Site icon Vistara News

Punjab Bank Robbery: ಪಂಜಾಬ್‌ನಲ್ಲಿ ಬ್ಯಾಂಕ್‌ಗೆ ನುಗ್ಗಿ, ಗನ್‌ ತೋರಿಸಿ 22 ಲಕ್ಷ ರೂ. ದೋಚಿದ ಕಳ್ಳರು, ಇಲ್ಲಿದೆ ವಿಡಿಯೊ

Punjab Bank Robbery

#image_title

ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (PNB) ನುಗ್ಗಿದ ಇಬ್ಬರು ವ್ಯಕ್ತಿಗಳು, ಅಲ್ಲಿನ ಸಿಬ್ಬಂದಿಗೆ ಗನ್‌ (Punjab Bank Robbery) ತೋರಿಸಿ ೨೨ ಲಕ್ಷ ರೂ. ದರೋಡೆ ಮಾಡಿದ್ದಾರೆ. ಅಮೃತಸರದ ರಾಣಿ ಕಾ ಬಾಗ್‌ ಮೇನ್‌ ರೋಡ್‌ನಲ್ಲಿರುವ ಪಿಎನ್‌ಬಿ ಬ್ರ್ಯಾಂಚ್‌ಗೆ ನುಗ್ಗಿದ ಇಬ್ಬರು, ಗನ್‌ಪಾಯಿಂಟ್‌ನಲ್ಲಿ ದರೋಡೆ ಮಾಡಿದ್ದಾರೆ. ದರೋಡೆ ಕುರಿತ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ವಿಡಿಯೊ ವೈರಲ್‌ ಆಗಿದೆ.

ಬೈಕ್‌ ಮೇಲೆ ಬಂದ ಇಬ್ಬರು ಯುವಕರು ಗನ್‌ ಹಿಡಿದು ಬ್ಯಾಂಕ್‌ಗೆ ನುಗ್ಗಿದ್ದಾರೆ. ಇವರಲ್ಲಿ ಒಬ್ಬನು ಬಾಗಿಲ ಬಳಿ ನಿಂತರೆ, ಮತ್ತೊಬ್ಬನು ಕ್ಯಾಶಿಯರ್‌ಗೆ ಗನ್‌ ತೋರಿಸಿ, ಬ್ಯಾಗ್‌ ಕೊಟ್ಟು, ಅದಕ್ಕೆ ದುಡ್ಡು ತುಂಬು ಎಂದು ಬೆದರಿಸಿದ್ದಾನೆ. ಆತಂಕಗೊಂಡ ಕ್ಯಾಶಿಯರ್‌, ಬ್ಯಾಗ್‌ ತುಂಬ ದುಡ್ಡು ತುಂಬಿ ಕೊಟ್ಟಿದ್ದಾರೆ. ಇದಾದ ಬಳಿಕ ಇಬ್ಬರೂ ಬ್ಯಾಂಕ್‌ನಿಂದ ಪರಾರಿಯಾಗಿದ್ದಾರೆ.

ಫೆಬ್ರವರಿ ೧೫ರಂದು ಮಧ್ಯಾಹ್ನ ೧೨ ಗಂಟೆಗೆ ದರೋಡೆ ನಡೆದಿದೆ. ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮಾಡಲು ಬಂದ ವ್ಯಕ್ತಿಯೊಬ್ಬರ ಬಳಿ ಇದ್ದ ಒಂದು ಲಕ್ಷ ರೂಪಾಯಿಯನ್ನೂ ಯುವಕರು ದೋಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ ಆಡಳಿತ ಮಂಡಳಿಯು ದೂರು ನೀಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Sindagi Robbery: ಸಿಂದಗಿ ಚಿನ್ನದ ಅಂಗಡಿ ಬಳಿ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನ; ಇಬ್ಬರ ಬಂಧನ

Exit mobile version