Site icon Vistara News

ಸಂಬಳ ಕೊಡಿ ಮೇಡಂ ಎಂದು ‘ದಲಿತ’ ಸೇಲ್ಸ್‌ ಮ್ಯಾನೇಜರ್‌ ಕೇಳಿದ್ದಕ್ಕೆ ತನ್ನ ಬೂಟು ನೆಕ್ಕಿಸಿದ ಬಾಸ್!

Gujarat News

Businesswoman forces sacked sales manager to lick her boots In Gujarat

ಗಾಂಧಿನಗರ: ಒಂದು ಕಂಪನಿಯಲ್ಲಿ ಹಲವು ವರ್ಷದರೆ ಮಾಡಿದರೆ ಆ ಕಂಪನಿಯಲ್ಲಿ ವಿವಿಧ ಭಾವನೆಗಳು ಇರುತ್ತವೆ. ನಾವು ಕೆಲಸ ಮಾಡಿದ ಕಂಪನಿ ಎಂಬ ಭಾವನೆ ಇರುತ್ತದೆ. ಹಾಗೆಯೇ, ಕಂಪನಿ ಬಿಟ್ಟು ಹೋದಾಗ, ಇದುವರೆಗೆ ದುಡಿದಿದ್ದಕ್ಕೆ ಎಲ್ಲ ಹಣ (ಫೈನಲ್‌ ಸೆಟಲ್‌ಮೆಂಟ್)‌ ಬರಲಿ ಎಂಬ ಆಸೆಯೂ ಇರುತ್ತದೆ. ಹೀಗೆ, ಗುಜರಾತ್‌ನಲ್ಲಿ ಸೇಲ್ಸ್‌ ಮ್ಯಾನೇಜರ್‌ ಒಬ್ಬರು ತಾವು ಕೆಲಸ ಮಾಡಿದ ಕಂಪನಿಯ ಬಾಸ್‌ಗೆ, “ಸಂಬಳ ಕೊಡಿ ಮೇಡಂ” ಎಂದು ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳಾ ಉದ್ಯಮಿಯು, ಸೇಲ್ಸ್‌ ಮ್ಯಾನೇಜರ್‌ನಿಂದ ತಮ್ಮ ಬೂಟು ನೆಕ್ಕಿಸಿದ್ದಾರೆ. ಐವರನ್ನು ಛೂಬಿಟ್ಟು ಸೇಲ್ಸ್‌ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿಸಿದ್ದಾರೆ. ಸೇಲ್ಸ್‌ ಮ್ಯಾನೇಜರ್‌ ದಲಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಗುಜರಾತ್‌ನ ಮೊರ್ಬಿಯಲ್ಲಿರುವ ಸೆರಾಮಿಕ್‌ ಕಂಪನಿಯ ಮುಖ್ಯಸ್ಥೆಯಾಗಿರುವ ವಿಭೂತಿ ಪಟೇಲ್‌ ಎಂಬುವರು ದಲಿತ ಸೇಲ್ಸ್‌ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿಸಿದ್ದಾರೆ. ನೀಲೇಶ್‌ ದಲ್ಸಾನಿಯಾ ಅವರು ವಿಭೂತಿ ಪಟೇಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ, ನೀಲೇಶ್‌ ದಲ್ಸಾನಿಯಾ ಅವರನ್ನು ವಿಭೂತಿ ಪಟೇಲ್‌ ವಜಾಗೊಳಿಸಿದ್ದಾರೆ. ಇದಾದ ಬಳಿಕ ನೀಲೇಶ್‌ ದಲ್ಸಾನಿಯಾ ಅವರು ಕಂಪನಿಗೆ ಹೋಗಿ, ಕೆಲಸ ಮಾಡಿದ 18 ದಿನದ ಸಂಬಳ ಕೊಡಿ ಮೇಡಂ ಎಂದು ಮನವಿ ಮಾಡಿದ್ದಾರೆ.

ಸಂಬಳ ಕೇಳಿದ ಕಾರಣ ನೀಲೇಶ್‌ ದಲ್ಸಾನಿಯಾ ಅವರಿಂದ ವಿಭೂತಿ ಪಟೇಲ್‌ ಅವರು ತಮ್ಮ ಬೂಟು ನೆಕ್ಕಿಸಿದ್ದಾರೆ. ಅಲ್ಲದೆ, ಐವರು ಸಹಾಯಕರನ್ನು ಕರೆಸಿ, ನೀಲೇಶ್‌ ದಲ್ಸಾನಿಯಾ ಅವರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಅಲ್ಲದೆ, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ, ಅದರ ವಿಡಿಯೊ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ದೌರ್ಜನ್ಯಕ್ಕೀಡಾದ ನೀಲೇಶ್‌ ದಲ್ಸಾನಿಯಾ ಅವರು ವಿಭೂತಿ ಪಟೇಲ್‌ ಸೇರಿ ಹಲವರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಓಂ ಪಟೇಲ್‌, ರಾಜ್‌ ಪಟೇಲ್‌, ಪರಿಕ್ಷಿತ್‌ ಹಾಗೂ ಡಿ.ಡಿ. ರಾಬರಿ ಸೇರಿ ಹಲವರ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

ಇದನ್ನೂ ಓದಿ: Farmer Suicide: ಮರಕ್ಕೆ ಕಟ್ಟಿ ಥಳಿತ, ಅವಮಾನ ತಾಳದೆ ರೈತ ಆತ್ಮಹತ್ಯೆ

ರಾಣಿಬಾ ಇಂಡಸ್ಟ್ರೀಸ್‌ ಮುಖ್ಯಸ್ಥೆಯಾಗಿರುವ ವಿಭೂತಿ ಪಟೇಲ್‌ ಅವರಿಂದ ನೀಲೇಶ್‌ ದಲ್ಸಾನಿಯಾ ಅವರಿಗೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ. ಸದ್ಯ, ನೀಲೇಶ್‌ ದಲ್ಸಾನಿಯಾ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್‌ 5ರಂದು ಬಾಕಿ ಇರುವ ಸಂಬಳ ನೀಡಲಾಗುವುದು ಎಂದು ನೀಲೇಶ್‌ ದಲ್ಸಾನಿಯಾ ಅವರಿಗೆ ಹೇಳಲಾಗಿತ್ತು. ಆದರೆ, ದುಡ್ಡು ಜಮೆಯಾಗದ ಕಾರಣ ನೀಲೇಶ್‌ ದಲ್ಸಾನಿಯಾ ಅವರು ವಿಭೂತಿ ಪಟೇಲ್‌ ಅವರಿಗೆ ಮೆಸೇಜ್‌ ಕೂಡ ಮಾಡಿದ್ದರು. ಇದಕ್ಕೆ ವಿಭೂತಿ ಪಟೇಲ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version