ಜೈಪುರ: ಬಿಜೆಪಿಯ ನಾಯಕರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಭರತಪುರದಲ್ಲಿ ನಡೆದಿದೆ. ಹತ್ಯೆಗೀಡಾದ ನಾಯಕ ಭರತಪುರದ ಸಂಸದೆ ರಂಜೀತಾ ಕೋಲಿ ಅವರ ನಿಕಟವರ್ತಿ ಕಿರ್ಪಾಲ್ ಸಿಂಗ್ (Kirpal Singh). ಭಾನುವಾರ ರಾತ್ರಿ ಸರ್ಕ್ಯೂಟ್ ಹೌಸ್ನಿಂದ ಕಿರ್ಪಾಲ್ ಸಿಂಗ್ ಅವರು ತಮ್ಮ ಮನೆಗೆ ಕಾರಿನಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ಹಂತಕರು ಯಾರೆಂದು ಗೊತ್ತಾಗಿಲ್ಲ. ಎರಡು ಬೈಕ್ ಮತ್ತು ಕಾರುಗಳಲ್ಲಿ ಆಗಮಿಸಿದ್ದ ಅವರು, ಕಿರ್ಪಾಲ್ ಸಿಂಗ್ ಅವರ ಕಾರ್ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಕಿರ್ಪಾಲ್ ಅವರ ದೇಹಕ್ಕೆ ಏಳು ಗುಂಡುಗಳು ಹೊಕ್ಕಿವೆ. ಅವರನ್ನು ಹತ್ತಿರದ ಆರ್ಬಿಎಂ ಹಾಸ್ಪಿಟಲ್ಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅವರು ದಾರಿ ಮಧ್ಯೆಯೇ ಅಸುನೀಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂಸದೆ ರಂಜೀತಾ ಕೋಲಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.
ಈ ಹತ್ಯೆ ಘಟನೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ. ಹಂತಕರನ್ನು ಹುಡುಕಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಮಥುರಾ ಗೇಟ್ ಪೊಲೀಸ್ ಸ್ಟೇಷನ್ ಮುಖ್ಯಾಧಿಕಾರಿ ರಾಮನಾಥ್ ಸಿಂಗ್ ಅವರು ತಿಳಿಸಿದ್ದಾರೆ. ಕೊಲೆ ಹಿಂದೆ ಗ್ಯಾಂಗ್ ವಾರ್ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ | ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮೂವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಸಾಯಿಸಿದ ಪೊಲೀಸ್