Site icon Vistara News

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

Bribe Case

ಜೋಧ್‌ಪುರ: ಕೆಲವು ವರ್ಷಗಳ ಹಿಂದೆ ಕಸ ಗುಡಿಸುವ (sweeper) ಕೆಲಸ ಮಾಡುತ್ತಿದ್ದು, ಬಳಿಕ ರಾಜಸ್ಥಾನ (Rajasthan) ಆಡಳಿತ ಸೇವೆ (RAS) ಪರೀಕ್ಷೆಯಲ್ಲಿ (Exam) ಉತ್ತೀರ್ಣರಾಗಿ ಸುದ್ದಿಯಾಗಿದ್ದ ಆಶಾ ಕಂದರ (ಭಾಟಿ) (Asha Kandara) ಈಗ ಮತ್ತೆ ಗಮನ ಸೆಳೆದಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಿರುವುದು ಲಂಚ (Bribe Case) ಪಡೆದಿರುವುದರಿಂದ. ಭಾರೀ ಲಂಚ ಪಡೆದು ಉದ್ಯೋಗ ದಂಧೆ ನಡೆಸುತ್ತಿದ್ದ ಆಶಾ ಅವರನ್ನು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (state Anti-Corruption Bureau) ಬಂಧಿಸಿದೆ. ವಿಶೇಷವೆಂದರೆ ಅವರು ಕಸ ಗುಡಿಸುವ ಕೆಲಸ ಕೊಡಿಸುವಾಗಿ ಲಂಚ ಪಡೆದು ಸಿಕ್ಕಿ ಬಿದ್ದಿದ್ದಾರೆ.

ರಾಜ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದ ಅವರ ಈ ಕ್ರಮಕ್ಕೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ. ಜೂನ್ 12ರಂದು ರಾತ್ರಿ ಭ್ರಷ್ಟಾಚಾರ ನಿಗ್ರಹ ದಳವು 1.75 ಲಕ್ಷ ರೂಪಾಯಿ ಲಂಚದೊಂದಿಗೆ ಆಶಾ ಅವರನ್ನು ಬಂಧಿಸಿದೆ ಎಂದು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಜೈಪುರದ ಹೆರಿಟೇಜ್ ನಗರ ನಿಗಮದಲ್ಲಿ ಕೆಲಸ ಮಾಡುತ್ತಿರುವ ಆಶಾ ಅವರು ಸ್ವೀಪರ್ ನೇಮಕಾತಿಗೆ ಬದಲಾಗಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಎಸಿಬಿಗೆ ಲಭಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ.


ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಪ್ರಕಾರ, ಆಶಾ ಅವರು ಜೂನ್ 11ರಂದು ರಾತ್ರಿ ಜೈಪುರದಿಂದ ಪಾಲಿಗೆ ಹೊರಟರು. ಆದರೆ ಅವರ ಮಗ ಹಣದೊಂದಿಗೆ ಜೈತರನ್‌ಗೆ ಬಂದಿದ್ದು, ಈತನೊಂದಿಗೆ ಯೋಗೇಂದ್ರ ಚೌಧರಿ ಎಂಬ ಬ್ರೋಕರ್ ಕೂಡ ಇದ್ದರು. ಜೈತರನ್ ಬಾರ್‌ನ ಹೃದಯಭಾಗದಲ್ಲಿರುವ ಹೊಟೇಲ್ ವೊಂದರಲ್ಲಿ ಇಬ್ಬರೂ ತಂಗಿದ್ದರು.
ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಇನ್ಸ್‌ಪೆಕ್ಟರ್ ಕಾಂಚನ್ ಭಾಟಿ ಅವರು 1.75 ಲಕ್ಷ ರೂ. ನಗದು ಹಣದೊಂದಿಗೆ ಆಶಾ ಅವರನ್ನು ಬಂಧಿಸಲಾಗಿದೆ. ಅವರು ಮೂರೂವರೆ ಲಕ್ಷಕ್ಕೆ ಉದ್ಯೋಗ ಒಪ್ಪಂದ ಮಾಡಿಕೊಂಡಿರುವುದಾಗಿ ಎಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಆಶಾ 2018ರಲ್ಲಿ ಪ್ರಮುಖ ಆರ್‌ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನಂತರ ಸುದ್ದಿಯಾಗಿದ್ದರು. 2021ರಲ್ಲಿ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಒಂಟಿ ತಾಯಿಯಾದ ಆಶಾ ಅವರು ಐಎಎಸ್ ಪರೀಕ್ಷೆಗಳಿಗೆ ತಯಾರಾಗುವುದಾಗಿ ಹೇಳಿದ್ದರು.

ವಿದ್ಯುತ್ ಶಾಕ್ ನಿಂದ ಬಾಲಕ ಸಾವು

ವಿದ್ಯುತ್ ಶಾಕ್‌ನಿಂದ 7ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಆಕಾಶ್ (13) ಮೃತ ದುರ್ದೈವಿ.

ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಆಕಾಶ್ ಮರ ಹತ್ತಿದ್ದ. ಈತನ ಜತೆಗೆ ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಹಣ್ಣು ಕೀಳುವಾಗ ಆಕಾಶ್‌ ಮರದಿಂದ ಜಾರಿ ಬೀಳುತ್ತಿದ್ದ. ಈ ವೇಳೆ ಅಚಾನಕ್‌ ಆಗಿ ವಿದ್ಯುತ್ ತಂತಿ ಹಿಡಿದಿದ್ದಾನೆ. ಇದರಿಂದ ಕರೆಂಟ್‌ ಶಾಕ್‌ ಆಗಿ ಆತ ಕೆಳಗೆ ಬಿದ್ದಿದ್ದಾನೆ.

ಕೂಡಲೇ ಅಲ್ಲಿದ್ದವರು ಆಕಾಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version