ಬೆಂಗಳೂರು: ರಾಜಧಾನಿಯ ಬೀದಿಗಳಲ್ಲಿ (Bangalore crime) ಬೆಚ್ಚಿ ಬೀಳಿಸುವಂಥ ರೋಡ್ ರೇಜ್ (Road Rage) ಪ್ರಕರಣಗಳು ಹೆಚ್ಚುತ್ತಿವೆ. ಒಂಟಿಯಾಗಿ ಅಥವಾ ರಾತ್ರಿ ಡ್ರೈವ್ ಮಾಡುವವರನ್ನು ಅಥವಾ ಕ್ಯಾಬ್ ಚಾಲಕರನ್ನು ಟಾರ್ಗೆಟ್ ಮಾಡಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಹಲ್ಲೆ (Assault) ಮಾಡುವುದು, ವಾಹನಕ್ಕೆ ಹಾನಿ ಮಾಡುವುದು ನಡೆಯುತ್ತಿದೆ. ಒಂದೇ ವಾರದಲ್ಲಿ ಮೂರನೇ ಅಂಥ ಪ್ರಕರಣ ವರದಿಯಾಗಿದೆ.
ಇಂದು ಬೆಳಗಿನ ಜಾವ ಮತ್ತೊಂದು ಪ್ರಕರಣ ಈ ಕುರಿತು ದಾಖಲಾಗಿದ್ದು, ಕ್ಯಾಬ್ ಅಡ್ಡಗಟ್ಟಿ ಅದರ ಚಾಲಕನಿಗೆ ಇಬ್ಬರು ದ್ವಿಚಕ್ರ ವಾಹನ ಸವಾರರು ಥಳಿಸಿದ್ದಾರೆ. ಈ ಇಬ್ಬರೂ ʼಎಡಬದಿಗೆ ಹೋಗುತ್ತಿದ್ದಾಗ ಜಾಗ ಯಾಕೆ ಬಿಡಲಿಲ್ಲ, ನಿನಗ್ಯಾರು ಲೈಸೆನ್ಸ್ ಕೊಟ್ಟಿದ್ದುʼ ಎಂದು ತಗಾದೆ ತೆಗೆದು ಚಾಲಕನಿಗೆ ಥಳಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
@CPBlr @BlrCityPolice Incident Location: Ranka Colony Road, Time: 3:41 AM Two youths on a bike intercepted company cab and hit the driver. When we checked them, they were drunk, and we found two alcohol bottles on the bike (KA51HG0124). Please take action on this. @3rdEyeDude pic.twitter.com/3PFictIgL6
— Naveenkumar B S (@naveen_3131) April 5, 2024
ಡಿಯೋ ವಾಹನದಲ್ಲಿ ಫಾಲೋ ಮಾಡಿಕೊಂಡು ಬಂದ ಈ ಪುಂಡರು ಪಾನಮತ್ತರಾಗಿದ್ದು, ಅವರ ಬಳಿ ಇದ್ದ ಬ್ಯಾಗಿನಲ್ಲೂ ಲಿಕ್ಕರ್ ಬಾಟಲಿಗಳಿದ್ದವು. ರಂಕಾ ಕಾಲೋನಿ ಬಳಿ ನಡೆದ ಈ ಘಟನೆಯ ಬಗ್ಗೆ ನವೀನ್ ಕುಮಾರ್ ಎಂಬವರಿಂದ ದೂರು ದಾಖಲಾಗಿದೆ. ಈ ಪ್ರಕರಣದ ವಿಡಿಯೋವನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ದಂಪತಿಗಳಿಗೆ ಬೈಕ್ ಸವಾರನ ಕಿರಿಕ್
ಸರ್ಜಾಪುರ ರಸ್ತೆಯಲ್ಲಿ ಮಾರ್ಚ್ 29ರ ರಾತ್ರಿ 10:40ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಬೈಕ್ ಸವಾರನೊಬ್ಬ ಕಿರಿಕ್ ಮಾಡಿದ್ದಾನೆ. ಓವರ್‌ಟೇಕ್ (overtake) ಮಾಡುವ ವಿಚಾರಕ್ಕೆ ಗಲಾಟೆಯಾಗಿ ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ.
ಓವರ್‌ಟೇಕ್ ವಿಚಾರದಲ್ಲಿ ತಗಾದೆ ಸೃಷ್ಟಿಯಾಗಿದ್ದು, ಯುವಕ ಕಾರಿನ ಹಿಂಬದಿಯಿಂದ ಸುಮಾರು 2 ಕಿಲೋಮೀಟರ್‌ನಷ್ಟು ಅಟ್ಟಿಸಿಕೊಂಡು ಬಂದಿದ್ದಾನೆ. ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದಾಗ ಅದಕ್ಕೆ ಅಡ್ಡ ಬಂದು ನಿಲ್ಲಿಸಿ ಧಮಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದು, ಮಹಿಳೆ ಭಯದಿಂದ ಚೀರಿಕೊಂಡಿದ್ದಾರೆ. ನಂತರ ದಂಪತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ದಂಪತಿ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನೊಂದು ರೇಡ್ ರೇಜ್
ಇಂಥದೇ ಇನ್ನೊಂದು ಘಟನೆ ಕಳೆದ ವಾರ ವರದಿಯಾಗಿತ್ತು. ರಾತ್ರಿ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯರನ್ನು ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬಂದು ಪುಂಡರು ಕಿರುಕುಳ ನೀಡಿದ್ದರು. ದಾರಿಯುದ್ದಕ್ಕೂ ಚೇಸ್ ಮಾಡಿದ್ದಲ್ಲದೇ ಬೈಕ್ ಮೂಲಕ ಕಾರನ್ನು ಸುತ್ತುವರಿದು ಟಾರ್ಚರ್ ನೀಡಿದ್ದರು. ಕಿಡಿಗೇಡಿಗಳು ಮಡಿವಾಳ, ಸೆಂಟ್ ಜಾನ್ಸ್ ಅಲ್ಲಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಡಲೇ 112ಗೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಯುವತಿಯರು ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಎಸ್ಕೇಪ್ ಆಗಿದ್ದಾರೆ.
ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಇಬ್ಬರು ಯುವತಿಯರು ಕಾರಿನಲ್ಲಿ ಮಡಿವಾಳ ಕಡೆಯಿಂದ ಕೋರಮಂಗಲ ಕಡೆ ಹೊರಟಿದ್ದರು. ಆ ವೇಳೆ ಕಾರಿನಲ್ಲಿದ್ದ ಯುವತಿಯರ ಜತೆ ಜಗನ್ನಾಥ್, ತೇಜಸ್, ಮತ್ತು ಕಣ್ಣನ್ ಎಂಬುವವರು ಕಿರಿಕ್ ಶುರು ಮಾಡಿದ್ದರು. ಈ ಮೂವರು ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರನ್ನು ಹಿಂಬಾಲಿಸಿ ಕೀಟಲೆ ಮಾಡಿದ್ದಾರೆ. ಸದ್ಯ ಪೊಲೀಸರು ಜಗನ್ನಾಥ್ ಮತ್ತು ತೇಜಸ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಣ್ಣನ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ (Madivala Police station) ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Viral News: ಬಡಪಾಯಿ ರೋಗಿಯ ಮೇಲೆ ಪೌರುಷ ತೋರಿದ ಸೆಕ್ಯುರಿಟಿ ಗಾರ್ಡ್; ಹಲ್ಲೆಯ ವಿಡಿಯೊ ನೀವೂ ನೋಡಿ