆ ಬುದ್ಧಿ ಕೊಟ್ಟು ಮಗ, ಹೆಂಡತಿ ಜತೆಗೆ ಪರಿಚಯದವರೆಲ್ಲರ ಕಣ್ಣಿಗೆ ವಿಲನ್‌ ಆಗಿದ್ದಾರೆ, ಗೌರವ ಕಳೆದುಕೊಂಡಿದ್ದಾರೆ.

Exit mobile version