Site icon Vistara News

Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

assault case bjp worker

ಮಂಗಳೂರು: ಬಿಜೆಪಿ ಕಾರ್ಯಕರ್ತನೊಬ್ಬ (BJP Worker) ಬಟ್ಟೆ ಅಂಗಡಿಗೆ ನುಗ್ಗಿ ವಿವಾಹಿತ ಮಹಿಳೆ (Married Woman) ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕೃತ್ಯ ನಡೆದಿದೆ. ಬಿಜೆಪಿ ಕಾರ್ಯಕರ್ತ, ಹೂವಿನ ವ್ಯಾಪಾರಿ ನವೀನ್ ಕನ್ಯಾಡಿ ಎಂಬಾತನಿಂದ ಈ ಕೃತ್ಯ ನಡೆದಿದೆ.

ಹಲ್ಲೆಗೊಳಗಾದ ಮಹಿಳೆ ಧರ್ಮಸ್ಥಳದ ರೂಪಾ ಎಂಬವರು. ಇವರು ಉಜಿರೆಯಲ್ಲಿ ಬಟ್ಟೆ ಅಂಗಡಿ ಹೊಂದಿದ್ದಾರೆ. ಇವರು ನವೀನ್‌ಗೆ 7 ಲಕ್ಷ ರೂಪಾಯಿ ಸಾಲ ನೀಡಿದ್ದರು. ಅದನ್ನು ವಾಪಸ್ ಕೇಳಿದ್ದಕ್ಕೆ ನವೀನ್‌ ಹಲ್ಲೆ ನಡೆಸಿದ್ದಾನೆ. ಕಳೆದ ಎರಡು ದಿನದ ಹಿಂದೆ ಉಜಿರೆಯಲ್ಲಿರುವ ಮಹಿಳೆಯ ಬಟ್ಟೆ ಅಂಗಡಿಯಲ್ಲಿ ಘಟನೆ ನಡೆದಿದೆ.

ಮಹಿಳೆಯ ಕಪಾಳಕ್ಕೆ ಹೊಡೆಯುವುದು ಸೇರಿ ಇತರೆಡೆ ಮಾರಣಾಂತಿಕ ಹಲ್ಲೆಯನ್ನು ನವೀನ್ ಕನ್ಯಾಡಿ ಮಾಡಿದ್ದಾನೆ. ಹಲ್ಲೆಗೊಳಗಾದ ಮಹಿಳೆ ಉಜಿರೆಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡುವ ದೃಶ್ಯ ಅಂಗಡಿಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ. ಬೆಳ್ತಂಗಡಿ ಪೊಲೀಸರಿಂದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ!

ಬೆಂಗಳೂರು: ಇಂದು ಮಾಡಿದ ತಪ್ಪಿನ ಶಿಕ್ಷೆ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಅದು ಸುಳ್ಳು, ಇಂದು ಮಾಡಿದ ತಪ್ಪಿಗೆ ಶಿಕ್ಷೆ ಇದೇ ಕಾಲದಲ್ಲಿ ಸಿಗುತ್ತದೆ. ಆದರೆ ಕೆಲವರಿಗೆ ತಡವಾಗಿ ಸಿಕ್ಕರೆ, ಕೆಲವರಿಗೆ ಅಂದೇ ಸಿಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಳ್ಳನೊಬ್ಬ ಮಹಿಳೆಯೊಬ್ಬರ ಮೊಬೈಲ್ ಕದ್ದು ಓಡುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video )ಆಗಿದೆ.

ಈ ವಿಡಿಯೊವನ್ನು @Desam_officialz ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು ‘ಇದು ಭೂಮಿಯ ಮೇಲೆ ದೇವರ ತಕ್ಷಣದ ತೀರ್ಪು. ದೇವರು ಕರುಣೆ ತೋರಲಿ’ ಎಂದು ಬರೆದಿದ್ದಾರೆ. ಈ ವಿಡಿಯೊದಲ್ಲಿ ಕಳ್ಳ ಮಹಿಳೆಯಿಂದ ಕದ್ದ ಮೊಬೈಲ್ ಪೋನ್ ಅನ್ನು ತೆಗೆದುಕೊಂಡು ತಪ್ಪಿಸಿಕೊಳ್ಳಲು ಜೋರಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಆತ ಹಾರಿ ಹೋಗಿ ತುಂಬಾ ದೂರ ರಸ್ತೆಯ ಮೇಲೆ ಬಿದ್ದಿದ್ದಾನೆ. ಆದರೆ ಕಾರು ತನ್ನ ವೇಗವನ್ನು ನಿಯಂತ್ರಿಸಲಾಗದೆ ಕೆಳಗೆ ಬಿದ್ದ ಆತನ ಮೆಲೆ ಹರಿದು ನಂತರ ನಿಂತಿದೆ. ಇದರಿಂದ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಈ ಘಟನೆ ನಡೆದ ಸ್ಥಳ ಮತ್ತು ದಿನಾಂಕ ತಿಳಿದುಬಂದಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ದೇವರ ತೀರ್ಪು ಎಂದು ಹೇಳಿದರೆ. ಕೆಲವರು ‘ಬಡವರ ವಿಷಯದಲ್ಲಿ ದೇವರು ತಕ್ಷಣ ತೀರ್ಪುಗಳನ್ನು ನೀಡುತ್ತಾನೆ? ಆದರೆ ಶ್ರೀಮಂತರು ಮತ್ತು ಶಕ್ತಿವಂತರಿಗೆ ಏಕೆ ದೇವರು ತಕ್ಷಣದ ತೀರ್ಪುಗಳನ್ನು ನೀಡುತ್ತಿಲ್ಲ? ಪ್ರತಿದಿನ ಇಂತಹ ಲಕ್ಷಾಂತರ ದರೋಡೆಗಳು, ರಸ್ತೆಗಳಲ್ಲಿ ಕೊಲೆಗಳು ನಡೆಯುತ್ತಿವೆ, ಯಾವುದೇ ತಕ್ಷಣದ ತೀರ್ಪುಗಳನ್ನು ನೋಡಿಲ್ಲ, ಏಕೆ? ಎಂದು ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್ 2023 ರಲ್ಲಿ ಗುಜರಾತ್‌ ನಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಗುಜರಾತ್‌ನ ಮೊದಸಾದಲ್ಲಿ ಶೋರೂಂನಿಂದ ಕದಿಯಲು ಪ್ರಯತ್ನಿಸುತ್ತಿದ್ದ ಕಳ್ಳನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಘಟನೆಯು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

Exit mobile version