Site icon Vistara News

ಬ್ಯಾಂಕಿಗೆ ನುಗ್ಗಿ 18 ಕೋಟಿ ರೂ. ದೋಚಿದ ಕಳ್ಳರು; ಇದು ರಿಯಲ್‌ ಮನಿ ಹೈಸ್ಟ್! ವಿಡಿಯೊ ನೋಡಿ

Bank Loot In Manipur

Armed men loots Rs 18.85 crore from Ukhrul Punjab National Bank In Manipur

ಇಂಫಾಲ: ಸ್ಪೇನ್ ಬ್ಯಾಂಕ್‌ಗೆ ನುಗ್ಗಿ, ವಾರಗಟ್ಟಲೆ ಅಲ್ಲೇ ಇದ್ದು, ಮೂಟೆಗಟ್ಟಲೆ ದುಡ್ಡು ದೋಚಿಕೊಂಡು ಹೋಗುವ ಮನಿ ಹೈಸ್ಟ್‌ ವೆಬ್‌ ಸಿರೀಸ್‌ಅನ್ನು (Money Heist Web Series) ನೋಡದವರೇ ಇರಲಿಕ್ಕಿಲ್ಲ. ಆದರೆ, ಇದೇ ರೀತಿ ಮಣಿಪುರದಲ್ಲಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು ಬರೋಬ್ಬರಿ 18.18 ಕೋಟಿ ರೂ. ದೋಚಿದ್ದಾರೆ. ಇವರು ಬ್ಯಾಂಕ್‌ಗೆ ನುಗ್ಗಿ, ಹಣ ದರೋಡೆ ಮಾಡುವ (Bank Loot) ವಿಡಿಯೊ (Viral Video) ಕೂಡ ಹರಿದಾಡಿದೆ. ಇದು ಮನಿ ಹೈಸ್ಟ್‌ ವೆಬ್‌ ಸಿರೀಸ್‌ಅನ್ನು ನೆನಪಿಸುತ್ತಿದೆ ಎಂದು ಜನ ಕಮೆಂಟ್‌ ಮಾಡಿದ್ದಾರೆ.

ಹೌದು, ಮಣಿಪುರದ ಉಖ್ರುಲ್‌ ಜಿಲ್ಲೆಯಲ್ಲಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬ್ರ್ಯಾಂಚ್‌ಗೆ ಗುರುವಾರ (ನವೆಂಬರ್‌ 30) ನುಗ್ಗಿದ ದರೋಡೆಕೋರರು, ಅಲ್ಲಿನ ಸಿಬ್ಬಂದಿಗೆ ಬಂದೂಕು ತೋರಿಸಿ, ಲಾಕರ್‌ಗಳಿಂದ 18.80 ಕೋಟಿ ರೂ. ಕಳ್ಳತನ ಮಾಡಿದ್ದಾರೆ. ದರೋಡೆಕೋರರು ಬ್ಯಾಂಕ್‌ಗೆ ನುಗ್ಗುತ್ತಲೇ ಮೊದಲು ಭದ್ರತಾ ಸಿಬ್ಬಂದಿಗೆ ಗನ್‌ ತೋರಿಸಿ ಹೆದರಿಸಿದ್ದಾರೆ. ಇದಾದ ಬಳಿಕ ಬ್ಯಾಂಕ್‌ ಸಿಬ್ಬಂದಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಹಣ ಕಳ್ಳತನ ಮಾಡಿದ್ದಾರೆ.

ಇಲ್ಲಿದೆ ಭೀಕರ ವಿಡಿಯೊ

ಬ್ಯಾಂಕ್‌ ವಹಿವಾಟು ಮುಗಿದ ಬಳಿಕ ಅಂದರೆ ಗುರುವಾರ ಸಂಜೆ 5.30ರ ಸುಮಾರಿಗೆ ದುಷ್ಕರ್ಮಿಗಳು ಬ್ಯಾಂಕ್‌ಗೆ ನುಗ್ಗಿದ್ದಾರೆ. ಅಷ್ಟೊತ್ತಿಗೆ ಯಾವುದೇ ಗ್ರಾಹಕರು ಇಲ್ಲದಿರುವುದನ್ನು ಮನಗಂಡೇ ಅವರು ಬ್ಯಾಂಕ್‌ ಪ್ರವೇಶಿಸಿದ್ದಾರೆ. ಇನ್ನೇನು ಸಣ್ಣಪುಟ್ಟ ಲೆಕ್ಕ ಮುಗಿಸಿ ಬ್ಯಾಂಕ್‌ ಸಿಬ್ಬಂದಿಯೂ ಹೊರಡುವವರಿದ್ದರು. ಆದರೆ, ಇದೇ ವೇಳೆ ಬ್ಯಾಂಕ್‌ಗೆ ನುಗ್ಗಿದ ಕಾರಣ ಇಡೀ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ಸಿಸಿಟಿವಿಯಲ್ಲಿ ದರೋಡೆಯ ದೃಶ್ಯಗಳು ಸೆರೆಯಾಗಿವೆ. ಒಂದಷ್ಟು ದುಷ್ಕರ್ಮಿಗಳ ಚಹರೆಯೂ ಕಾಣಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Theft Case : ರಾತ್ರೋ ರಾತ್ರಿ ಬಸ್‌ ನಿಲ್ದಾಣವೇ ಕಳ್ಳತನ! 10 ಲಕ್ಷ ರೂ. ಮೌಲ್ಯದ ವಸ್ತುಗಳು ಮಿಸ್

ಕುಕಿ ಬಂಡಕೋರರಿಂದಲೇ ದರೋಡೆ?

ಮಣಿಪುರದಲ್ಲಿ ತೀವ್ರ ಹಿಂಸಾಚಾರಕ್ಕೆ ಕಾರಣರಾಗಿರುವ ಕುಕಿ ಸಮುದಾಯದ ಬಂಡುಕೋರರೇ ಬ್ಯಾಂಕ್‌ಗೆ ನುಗ್ಗಿ ಹಣ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ. ದುಷ್ಕರ್ಮಿಗಳು ಧರಿಸಿದ ಬಟ್ಟೆ, ಅವರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಗಮನಿಸಿದರೆ, ಇವರು ಕುಕಿ ಸಮುದಾಯದವರೇ ಇರಬೇಕು ಎಂದು ಶಂಕಿಸಲಾಗಿದೆ.

ಇಂಫಾಲದಿಂದ 80 ಕಿಲೋಮೀಟರ್‌ ದೂರದಲ್ಲಿರುವ ಉಖ್ರುಲ್‌ನಿಂದಲೇ ಎಲ್ಲ ಎಟಿಎಂಗಳಿಗೆ ಹಣ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಬ್ಯಾಂಕ್‌ನಲ್ಲಿ ಹೆಚ್ಚಿನ ಹಣ ಇತ್ತು ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version