ಬೆಂಗಳೂರು: ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಯುವತಿಯೊಬ್ಬಳು ಸಾರ್ವಜನಿಕವಾಗಿ ಕೋಲಾಹಲ (drunken misconduct) ಸೃಷ್ಟಿಸಿದ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡುರಾತ್ರಿ ನಡೆದಿದೆ. ತುಂಡುಡುಗೆ ಧರಿಸಿದ್ದ ಹಾಗೂ ಕುಡಿದು ಚಿತ್ ಆಗಿದ್ದ ಈಕೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಪ್ರಶ್ನಿಸಿದ ಆಟೋ ಚಾಲಕನ ಮೇಲೆ ಹಲ್ಲೆ (Assault Case) ನಡೆಸಿದ್ದಾಳೆ.
ಆಟೋ ಡ್ರೈವರ್ ನಿಶಾಂತ್ ಎಂಬವರು ಬೀದಿಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ. ಮಾನ ಮುಚ್ಚುವಷ್ಟೇ ಬಟ್ಟೆ ಧರಿಸಿದ್ದ ಯುವತಿ ಕುಡಿದು ತೂರಾಡುತ್ತ ನಡು ರಸ್ತೆಯಲ್ಲೇ ಯುವಕನಿಗೆ ಥಳಿಸಿದ್ದಾಳೆ. ಪರಿಪರಿಯಾಗಿ ಆಕೆಗೆ ಬುದ್ಧಿ ಹೇಳಿ ತಡೆಯಲು ಯತ್ನಿಸಿದರೂ ಆಕೆ ನಿಲ್ಲಿಸಿಲ್ಲ.
ಕಂಠ ಪೂರ್ತಿ ಕುಡಿದು ರಸ್ತೆ ಮಧ್ಯೆ ಅಡ್ಡಾದಿಡ್ಡಿ ಕಾರ್ ಓಡಿಸುತ್ತ ಬಂದ ಯುವತಿಗೆ. ಸರಿಯಾಗಿ ಚಲಾಯಿಸುವಂತೆ ಆಟೋ ಡ್ರೈವರ್ ಬುದ್ಧಿ ಹೇಳಿದ್ದಾನೆ. ಇದರಿಂದ ರೇಗಿ ಬಾಯಿಗೆ ಬಂದಂತೆ ಬೈದಿರುವ ಯುವತಿ, ಕಾರ್ ನಿಲ್ಲಿಸಿ ಆಟೋ ಅಡ್ಡಗಟ್ಟಿ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ.
ಆಟೋ ಚಾಲಕನ ಕೆನ್ನೆಗೆ ಬಾರಿಸಿ, ಮೈಕೈ ಪರಚಿ ಗಾಯಪಡಿಸಿರುವ ಯುವತಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈಕೆಯ ವರ್ತನೆ ದಾರಿಹೋಕರ ವಿಡಿಯೋದಲ್ಲಿ ದಾಖಲಾಗಿದೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಹೈಫೈ ಸೊಸೈಟಿಯ ಯುವಕ/ಯುವತಿಯರು ಕಂಠಪೂರ್ತಿ ಕುಡಿದು ರಸ್ತೆಗೆ ಬಂದು ಅಡ್ಡಾದಿಡ್ಡಿ ಕಾರು- ಬೈಕು ಚಲಾಯಿಸುತ್ತ ನ್ಯೂಸೆನ್ಸ್ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫ್ಯಾಶನ್ ಡಿಸೈನರ್ ಪ್ರಸಾದ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಇದೇ ರೀತಿ ಡ್ರಾಮಾ ಸೃಷ್ಟಿಸಿ ಸುದ್ದಿಯಾಗಿದ್ದ.
ಬ್ಯಾಂಕ್ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದ ಕಿಲಾಡಿ ಕಳ್ಳಿ
ಬೆಂಗಳೂರು: ಎಚ್‌ಎಎಲ್ ಪೊಲೀಸರು (HAL Police) ಕಾರ್ಯಾಚರಣೆ ನಡೆಸಿ ಕಿಲಾಡಿ ಕಳ್ಳಿಯನ್ನು (Theft Case) ಬಂಧಿಸಿದ್ದಾರೆ. ಹೋಟೆಲ್, ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್‌ಟಾಪ್‌ಗಳನ್ನು (Laptop Theft) ಜೆಸ್ಸಿ ಅಗರ್ ವಾಲ್ ಎಂಬಾಕೆ ಕದಿಯುತ್ತಿದ್ದಳು.
ಹೋಟೆಲ್, ಪಿಜಿಗಳಲ್ಲಿ ರೂಂ ಪಡೆಯುವ ಈ ಖತರ್ನಾಕ್ ಲೇಡಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದಳು. ಹೋಟೆಲ್ ಹಾಗೂ ಪಿಜಿಯಲ್ಲಿರವವರು ಟಿಫಿನ್, ಊಟಕ್ಕೆ ತೆರಳಿದ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಲ್ಯಾಪ್‌ಟಾಪ್ ಕದ್ದು ಎಸ್ಕೇಪ್ ಆಗುತ್ತಿದ್ದಳು.
ಇನ್ನೂ ಈಕೆ ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೆಲಸ ಬಿಟ್ಟು ಕೋರಮಂಗಲ, ಇಂದಿರಾನಗರ, ಎಚ್‌ಎಎಲ್ ಸುತ್ತಮುತ್ತ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದಳು. ಸದ್ಯ ಲ್ಯಾಪ್‌ಟಾಪ್ ಕಳ್ಳಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬಂಧಿತಳಿಂದ 10 ಲಕ್ಷ ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಸೀಜ್ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪಿಜಿಗಳಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೋರಮಂಗಲ, ಎಚ್ಎಎಲ್, ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದಾಳೆ. ಪಿಜಿಯಲ್ಲಿದ್ದವರು ತಿಂಡಿ, ಕಾಫಿಗೆ ಹೋದಾಗ ತನ್ನ ಕೈಚಳಕ ತೋರುತ್ತಿದ್ದಳು.
ಜೆಸ್ಸಿ ಅಗರ್ ವಾಲ್ ಮೂಲತಃ ರಾಜಸ್ಥಾನದವಳು. ಈ ಮುಂಚೆ ಬ್ಯಾಂಕ್‌ವೊಂದರಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು. ನಂತರ ಲ್ಯಾಪ್ ಟಾಪ್ ಕಳ್ಳತನಕ್ಕೆ ಇಳಿದಿದ್ದಳು. ಆಕೆಯನ್ನ ಬಂಧಿಸಿ 24 ಲ್ಯಾಪ್ ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಇದನ್ನೂ ಓದಿ: Road Accident : ನಿಂತಿದ್ದ ಟ್ಯಾಂಕರ್‌ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲೇ ಸಾವು