ಬೆಂಗಳೂರು: ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಕೇಸ್ ದಾಖಲಿಸಲಾಗಿದೆ. ಹಾವು ಮತ್ತು ಅವುಗಳ ವಿಷವನ್ನು ಸರಬರಾಜು ಮಾಡುತ್ತಿದ್ದ ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿನ ವಿವಿಧ ಫಾರ್ಮ್ ಹೌಸ್‌ಗಳಲ್ಲಿ ಈ ಪಾರ್ಟಿಗಳನ್ನು ಆಯೋಜಿಸಲಾಗಿತ್ತು ಎಂದು ಐವರು ವ್ಯಕ್ತಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಎಲ್ವಿಶ್ ಯಾದವ್ ಅವರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೊಗಳನ್ನು ಶೂಟ್ ಮಾಡಲು ಹಾವುಗಳನ್ನು ಬಳಸಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್(32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿದೆ.
ವಿದೇಶಿ ಪ್ರಜೆಗಳಿಗೂ ಆತಿಥ್ಯ ನೀಡಿದ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಲ್ವಿಶ್ ಯಾದವ್ ಸೇರಿದಂತೆ ಆರು ಮಂದಿಯ ಹೆಸರುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರು ಆರೋಪಿಗಳ ಪೈಕಿ ಐವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ, ಆದರೆ ಎಲ್ವಿಶ್ ಯಾದವ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದರು. ಆರೋಪಿಯಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳು ಹಾಗೂ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದ್ದು, ಹಾವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ
We are always with you support.
— Sneha (@Sneha27176088) November 3, 2023
pta nhi kya kya krte hai yai log kisiki tarakki nhi dekhskte #Elvisha #Elvishaians #ElvishYadav #ManishaRani #BoleroFtElvisha pic.twitter.com/haqcLtPhf1
ಪ್ರಾಣಿ ರಕ್ಷಣಾ ಎನ್‌ಜಿಒ ದೂರಿನ ಮೇರೆಗೆ ನವೆಂಬರ್ 2ರ ಸಂಜೆ ನೋಯ್ಡಾದಲ್ಲಿ ಸೆಕ್ಟರ್ 49ರಲ್ಲಿ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ ನಂತರ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು.. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ‘ಬಿಗ್ ಬಾಸ್ OTT’ ಸೀಸನ್-2 ಗೆದ್ದ ನಂತರ ಎಲ್ವಿಶ್ ಯಾದವ್ ಖ್ಯಾತಿ ಗಳಿಸಿದರು.