Site icon Vistara News

Assault Case : ಗ್ರಾಪಂ ಪಿಡಿಒ ಮೇಲೆ ಹಲ್ಲೆ ಯತ್ನ, ಕೊಲೆ ಬೆದರಿಕೆ; ಗ್ರಾಮಸ್ಥರ ವಿರುದ್ಧ ದೂರು, ದಾಖಲಾಗದ FIR

Koppala PDO office and Assault case

ಕೊಪ್ಪಳ: ಕರ್ತವ್ಯ ನಿರತ ಮಹಿಳಾ ಪಿಡಿಒ (Panchayat Development Officer – PDO) ಮೇಲೆ ಹಲ್ಲೆಗೆ ಯತ್ನ (Assault case), ಕೊಲೆ ಬೆದರಿಕೆ (Death threats) ಹಾಕಿದ ಆರೋಪ ಕೇಳಿಬಂದಿದೆ. ಕೊಪ್ಪಳ‌ ಜಿಲ್ಲೆ ಕುಕನೂರು ತಾಲೂಕಿನ ಹಿರೇಬಿಡನಾಳ ಗ್ರಾಮದಲ್ಲಿ (Hirebidanala Village) ಈ ಘಟನೆ ನಡೆದಿದ್ದು, ಹಿರೇಬಿಡನಾಳ ಗ್ರಾ.ಪಂ ಪಿಡಿಒ ದೊಡ್ಡಬಸಮ್ಮ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಮುತ್ತಾಳ ಗ್ರಾಮದ ಕೆಲ ಗ್ರಾಮಸ್ಥರು ದೊಡ್ಡಬಸಮ್ಮ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಹಲ್ಲೆಗೂ ಯತ್ನ ಮಾಡಿದ್ದಾರೆ ಎಂದು ಪಿಡಿಒ ದೊಡ್ಡಬಸಮ್ಮ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಘಟನೆ?

ಮುತ್ತಾಳ ಪುನರ್ವಸತಿ ಗ್ರಾಮಕ್ಕೆ ನೀರಿನ ಸೌಲಭ್ಯ ಒದಗಿಸಲು ಪಿಡಿಒಗೆ ಒತ್ತಾಯ ಮಾಡಲಾಗಿತ್ತು. ಆದರೆ, ವಾಸ್ತವ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಾಳ ಪುನರ್ವಸತಿ ಗ್ರಾಮವು ಇನ್ನೂ ಹಸ್ತಾಂತರವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೌಲಭ್ಯ ನೀಡಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಮನವಿ ಮಾಡಿ ಸಾಕಾದ ಗ್ರಾಮಸ್ಥರು ಗ್ರಾ.ಪಂ ಕಚೇರಿಗೆ ನುಗ್ಗಿದ್ದಾರೆ. ಅಲ್ಲಿ ಪಿಡಿಒ ಮೇಲೆ ಗಲಾಟೆ ಮಾಡಿದ್ದಾರೆ. ಒಂದು ಹಂತದಲ್ಲಿ ಹಲ್ಲೆಗೆ ಯತ್ನ ಮಾಡಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: Anonymous Box : ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ 2 ಅನಾಮಧೇಯ ಬಾಕ್ಸ್‌; ಬೆಂಗಳೂರಿಂದ ಹೊರಟ ಬಾಂಬ್‌ ನಿಷ್ಕ್ರಿಯ ದಳ

ದೂರು ನೀಡಿದರೂ ದಾಖಲಾಗದ ಎಫ್‌ಐಆರ್‌

ಈ ಎಲ್ಲ ದೃಶ್ಯಾವಳಿಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀರನಗೌಡ, ವೀರಪ್ಪ, ಶರಣಪ್ಪ, ಮಂಜು, ಹಂಚಾಳಪ್ಪ ಸೇರಿ ಇತರರಿಂದ ಕೊಲೆ ಬೆದರಿಕೆ, ಹಲ್ಲೆ ಯತ್ನ ನಡೆದಿದೆ. ಇವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪಿಡಿಒ ದೊಡ್ಡಬಸಮ್ಮ ಕುಕನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಕುಕನೂರು ಪೊಲೀಸರು ಇನ್ನೂ ಎಫ್ ಐ ಆರ್ ದಾಖಲು ಮಾಡಿಲ್ಲ ಎಂದು ಹೇಳಲಾಗಿದೆ.

ಹಿಟ್‌ ಆ್ಯಂಡ್‌ ರನ್‌ಗೆ ಛಿದ್ರಗೊಂಡ ದೇಹ

ದೇವನಹಳ್ಳಿ/ಹುಬ್ಬಳ್ಳಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ (Road Accident) ಘಟನೆ ನಡೆದಿದೆ. ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ವೆಂಕಟಗಿರಿಕೋಟೆ ಸಮೀಪ ಅಪಘಾತ ನಡೆದಿದೆ. ವಡಿವೇಲು (45) ಮೃತ ದುರ್ದೈವಿ.

ಭಾನುವಾರ ಹಿನ್ನೆಲೆ ಈಶಾ ಫೌಂಡೇಶನ್‌ಗೆ ತೆರಳಲು ಬುಲೆಟ್ ಬೈಕ್‌ನಲ್ಲಿ ವಡಿವೇಲು ಹಾಗೂ ಮಧು ಎಂಬುವವರು ಹೋಗುತ್ತಿದ್ದರು. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಹಿಂಬದಿ ಕುಳಿತ್ತಿದ್ದ ವಡಿವೇಲು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್‌ ಚಲಾಯಿಸುತ್ತಿದ್ದ ಮಧು ಸಣ್ಣ-ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಿಟ್‌ ಆ್ಯಂಡ್‌ ರನ್‌ಗೆ ವ್ಯಕ್ತಿ ಬಲಿ

ಹುಬ್ಬಳ್ಳಿಯ ಸಿಮ್ಲಾನಗರ ಬೈಪಾಸ್ ಬಳಿ ಹಿಟ್‌ ಆ್ಯಂಡ್‌ ರನ್‌ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ. ವಿಜಯ ಪವಾರ (58) ಮೃತ ದುರ್ದೈವಿ. ಅಪರಿಚಿತ ವಾಹನ ಹರಿದು ವಿಜಯ ದೇಹವು ಛಿದ್ರ ಛಿದ್ರಗೊಂಡಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಾಫಿ ತೋಟಕ್ಕೆ ತೆರಳುತ್ತಿದ್ದ ಜೀಪ್‌ ಪಲ್ಟಿ

ಕಾಫಿ ತೋಟದಿಂದ‌ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್‌ನ ಟ್ರೈಲರ್ ಪಲ್ಟಿಯಾಗಿದೆ. ಅಪಘಾತದಲ್ಲಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರು ಕಾರ್ಮಿಕರಿಗೆ ಗಾಯವಾಗಿದೆ. ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ವಾಟೆಗುಂಡಿ ಗ್ರಾಮದ ಸಮೀಪ ಅಪಘಾತ ನಡೆದಿದೆ.

ಇದನ್ನೂ ಓದಿ: CM Siddaramaiah : ಈಶ್ವರಪ್ಪ ಒಂದು ಸವಕಲು ನಾಣ್ಯ, ಅವರ ಮಾತಿಗೆ ಬೆಲೆ ಕೊಡಬೇಡಿ ಎಂದ ಸಿಎಂ ಸಿದ್ದರಾಮಯ್ಯ

ಲಿಂಗಯ್ಯ (55) ಮೃತ ಕಾರ್ಮಿಕ. ಗುಲಾಬಿ ಎಂಬಾಕೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಹತ್ತು ಮಂದಿ ಕಾರ್ಮಿಕರು ಬಾಳ್ಳುಪೇಟೆ ಸಮೀಪ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮೇದಲಮಕ್ಕಿ ಗ್ರಾಮಕ್ಕೆ ಜೀಪ್‌ನಲ್ಲಿ ತೆರಳುತ್ತಿದ್ದರು. ವಾಟೆಗುಂಡಿ ಸಮೀಪ ಜೀಪ್‌ನ ಟ್ರೈಲರ್ ಮಗುಚಿ ಬಿದ್ದಿದೆ. ಸದ್ಯ ಗಾಯಾಳುಗಳಿಗೆ ಹೆಚ್ಚಿನ‌ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version