Site icon Vistara News

Rave party: ಬೆಂಗಳೂರು ರೇವ್‌ ಪಾರ್ಟಿ ಕೇಸ್‌; ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆದ ತೆಲುಗು ನಟಿ ಹೇಮಾ!

Bangalore rave party case Hema got locked up to give build up infront of Police

ಬೆಂಗಳೂರು: ಮೇ 19ರ ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್‌ ಪಾರ್ಟಿಗೆ (Rave party) ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ (Telugu actress Hema) ಅವರು ಪೊಲೀಸರ ಮುಂದೆ ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ನಾನು ತೆಲುಗಿನ ಫೇಮಸ್‌ ನಟಿ ಎಂದು ಹೇಳಿಕೊಂಡಿದ್ದೇ ಅವರಿಗೆ ಮುಳುವಾಗಿದೆ ಎನ್ನಲಾಗಿದೆ.

ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಸಿಕ್ಕಿರುವ ಕೇಸ್‌ನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಎರಡು ದಿನ ಎಗ್ಗಿಲ್ಲದೆ ಪಾರ್ಟಿ ನಡೆದಿದೆ. ಹೀಗಾಗಿ ಆ ಜೋಶ್‌ನಲ್ಲಿದ್ದ ನಟಿ ಹೇಮಾ ಅವರು ಪೊಲೀಸರು ದಾಳಿ ಮಾಡಿದ ವೇಳೆ ತಮ್ಮ ಬಗ್ಗೆ ಹೇಳಿಕೊಂಡು ಸರಿಯಾಗಿ ಸಿಕ್ಕಿಬಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ತಾವು ದೊಡ್ಡ ಹಳ್ಳ ತೋಡಿ ಬಚಾವ್‌ ಆಗುತ್ತೇನೆ ಎಂದು ಮಾಡಿದ ಪ್ಲ್ಯಾನ್‌ ಫ್ಲಾಪ್‌ ಆಗಿದ್ದು, ಆ ಹಳ್ಳಕ್ಕೆ ಅವರೇ ಬಿದ್ದಂತೆ ಆಗಿದೆ.

ಅಸಲಿಗೆ ಸಿಸಿಬಿ ಪೊಲೀಸರಿಗೆ ಹೇಮಾ ಒಬ್ಬರು ನಟಿ ಎಂಬುದೇ ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರನ್ನು ವಿಚಾರಣೆ ನಡೆಸುವಂತೆಯೇ ಹೇಮಾರನ್ನೂ ವಿಚಾರಿಸುತ್ತಿದ್ದರು. ಈ ವೇಳೆ ಪೊಲೀಸರರ ಮುಂದೆ ಹೇಮಾ ನಾನು ದೊಡ್ಡ ನಟಿ ಇದ್ದೇನೆ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆಗ ಪೊಲೀಸರು ಪರಿಶೀಲನೆ ಮಾಡಿದಾಗ ಆಕೆ ನಟಿ ಅನ್ನೋದು ಗೊತ್ತಾಗಿದೆ.

ಕಿರಿಕ್‌ ಮಾಡಿದ್ದ ನಟಿ ಹೇಮಾ

ಜಿಆರ್ ಫಾರ್ಮ್ ಹೌಸ್‌ನಲ್ಲಿ ಶನಿವಾರ ರಾತ್ರಿಯಿಂದಲೇ ರೇವ್ ಪಾರ್ಟಿ ಶುರುವಾಗಿತ್ತು ಎಂಬುದು ಗೊತ್ತಾಗಿದೆ. ಒಂದು ದಿನ ಪಾರ್ಟಿ ಆದ ಬಳಿಕ ಸಿಸಿಬಿ ಪೊಲೀಸರಿಗೆ ವಿಚಾರ ತಿಳಿದು ರೈಡ್ ಮಾಡಲಾಗಿದೆ‌. ಇದರ ಜತೆಗೆ ಸಿಸಿಬಿ ಪೊಲೀಸರೊಂದಿಗೆ ನಟಿ ಹೇಮಾ ಕಿರಿಕ್ ಮಾಡಿದ್ದಾರೆ. ವಿಚಾರಣೆಗೆಂದು ಪೊಲೀಸರು ಇರಿಸಿಕೊಂಡಿದ್ದಾಗ ಕಿರಿಕ್ ತೆಗೆದು, ನನಗೆ ಸರಿಯಾದ ಊಟ ಕೊಟ್ಟಿಲ್ಲ. ನಾನೊಬ್ಬ ನಟಿ ಸರಿಯಾಗಿ ಟ್ರೀಟ್ ಮಾಡಿ ಎಂದು ಆಕ್ರೋಶ ಹೊರಹಾಕಿದ್ದರು ಎಂದು ತಿಳಿದುಬಂದಿದೆ.

ರೇವ್‌ ಪಾರ್ಟಿ ಕೇಸ್‌; ಹೆಬ್ಬಗೋಡಿ ಠಾಣೆಯ ಎಎಸ್‌ಐ ಸೇರಿ ಮೂವರ ಸಸ್ಪೆಂಡ್‌

ಬೆಂಗಳೂರು: ಮೇ 19ರ ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್‌ ಪಾರ್ಟಿಗೆ (Rave party) ಸಂಬಂಧಪಟ್ಟಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿನ ಎಎಸ್ಐ ಸೇರಿ ಮೂವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇದೇ ವೇಳೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ ಬಾಲದಂಡಿ ಚಾರ್ಜ್ ಮೆಮೋ‌ ನೀಡಿದ್ದು, ಇಷ್ಟೆಲ್ಲ ಆಗುತ್ತಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೆ ಕಾರಣ ನೀಡಿ ಎಂದು ವಿವರಣೆಯನ್ನು ಕೇಳಿದ್ದಾರೆ. ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ ಅವರ ಉತ್ತರ ಆಧರಿಸಿ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಠಾಣೆಯ ಎಸ್.ಬಿ. ಗಿರೀಶ್, ಎಎಸ್ಐ ನಾರಾಯಣ ಸ್ವಾಮಿ ಮತ್ತು ಬೀಟ್ ಕಾನ್ಸ್‌ಟೇಬಲ್ ದೇವರಾಜು ಅಮಾನತಾದವರು. ಸಿಸಿಬಿ ಪೊಲೀಸರಿಗೆ ಸಿಕ್ಕ ಮಾಹಿತಿ ಸ್ಥಳೀಯ ಪೊಲೀಸರಿಗೆ ಯಾಕೆ ಇರಲಿಲ್ಲ ಎಂದು ಪ್ರಶ್ನೆ ಮಾಡಲಾಗಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

ರೇವ್‌ ಪಾರ್ಟಿಯಲ್ಲಿ ತೆಲುಗು ನಟಿಯರಾದ ಹೇಮಾ (Telugu actress Hema) ಹಾಗೂ ಆಶಿ ರಾಯ್ (Aashi Roy) ಒಳಗೊಂಡಂತೆ 103 ಮಂದಿ ಭಾಗಿಯಾಗಿದ್ದರು. ಇಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅಷ್ಟೂ ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಈಗ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 86 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದೆ. ನಟಿಯರಾದ ಹೇಮಾ ಹಾಗೂ ಆಶಿ ರಾಯ್‌ ಸಹ ಮಾದಕ ವಸ್ತುಗಳನ್ನು ಸೇವಿಸಿದ್ದಾರೆಂಬುದು ಸಾಬೀತಾಗಿವೆ ಎನ್ನಲಾಗಿದೆ.

ಈಗಾಗಲೇ ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ. 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದರೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿದ್ದಾರೆ.

ವಾಸು ಎಂಬಾತನ ಬರ್ತ್‌ ಡೇ ಪಾರ್ಟಿಗಾಗಿ ಏರ್ಪಡಿಸಲಾಗಿದ್ದ ಈ ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು.

Sunset To Sun Rise victory ಶೀರ್ಷಿಕೆಯಲ್ಲಿ ಈ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ಸುಮಾರು ನೂರೈವತ್ತು ಮಂದಿ ಸೇರಿದ್ದರು. ಪೊಲೀಸ್‌ ದಾಳಿ ವೇಳೆ ಕೆಲವರು ತಪ್ಪಿಸಿಕೊಂಡು ಓಡಿದ್ದರು. ಆದರೆ, ಬಹುತೇಕ ಮಂದಿ ಸಿಕ್ಕಿಬಿದ್ದಿದ್ದರು. ಈಗ ಸಿಕ್ಕಿಬಿದ್ದವರಲ್ಲಿ ಬಹುತೇಕರ ಬ್ಲಡ್ ರಿಪೋರ್ಟ್‌ನಲ್ಲಿ ಮಾದಕ ವಸ್ತು ಸೇವನೆ ಸಂಬಂಧ ಪಾಸಿಟಿವ್ ಅಂಶ ಪತ್ತೆಯಾಗಿದೆ. ಹೀಗಾಗಿ ಪಾಸಿಟಿವ್‌ ರಿಪೋರ್ಟ್‌ ಬಂದವರಿಗೆ ಸಿಸಿಬಿ ನೋಟಿಸ್ ನೀಡಲಿದ್ದು, ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ.

ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ್ದ ಹೇಮಾ!

ಈ ರೇವ್‌ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿದ್ದಂತೆ ವಿಡಿಯೊವೊಂದನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದ ಹೇಮಾ, ನಾನು ಆ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಲೇ ಇಲ್ಲ. ಹೈದರಾಬಾದ್‌ನ ಫಾರ್ಮ್‌ ಹೌಸ್‌ನಲ್ಲಿದ್ದೇನೆ ಎಂದು ವಿಡಿಯೊ ಸಂದೇಶವನ್ನು ಹರಿಬಿಟ್ಟಿದ್ದರು. ಆದರೆ, ಮುಜುಗರ ತಪ್ಪಿಸಲು ಅವರು ಅದೇ ಫಾರಂ ಹೌಸ್‌ನ ಒಂದು ಕಡೆ ಬಂದು ವಿಡಿಯೊ ಮಾಡಿದ್ದಾರೆ ಎಂದು ಹಲವರು ಅಂದೇ ಹೇಳಿದ್ದರು. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್‌ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹಲವರು ವಾದಿಸಿದ್ದರು. ಈಗ ಈ ಸಂಬಂಧ ಪೊಲೀಸರಿಗೆ ಬಂದಿರುವ ರಿಪೋರ್ಟ್‌ ವೈರಲ್‌ ಆಗಿದ್ದು, ಅವರು ಸಹ ಮಾದಕ ವಸ್ತು ಸೇವನೆ ಮಾಡಿರುವುದು ಸಾಬೀತಾಗಿದೆ ಎಂದು ತಿಳಿದುಬಂದಿದೆ.

ಕಮೋಡ್‌ನಲ್ಲಿ ಫ್ಲಶ್‌ ಮಾಡಿದರು!

ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದರು. ಡ್ರಗ್ಸ್‌ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದರು.. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಫಾರ್ಮ್ ಹೌಸ್‌ನ ಇಂಚಿಂಚನ್ನೂ ಜಾಲಾಡಿದ್ದರು.

3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಅಂದೇ ಪೊಲೀಸರು ಬಂಧಿಸಿದ್ದರು. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಎಂಟ್ರಿಗೆ ಪಾಸ್‌ವರ್ಡ್‌ ನೀಡಿದ್ದ ವಾಸು

ಪಾರ್ಟಿ ಆಯೋಜಕ, ಆರೋಪಿ ವಾಸು ಪೊಲೀಸರಿಂದ ಬಚಾವಾಗಲು ʼನಾನು ಪಾರ್ಟಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದಿದ್ದೇನೆಂದುʼ ಸುಳ್ಳು ಹೇಳಿಕೆ ನೀಡಿದ್ದ. ಆದರೆ, ಫಾರ್ಮ್ ಹೌಸ್ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಪಾರ್ಟಿಗೆ ಬಂದವರು ಫಾರ್ಮ್ ಹೌಸ್ ಒಳಗೆ ಹೋಗಬೇಕಾದರೆ ಸೆಕ್ಯೂರಿಟಿಗೆ ಪಾಸ್ ವರ್ಡ್ ಹೇಳಬೇಕಿತ್ತು. ವಾಸು ನೀಡಿದ ಪಾಸ್‌ವರ್ಡ್ ಹೇಳಿದರೆ ಮಾತ್ರ ಒಳಗೆ ಎಂಟ್ರಿಯಾಗಬಹುದಿತ್ತು. ಡ್ರಗ್ ಪಾರ್ಟಿ ಹಿನ್ನೆಲೆಯಲ್ಲಿ ಬೇರೆ ಯಾರೂ ಬಾರದಿರಲಿ ಎಂಬ ಕಾರಣಕ್ಕೆ ವಾಸು ಪಾಸ್‌ವರ್ಡ್ ನೀಡಿದ್ದ.

ಮಾದಕ ವಸ್ತುಗಳ ವಶಕ್ಕೆ

ಫಾರಂ ಹೌಸ್‌ನಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಎಂಡಿಎಂಎ, ಕ್ಯಾಪ್ಸೂಲ್, ಕೊಕೇನ್ ಇತ್ಯಾದಿ ಮಾದಕ ವಸ್ತುಗಳು ದೊರೆತಿದ್ದವು. 45 ಗ್ರಾಂನಷ್ಟು ಡ್ರಗ್ ವಶಕ್ಕೆ ಪಡೆಯಲಾಗಿತ್ತು. 1 ಗ್ರಾಂ ಕೊಕೇನ್‌ಗೆ 8ರಿಂದ 9 ಸಾವಿರ ರೂ. ದರವಿದೆ. ಇಂತಹ ಕೊಕೇನ್ ಭಾರಿ ಪ್ರಮಾಣದಲ್ಲಿ ಪಾರ್ಟಿಯಲ್ಲಿ ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಡ್ರಗ್ಸ್‌ನ ಮೌಲ್ಯ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ.

ಇದನ್ನೂ ಓದಿ: Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್‌

ನಟಿ ಆಶಿ ರಾಯ್ ಹೇಳಿದ್ದೇನು?

ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಶಿ ರಾಯ್‌ ಸಹ ವಿಡಿಯೊವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ʻʻಅದೊಂದು ಬರ್ತ್‌ಡೇ ಪಾರ್ಟಿಯಾಗಿತ್ತು. ಒಳಗೆ ಏನು ನಡೀತಿತ್ತು ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲ ನನ್ನ ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿರುವ ಹುಡುಗಿ. ದಯವಿಟ್ಟು ನನಗೆ ಸಹಾಯ ಮಾಡಿʼʼ ಎಂದು ವಿಡಿಯೊವನ್ನು ಹಂಚಿಕೊಂಡಿದ್ದರು. ಆಶಿ ರಾಯ್‌ ಹಲವು ಸಂದರ್ಶನದಲ್ಲಿ ಪಾರ್ಟಿಯಲ್ಲಿ ಹೇಮಾ ಅವರನ್ನು ನೋಡಿಲ್ಲ ಎಂದಿದ್ದಾರೆ. ಆಶಿರಾಯ್‌ ಅವರು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

Exit mobile version