ಮುಂಬಯಿ : ಬಾಡಿಗೆ ಸರಿಯಾಗಿ ಪಾವತಿ ಮಾಡಿಲ್ಲ ಎಂದು ಕಂಠ ಪೂರ್ತಿ ಕುಡಿದಿದ್ದ ಪ್ರಯಾಣಿಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 25 ವರ್ಷದ ಆಟೋರಿಕ್ಷಾ ಚಾಲಕನನ್ನು ಮುಂಬಯಿ ಪೊಲೀಸರು ಬಂದಿಸಿದ್ದಾರೆ. ಸ್ಥಳೀಯ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು ಆಟೋ ಚಾಲಕ ಯುವಕನ ಮೊಬೈಲ್ ಫೋನ್ ಮತ್ತು ಎಟಿಎಂ ಕಾರ್ಡ್ ಕೂಡ ತೆಗೆದುಕೊಂಡು ಹೋಗಿದ್ದಾನೆ ಎಂದು ದೂರು ದಾಖಲಾಗಿದೆ.
ಘಾಟ್ಕೋಪರ್ನಲ್ಲಿ ಶನಿವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ 31 ವರ್ಷದ ಯುವಕನೊಬ್ಬ ಆಟೋರಿಕ್ಷಾವನ್ನು ಹತ್ತಿದ್ದ. ಇಳಿಯವಾಗ ಆತ ಸರಿಯಾಗಿ ಹಣ ಕೊಟ್ಟಿರಲಿಲ್ಲ. ಗಲಾಟೆ ನಡೆದು ಆಟೋರಿಕ್ಷಾ ಚಾಲಕ ಆತನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕನಿಗೆ ಆತನನ್ನು ಎಲ್ಲಿ ಕರೆದುಕೊಂಡು ಹೋಗಿದ್ದ ಎಂಬುದೂ ಕೂಡ ನೆನಪಿಲ್ಲ ಎಂಬುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಿಕ್ಷಾ ಹತ್ತಿದ ಒಂದು ಗಂಟೆಯ ಬಳಿಕ ಯುವಕ ಇಳಿಯಬೇಕೆಂದು ಹೇಳಿದ್ದ. ಚಾಲಕ 250 ರೂ ಬಾಡಿಗೆ ಪಾವತಿಸುವಂತೆ ಕೇಳಿದ್ದ. ಪ್ರಯಾಣಿಕ ಅವನಿಗೆ 100 ರೂ. ನೋಟನ್ನು ಕೊಟ್ಟಿದ್ದ. ಈ ವೇಳೆ ವಾಗ್ವಾದ ನಡೆದಿತ್ತು. ಕೋಪಗೊಂಡ ಚಾಲಕ ಆ ವ್ಯಕ್ತಿಯನ್ನು ಬಲವಂತವಾಗಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ : Karwar Accident: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
ವಾಪಸ್ ಬರುವಾಗ ಯುವಕನನ್ನು ಎಟಿಎಂ ಬಳಿಗೆ ಕರೆದೊಯ್ದು ಉಳಿದ 200 ರೂಪಾಯಿ ವಿತ್ಡ್ರಾ ಮಾಡಿಸಿ ಕಸಿದುಕೊಂಡಿದ್ದ. ಅಲ್ಲದೆ ಆತನ ಮೊಬೈಲ್ ಫೋನ್ ಮತ್ತು ಎಟಿಎಂ ಕಾರ್ಡ್ ಅನ್ನು ತೆಗೆದುಕೊಂಡು ಹೋಗಿದ್ದ.
ಮಂಗಳವಾರ ಯುವಕ ಪೊಲೀಸರನ್ನು ಸಂಪರ್ಕಿಸಿ, ಘಟನೆಯಿಂದ ಮುಜುಗರಕ್ಕೊಳಗಾಗಿದ್ದರಿಂದ ತನ್ನ ಮೊಬೈಲ್ ಫೋನ್ ಅನ್ನು ಮಾತ್ರ ಹಿಂತಿರುಗಿಸಬೇಕೆಂದು ಕೋರಿಕೊಂಡಿದ್ದ. ಆದಾಗ್ಯೂ, ಪೊಲೀಸರು ಭಾರತೀಯ ದಂಡ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ), 394 (ದರೋಡೆ ಮಾಡುವಾಗ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಬಳಿಕ ಚಾಲಕನನ್ನು ಬಂಧಿಸಿದ್ದಾರೆ.