ರಾಯ್‌ಪುರ ಮಾತನಾಡಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಛತ್ತೀಸ್‌ಗಢದ ಕೊಬ್ರಾ ಜಿಲ್ಲೆಯಲ್ಲಿ ಬಸ್ ಕಂಡಕ್ಟರ್ ಒಬ್ಬ 20 ವರ್ಷದ ಯುವತಿಗೆ 51 ಬಾರಿ ಸ್ಕ್ರ್ಯೂಡ್ರೈವರ್‌ನಿಂದ (Chhattisgarh Murder) ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆ ನಡೆಸಿದ ಬಳಿಕ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
“ಡಿಸೆಂಬರ್ 24ರಂದು ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL)ನ ಪಂಪ್ ಹೌಸ್ ಕಾಲೊನಿಯಲ್ಲಿರುವ ಯುವತಿಯ ಮನೆಗೆ ಆಗಮಿಸಿದ ಬಸ್ ಕಂಡಕ್ಟರ್, ಯುವತಿ ಜತೆ ವಾಗ್ವಾದ ನಡೆಸಿದ್ದಾನೆ. ಇಷ್ಟಾದರೂ ಯುವತಿಯು ಮಾತನಾಡಲು ನಿರಾಕರಿಸಿದ್ದ ಕಾರಣಕ್ಕಾಗಿ ಸ್ಕ್ರ್ಯೂಡ್ರೈವರ್‌ನಿಂದ ಇರಿದಿದ್ದಾನೆ. ಇದಕ್ಕೂ ಮೊದಲು ಕೂಡ ಯುವತಿ ಹಾಗೂ ಆಕೆಯ ಕುಟುಂಬಸ್ಥರಿಗೆ ವ್ಯಕ್ತಿಯು ಬೆದರಿಕೆ ಹಾಕಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.
“ವ್ಯಕ್ತಿ ಮನೆಗೆ ಬಂದಾಗ ಮನೆಯಲ್ಲಿ ಯುವತಿಯೊಬ್ಬಳೇ ಇದ್ದಳು. ಆಕೆಯ ಜತೆ ವಾಗ್ವಾದ ನಡೆಸುತ್ತಲೇ ಕುಪಿತಗೊಂಡ ಆತ ಯುವತಿಯ ಮುಖಕ್ಕೆ ತಲೆದಿಂಬಿನಿಂದ ಒತ್ತಿ, ಸ್ಕ್ರ್ಯೂಡ್ರೈವರ್‌ನಿಂದ ಸುಮಾರು 51 ಬಾರಿ ಇರಿದಿದ್ದಾನೆ. ಆತನನ್ನು ಬಂಧಿಸಲು ತಂಡ ರಚಿಸಲಾಗಿದೆ” ಎಂದು ಕೊಬ್ರಾ ನಗರ ಎಸ್‌ಪಿ ವಿಶ್ವದೀಪಕ್ ತ್ರಿಪಾಠಿ ತಿಳಿಸಿದ್ದಾರೆ.
ಇದನ್ನೂ ಓದಿ | ಕಿರಿ ಕಿರಿ ಬಗ್ಗೆ ಪೋಷಕರಿಗೆ ದೂರು ನೀಡಿದ್ದ ಬಾಲಕಿಗೆ ಚೂರಿ ಇರಿದು ಹತ್ಯೆ