Site icon Vistara News

Blackmaling woman : ಸೋಷಿಯಲ್‌ ಮೀಡಿಯಾದಲ್ಲಿ ಚಂದದ ಫೋಟೊ ಹಾಕೋ ಹೆಂಗಸರೇ ಈ ಕಾಮುಕ ಟೆಕ್ಕಿಯ ಟಾರ್ಗೆಟ್‌

Blackmailer arrested

ಬೆಂಗಳೂರು: ಇವನೊಂಥರಾ ವಿಚಿತ್ರ ಕಾಮುಕ. ಇವನಿಗೆ ಮದುವೆಯಾಗದ ಹೆಣ್ಮಕ್ಕಳೆಂದರೆ (Unmarried girls) ಅಲರ್ಜಿ. ಆದರೆ, ಮದುವೆಯಾಗಿರುವ, ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ (Active in Social Media), ಚಂದ ಚಂದದ ಫೋಟೊ ಹಾಕುವ ವಿವಾಹಿತ ಹೆಣ್ಮಕ್ಕಳೇ ಇವನ ಟಾರ್ಗೆಟ್‌ (Married woman his target). ಸೋಷಿಯಲ್‌ ಮೀಡಿಯಾದಲ್ಲಿ ಕನೆಕ್ಟ್‌ ಆಗಿ ಅವರ ಅಂದಚಂದವನ್ನು ಹೊಗಳಿ ಹತ್ತಿರವಾಗುತ್ತಿದ್ದ ಆತ ಮುಂದೇನು ಮಾಡ್ತಿದ್ದ ಅಂತ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ (Blackmailing woman! ನಿಮಗೆ ಸೋಷಿಯಲ್‌ ಮೀಡಿಯಾದಲ್ಲಿ ಅಟ್ರಾಕ್ಟಿವ್‌ ಫೋಟೊ ಹಾಕಿಕೊಂಡು ಬೇರೆಯವರ ಕಮೆಂಟ್‌, ಹೊಗಳಿಕೆಗೆ ಕಾಯೋ ಮನಸ್ಥಿತಿ ಇದ್ದರೆ ಈ ವರದಿಯನ್ನು ಅವಶ್ಯವಾಗಿ ಓದಲೇಬೇಕು!

ಅವನ ಹೆಸರು ಫೈಸಲ್.‌ ಇವನು ಅಸ್ಸಾಂ ಮೂಲದವನು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ (Software Engineer from Assam). ಅಸ್ಸಾಂನಿಂದ ಬಂದು ಬೆಂಗಳೂರಿನಲ್ಲಿ ಆರಾಮವಾಗಿರುವ ಅವನು ಮಾಡಿಕೊಂಡಿರುವ ಇನ್ನೊಂದು ಕೆಲಸವೇನೆಂದರೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಯಾರೆಲ್ಲ ಚಂದದ ಫೋಟೊ ಹಾಕ್ತಾರೆ ಅಂತ ಗಮನಿಸುತ್ತಿದ್ದ. ಮೊದಲು ಅವನು ನೋಡುತ್ತಿದ್ದುದು ಅವರು ಸಿಂಗಲಾ ಅಥವಾ ಮದುವೆಯಾಗಿದೆಯಾ ಅಂತ.

ಮದುವೆಯಾಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಚಂದದ ಫೋಟೊಗಳನ್ನು ಹಾಕುತ್ತಿದ್ದಾರೆ ಎಂದರೆ ಅವರು ಅಪ್ರೆಸಿಯೇಷನ್‌ ಬಯಸುತ್ತಿದ್ದಾರೆ. ಅವರನ್ನು ಬಲೆಗೆ ಹಾಕಿಕೊಳ್ಳುವುದು ಸುಲಭ ಎಂದು ಆತ ಸಂಶೋಧನೆ ಮಾಡಿದ್ದ. ಹಾಗೆ ಫೋಟೊ ಕಂಡ ಕೂಡಲೇ ನಕಲಿ ಅಕೌಂಟ್‌ನಿಂದ ಅವರಿಗೆ ಕನೆಕ್ಟ್‌ ಅಗುತ್ತಿದ್ದ. ಮೊದಲು ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುತ್ತಿದ್ದ. ಒಮ್ಮೆ ಕನೆಕ್ಟ್‌ ಆದ ಕೂಡಲೇ ಗುಡ್‌ ಮಾರ್ನಿಂಗ್‌, ಗುಡ್‌ನೈಟ್‌ ಮೆಸೇಜ್‌ ಕಳುಹಿಸುತ್ತಿದ್ದ. ಫೋಟೊಗಳ ಗುಣಗಾನ ಮಾಡುತ್ತಿದ್ದ.

ಇದನ್ನೂ ಓದಿ: Fraud Case : ಚೀಟಿ ಕಟ್ಟಿಸಿಕೊಂಡು ಕೋಟಿಗಟ್ಟಲೆ ಚೀಟಿಂಗ್ ಮಾಡಿದ ಖತರ್ನಾಕ್‌ ಫ್ಯಾಮಿಲಿ

ಒಮ್ಮೆ ಮಾತಿಗೆ ಶುರುವಾಯಿತು ಎಂದರೆ ಹೆಣ್ಮಕ್ಕಳ ಸ್ವಾತಂತ್ಯದ ಬಗ್ಗೆ, ಗಂಡಸರ ದೌರ್ಜನ್ಯದ ಬಗ್ಗೆ ಮಾತನಾಡುತ್ತಿದ್ದ. ಆಗ ಹೆಣ್ಮಕ್ಕಗಳು ಓಪನ್‌ ಅಪ್‌ ಆಗುತ್ತಾರೆ ಅನ್ನೋದನ್ನು ಅವನು ಕಂಡುಕೊಂಡಿದ್ದ. ಎಲ್ಲ ಹೆಂಗಸರು ಅಷ್ಟು ಸುಲಭದಲ್ಲಿ ಸಿಗುವುದಿಲ್ಲ ಎನ್ನುವುದು ಕೂಡಾ ಅವನಿಗೆ ಗೊತ್ತಿತ್ತು. ಹಾಗಾಗಿ ಯಾರು ಮಾತಿಗೆ ಮರುಳಾಗುತ್ತಾರೋ ಅವರ ಜತೆ ಸಲುಗೆ ಮುಂದುವರಿಸುತ್ತಿದ್ದ!

ಹೀಗೆ ಆತ್ಮೀಯತೆ, ಸಾಂತ್ವನದ ಮೂಲಕ ಅವರ ಸ್ನೇಹ ಸಂಪಾದಿಸುತ್ತಿದ್ದ ಆತ ಫ್ರೆಂಡ್‌ ಆಗಿಬಿಡುತ್ತಿದ್ದ. ಬಳಿಕ ಮೀಟ್‌ ಆಗೋಣ ಅನ್ನುತ್ತಿದ್ದ. ಅದರ ನಡುವೆ ಮಾತಿನಲ್ಲಿ Textನಲ್ಲಿ ಕೆರಳಿಸೋ ಆಟ ನಡೆಯುತ್ತಿತ್ತು. ಅದಕ್ಕೆ ಪೂರಕವಾಗಿ ಸ್ಪಂದಿಸುವವರನ್ನೇ ಅವನು ಕರೆಯುತ್ತಿದ್ದ. ಹಾಗೆ ಬಂದವರನ್ನು ತನ್ನ ಖಾಸಗಿ ಜಾಗಕ್ಕೆ ಕರೆದುಕೊಂಡು ಹೋಗಿ ಸರಸದಾಟ ಆಡುತ್ತಿದ್ದ.

ಅಲ್ಲಿನ ಚಟುವಟಿಕೆಗಳನ್ನೆಲ್ಲ ಸರಿಯಾಗಿ, ಯಾರಿಗೂ ಗೊತ್ತಾಗದಂತೆ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದ. ತನ್ನ ಕೆಲಸ ಮುಗಿಸಿ ಅವರನ್ನು ಬೀಳ್ಕೊಡುತ್ತಿದ್ದ. ಕೆಲವರು ಆಮೇಲೆ ನಿರಂತರವಾಗಿ ಸಂಪರ್ಕದಲ್ಲಿರುತ್ತಿದ್ದರೆ ಮತ್ತೆ ಕೆಲವರು ಇನ್ನು ಸಾಕು ಅನ್ನುತ್ತಿದ್ದರು. ಅಂಥವರಿಗೆಲ್ಲ ತಾನು ಮಾಡಿಟ್ಟುಕೊಂಡ ವಿಡಿಯೊವನ್ನು ಕಳುಹಿಸಿ ಬಾರದೆ ಇದ್ದರೆ ವೈರಲ್‌ ಮಾಡುತ್ತೇನೆ ಎಂದು ತಣ್ಣಗೆ ಹೆದರಿಸುತ್ತಿದ್ದ. ಕೆಲವು ಕಾಲ ದೈಹಿಕ ಕಾಮನೆಗಳನ್ನು ಈಡೇರಿಸಿಕೊಂಡ ಬಳಿಕ ಶುರುವಾಗುತ್ತಿದ್ದುದೇ ನಿಜವಾದ ಅಸಲಿ ಆಟ. ಹೌದು, ಅವನು ಆಮೇಲೆ ಹಣಕ್ಕಾಗಿ ಬೇಡಿಕೆ ಇಡಲು ಶುರು ಮಾಡುತ್ತಿದ್ದ!

ನಾನು ಇನ್ನು ಮುಂದೆ ನೀನು ಕರೆದಲ್ಲಿಗೆ ಬರಲ್ಲ, ಹಣಾನೂ ಕೊಡಲ್ಲ ಎಂದು ಯಾರಾದರೂ ಹೇಳಿದರೆ ಅವರ ವಿಡಿಯೊಗಳನ್ನು ಅವರಿಗೇ ಕಳುಹಿಸಿ, ಇದನ್ನು ಗಂಡನಿಗೆ ಕಳುಹಿಸುತ್ತೇನೆ, ಫ್ರೆಂಡ್ಸ್‌ಗೆ ಹೇಳುತ್ತೇನೆ ಎಂದು ಬೆದರಿಸುತ್ತಿದ್ದ. ಸಾಕಷ್ಟು ಮಹಿಳೆಯರು ಈತನ ಈ ಜಾಲಕ್ಕೆ ಸಿಲುಕಿ ಮಾನ ಮತ್ತು ಹಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕೊನೆಗೂ ಸಿಕ್ಕಿಬಿದ್ದ ಕಾಮುಕ

ಇದೀಗ ಎಚ್‌ಎಸ್‌ಆರ್ ಬಡಾವಣೆಯ ಮಹಿಳೆಯೊಬ್ಬರು ಈತನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಮಹಿಳೆಯ ಮೂಲಕ ಅವನಿಗೆ ಒಂದು ಮೆಸೇಜ್‌ ಕಳುಹಿಸಿದ್ದಾರೆ. ಎಲ್ಲಿಗೆ ಬರಬೇಕು ಹೇಳು ಎಂದು ಕೇಳಿದ್ದಾರೆ.

ಆಗ ಈ ಕಾಮುಕ ಆಕೆಯನ್ನು ಚೆನ್ನೈನ ಒಂದು ಲಾಡ್ಜ್‌ಗೆ ಬರುವುದಕ್ಕೆ ಹೇಳಿದ್ದಾನೆ. ಮಹಿಳೆ ಬರುತ್ತಾಳೆ ಎಂದು ಕಾದು ಕೂತಿದ್ದವನಿಗೆ ಎದುರಾಗಿದ್ದು ಬೆಂಗಳೂರು ಪೊಲೀಸ್‌. ಇದೀಗ ಪೊಲೀಸರು ಆತನನ್ನು ಹಿಡಿದು ಕಟ್ಟಿಹಾಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಆತನ ಮೊಬೈಲ್‌ ಚೆಕ್‌ ಮಾಡುವಾಗ ಇನ್ನೂ ಹಲವರಿಗೆ ಆತ ಬ್ಲ್ಯಾಕ್‌ಮೇಲ್‌ ಮಾಡಿದ್ದು ಬಯಲಾಗಿದೆ.

Exit mobile version