Site icon Vistara News

Cake Tragedy: ಆನ್‌ಲೈನ್ ಆರ್ಡರ್ ಕೇಕ್ ತಿಂದು ಬಾಲಕಿ ಸಾವು ಪ್ರಕರಣ; ಆರೋಗ್ಯ ಸಚಿವರ ಬೇಜವಾಬ್ದಾರಿ ಪ್ರತಿಕ್ರಿಯೆ

cake

ದೆಹಲಿ: ಹುಟ್ಟು ಹಬ್ಬದಂದು ಬೇಕರಿಯೊಂದರಿಂದ ಆನ್ ಲೈನ್ ಮೂಲಕ ತರಿಸಲಾಗಿದ್ದ ಕೇಕ್ (Cake Tragedy) ತಿಂದು ಹತ್ತು ವರ್ಷದ ಬಾಲಕಿ ಸಾವನ್ನಪ್ಪಿದ ಪ್ರಕರಣ ಸಾರ್ವಜನಿಕರನ್ನು ತಲ್ಲಣಗೊಳಿಸಿದೆ. ಪಂಜಾಬ್‌ನ ಪಟಿಯಾಲದಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಬಾಲಕಿಯ ಸಾವಿನ ತನಿಖೆಗೆ ಆದೇಶಿಸಿದ್ದಾರೆ.

ಆದರೆ ಈ ಪ್ರಕರಣವನ್ನು ಪಂಜಾಬ್‌ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಮೇಲ್ನೋಟಕ್ಕೆ ಆಹಾರ ವಿಷಪೂರಿತವಾಗಿತ್ತು ಎಂದು ಕಂಡುಬಂದಿಲ್ಲ. ಕೇಕ್ ತಿಂದ ಒಂದೇ ಮಗು ಸತ್ತಿದ್ದು ಹೇಗೆ? ಇತರರೂ ಕೇಕ್ ಸೇವಿಸಿದ್ದರು. ಕೆಲವರಿಗೆ ವಾಂತಿಯಾಗಿದೆ ಎಂದು ಹೇಳಲಾಗಿದೆ. ಆದರೆ ಹಾಳಾದ ಕೇಕ್ ಒಬ್ಬರ ಪ್ರಾಣ ತೆಗೆದಿದೆ ಮತ್ತು ಉಳಿದವರಿಗೆ ಆಸ್ಪತ್ರೆಗೆ ಹೋಗುವ ಅಗತ್ಯವೂ ಬಂದಿಲ್ಲ ಎಂಬುದು ಹೇಗೆ ಸಾಧ್ಯ ಎಂದೂ ಸಚಿವರು ಹೇಳಿದ್ದಾರೆ. ಉಳಿದದ್ದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಆಹಾರ ಸುರಕ್ಷತೆ ಮತ್ತು ಫೋರೆನ್ಸಿಕ್ ವರದಿಗಳೆರಡನ್ನೂ ಪರಿಶೀಲಿಸಿದಾಗ ನಿಜಾಂಶ ತಿಳಿದುಬರಲಿದೆ ಎಂದು ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಹೇಳಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

10 ವರ್ಷದ ಬಾಲಕಿ ಮಾನ್ವಿಯ ಹುಟ್ಟುಹಬ್ಬಕ್ಕೆ ಪೋಷಕರು ಆನ್ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಗಿತ್ತು. ಕೆಲವೇ ಹೊತ್ತಲ್ಲಿ ಕೇಕ್ ತಿಂದವರು ಅಸ್ವಸ್ಥಗೊಂಡಿದ್ದರು. ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಮಾನ್ವಿ ಸ್ವಲ್ಪ ಹೆಚ್ಚಾಗಿಯೇ ಕೇಕ್ ತಿಂದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಬಾಲಕಿ ಮೃತಪಟ್ಟಿದ್ದಳು.

ಬಾಲಕಿಯ ಸಾವಿನ ಕುರಿತು ಕೂಲಂಕುಷ ತನಿಖೆಗೆ ಆದೇಶಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ರಾಜ್ಯದ ಆಹಾರ ಸುರಕ್ಷತಾ ಪ್ರಯೋಗಾಲಯದಿಂದ ಕೇಕ್ ಅನ್ನು ಪರೀಕ್ಷೆಗೆ ಒಳಪಡಿಸುವಂತೆ ಆಹಾರ ಸುರಕ್ಷತಾ ಇಲಾಖೆಗೆ ಸೂಚಿಸಿದ್ದಾರೆ.

ಬಾಲಕಿಯ ಸಾವು ನೋವುಂಟುಮಾಡಿದೆ

“ಮುಗ್ಧ ಹುಡುಗಿಯ ಸಾವಿನ ಬಗ್ಗೆ ನಾನು ತುಂಬಾ ಬೇಸರಗೊಂಡಿದ್ದೇನೆ ಮತ್ತು ಹುಟ್ಟಿದ ಹಬ್ಬದ ದಿನವೇ ಸಾವನ್ನಪ್ಪಿರುವುದು ತೀವ್ರ ನೋವುಂಟುಮಾಡಿದೆ. ಮಕ್ಕಳ ಜೀವ ಅಮೂಲ್ಯ. ಯಾವುದೇ ಕುಟುಂಬ ಮಕ್ಕಳನ್ನು ಕಳೆದುಕೊಂಡರೆ ದುಃಖವಾಗುತ್ತದೆ. ಈ ಘಟನೆಯ ಕುರಿತು ವಿಸ್ತೃತ ತನಿಖೆ ನಡೆಸಿ ವರದಿಯನ್ನು ಆದಷ್ಟು ಬೇಗ ನನಗೆ ಸಲ್ಲಿಸುವಂತೆ ಇಲಾಖೆಗೆ ಆದೇಶಿಸಿದ್ದೇನೆ” ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:Shivamogga News: ತುಂಗಾ ನದಿಯಲ್ಲಿ ಮುಳುಗಿ ಮೂವರು ಬಾಲಕರ ಸಾವು; ಈಜಲು ಹೋಗಿದ್ದಾಗ ದುರ್ಘಟನೆ

“ಆಹಾರ ಸುರಕ್ಷತಾ ಪ್ರಯೋಗಾಲಯವು ಕೇಕ್‌ನಲ್ಲಿ ಯಾವುದೇ ರೀತಿಯ ವಿಷವಿತ್ತೇ ಎಂಬುದನ್ನು ಪರಿಶೀಲಿಸುತ್ತದೆ. ಅಲ್ಲದೆ, ವಿಧಿವಿಜ್ಞಾನ ಪ್ರಯೋಗಾಲಯದಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ. ಉಳಿದ ಕೇಕ್ ಅನ್ನು ಕುಟುಂಬದವರು ಅಧಿಕಾರಿಗಳಿಗೆ ನೀಡಿದ್ದರು. ಕುಟುಂಬದವರೊಂದಿಗೆ ಮಾತನಾಡಿದ್ದೇನೆ. ನಾವು ಎಲ್ಲವನ್ನೂ ಪರೀಕ್ಷಿಸುತ್ತೇವೆ” ಎಂದು ಸಚಿವರು ತಿಳಿಸಿದ್ದಾರೆ.

ಕೇಕ್ ತಿಂದ ಒಂದೇ ಮಗು ಸತ್ತಿದ್ದು ಹೇಗೆ?

Exit mobile version