ರಾಮನಗರ/ಹಾವೇರಿ: ನಾಡಬಾಂಬ್ ಸಿಡಿದು (Bomb Blast) ವ್ಯಕ್ತಿಯೊಬ್ಬರ ಕೈ ಛಿದ್ರಗೊಂಡಿದೆ. ರಾಮನಗರದ ಕನಕಪುರ ತಾಲೂಕಿನ ನೇರಳಹಳ್ಳಿದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೋಲಾರ ಮೂಲದ ನೌಷದ್ ಪಾಷ (29) ಗಾಯಗೊಂಡವರು.
ನೌಷದ್ ಪಾಷ ಅವರು ನೇರಳೆದೊಡ್ಡಿ ಗ್ರಾಮದ ರೈಸ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ರೈಸ್ ಮಿಲ್ ಹಿಂದೆಯೇ ಚೆಂಡಿನ ರೀತಿಯ ವಸ್ತುವೊಂದು ಬಿದ್ದಿತ್ತು. ಇದನ್ನು ಕಂಡ ನೌಷದ್ ನಾಡಬಾಂಬ್ ಎಂದು ತಿಳಿಯದೇ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಈ ವೇಳೆ ನಾಡಬಾಂಬ್ ಸ್ಫೋಟಗೊಂಡಿದೆ.
ಸ್ಪೋಟದ ತೀವ್ರತೆಗೆ ನೌಷದ್ ಪಾಷರ ಕೈ ಛಿದ್ರಗೊಂಡಿದೆ. ಕೂಡಲೇ ಅಲ್ಲಿದ್ದವರು ನೌಷದ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಘಟನಾ ಸ್ಥಳದಲ್ಲಿ ಮತ್ತೆರಡು ನಾಡಬಾಂಬ್‌ಗಳು ಪತ್ತೆ ಆಗಿವೆ. ಕಾಡು ಹಂದಿ ಹೊಡೆಯಲು ನಾಡಬಾಂಬ್ ಇಟ್ಟಿದ್ದರು ಎನ್ನಲಾಗಿದೆ.
ಜೀವಂತ ನಾಡಬಾಂಬ್ ಪತ್ತೆ!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಪೊಲೀಸರ ಕಾರ್ಯಚರಣೆ ನಡೆಸಿ 7 ಜೀವಂತ ನಾಡಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅರಣ್ಯ ಪ್ರದೇಶದಲ್ಲಿ 7 ಜೀವಂತ ನಾಡಬಾಂಬ್ ಇರಿಸಲಾಗಿತ್ತು. ದುರ್ಗಪ್ಪ ತುರಬಿಗುಡ್ಡ(50 ) ಎಂಬಾತ ಬಾಂಬ್ ಇಟ್ಟಿದ್ದಕ್ಕೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಕಾಡು ಹಂದಿ ಭೇಟಿಯಾಡುವ ಉದ್ದೇಶದಿಂದ ಕುಸನೂರು ಅರಣ್ಯ ಪ್ರದೇಶದಲ್ಲಿ ನಾಡಬಾಂಬ್‌ಗಳನ್ನು ಇಡಲಾಗಿತ್ತು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ