Site icon Vistara News

Watch Video: ಕಾರು ಪಾರ್ಕ್‌ ಮಾಡುವಾಗ ಹುಷಾರ್! ಈ ಮಗುವಿನಂತೆ ಮತ್ತೊಂದು ಮಗುವಿಗೆ ಆಗದಿರಲಿ

Baby Death

ಅಹಮದಾಬಾದ್: ಚಿಕ್ಕಮಕ್ಕಳು ಇದ್ದಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಪ್ರತಿನಿತ್ಯ ಮಕ್ಕಳ ಸಾವಿನ (Baby Death) ಕುರಿತ ಒಂದಿಲ್ಲೊಂದು ಸುದ್ದಿ ಕೇಳಿರುತ್ತೇವೆ. ಅಂಥಹದ್ದೇ ಒಂದು (watch video) ಘಟನೆ ಅಹಮದಾಬಾದ್ ನ ನೆಹರು ನಗರದ ಹೌಸಿಂಗ್ ಸೊಸೈಟಿಯ ಪಾರ್ಕಿಂಗ್ ಏರಿಯಾದಲ್ಲಿ ನಡೆದಿದೆ. ಒಂದು ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ಕಾರೊಂದು ಹರಿದು ಸ್ಥಳದಲ್ಲೇ ಮಗು ಸಾವನಪ್ಪಿದ ಘಟನೆ ನಡೆದಿದೆ.

ಶುಕ್ರವಾರ ಏಪ್ರಿಲ್ 12ರಂದು ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದಾರುಣ ದೃಶ್ಯ ಸೆರೆಯಾಗಿದೆ. ಕಾರನ್ನು ಪಾರ್ಕಿಂಗ್ ಏರಿಯಾದಿಂದ ರಿವರ್ಸ್ ತೆಗೆದುಕೊಳ್ಳುತ್ತಿರುವಾಗ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಅಹಮದಾಬಾದ್ ನ ಅಂಬಾವಾಡಿ ಪ್ರದೇಶದ ನಿವಾಸಿ ಕನಕ್ ಲಿಡಿಯಾ(45) ಎಂಬುವವರನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಾವನಪ್ಪಿದ ಬಾಲಕಿ ಹೌಸಿಂಗ್ ಸೊಸೈಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮಹಾವೀರ್ (26) ರವರ ಮಗಳು ಎಂಬುದಾಗಿ ತಿಳಿದುಬಂದಿದೆ. ಈತ ತನ್ನ ಪತ್ನಿ ಮತ್ತು ಮಗಳ ಜೊತೆ ಹೌಸಿಂಗ್ ಸೊಸೈಟಿಯ ಒಂದು ಕೋಣೆಯಲ್ಲಿ ವಾಸವಾಗಿದ್ದ. ಈ ದಂಪತಿಗಳಿಗೆ ಇನ್ನೊಬ್ಬ ಮಗಳಿದ್ದು, ಅವಳು ನೇಪಾಳದಲ್ಲಿ ವಾಸಿಸುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಕಾರು ಚಾಲಕನು ತನ್ನ ಕಾರನ್ನು ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದಾಗ ಮಗು ಒಂದು ಕಡೆ ಆಟವಾಡುತ್ತಿತ್ತು. ಆದರೆ ನಂತರ ಕಾರನ್ನು ಆತ ರಿವರ್ಸ್ ತೆಗೆದುಕೊಳ್ಳುತ್ತಿರುವಾಗ ಮಗು ತೆವಳಿಕೊಂಡು ಕಾರಿನ ಮುಂದಿನ ಎಡಬದಿಯ ಟೈರ್ ನ ಮುಂದೆ ಬಂದಿತ್ತು. ಈ ವೇಳೆ ಮಗುವನ್ನು ಗಮನಿಸದ ಚಾಲಕ ಕಾರನ್ನು ಚಲಾಯಿಸಿದ. ಇದರ ಪರಿಣಾಮ ಕಾರು ಮಗುವಿನ ತಲೆಯ ಮೇಲೆ ಹರಿದು ಮಗುವಿನ ತಲೆ ಚಕ್ರಕ್ಕೆ ಸಿಲುಕಿ ಛಿದ್ರವಾಗಿದೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

ಚಿಕ್ಕಮಕ್ಕಳನ್ನು ಹೊರಗೆ ಆಟವಾಡುವುದಕ್ಕೆ ಬಿಟ್ಟು ಯಾವುದಾದರು ಕೆಲಸದಲ್ಲಿ ಬ್ಯುಸಿಯಾಗಬೇಡಿ. ಯಾವ ಕ್ಷಣದಲ್ಲಿ ಅಪಾಯ ಎದುರಾಗುತ್ತದೆಯೋ ಎಂಬುದು ಗೊತ್ತಾಗುವುದಿಲ್ಲ. ಬಾಳಿ ಬದುಕಬೇಕಿರುವ ಮಕ್ಕಳು ಇಂತಹ ಅವಘಡಕ್ಕೆ ಈಡಾಗುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

Exit mobile version