Site icon Vistara News

Chaitra Kundapura : ಚೈತ್ರಾ ಕುಂದಾಪುರ ಮಾತ್ರವಲ್ಲ, ಗೋವಿಂದ ಪೂಜಾರಿಗೂ ತನಿಖೆ ಬಿಸಿ; ಕೋಟಿ ಕೋಟಿ ಕೊಟ್ಟಿದ್ದು ಎಲ್ಲಿಂದ?

Chaitra Kundapura arrest

ಬೆಂಗಳೂರು: ಒಂದು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಐದು ಕೋಟಿ ರೂ. ಸುರಿದು ವಂಚನೆಗೆ ಒಳಗಾದ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರ ಬಗ್ಗೆ ಎಲ್ಲರೂ ಅನುಕಂಪದ ಮಾತನಾಡುತ್ತಿದ್ದಾರೆ. ಕೆಲವರು ಒಬ್ಬ ಶಾಸಕರಾಗಲು ಮುಂದಾದ ವ್ಯಕ್ತಿ ಹೀಗೆ ಯಾವ ಪರಾಮರ್ಶೆಯೂ ಇಲ್ಲದೆ ಹೀಗೆ ದುಡ್ಡನ್ನು ಕಂಡ ಕಂಡವರಿಗೆ ಹಂಚಿದ್ದಾರೆ ಎಂದರೆ ಅವರೆಂಥವರು ಮಾರ‍್ರೆ ಎಂದೂ ಮಾತನಾಡುತ್ತಿದ್ದಾರೆ. ಅವರ ದೂರಿನಂತೆ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಮತ್ತು ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು (CCB Police) ಇದೀಗ ಗೋವಿಂದ ಪೂಜಾರಿ ಅವರನ್ನೂ ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ.

ಇದೊಂದು ಐದು ಕೋಟಿ ರೂ. ವ್ಯವಹಾರವಾಗಿದೆ. ಜತೆಗೆ ಒಂದು ಕ್ಷೇತ್ರದ ಟಿಕೆಟ್‌ಗಾಗಿ ನಡೆದಿದೆ ಎನ್ನುವುದು ರಾಜಕೀಯದ ಭ್ರಷ್ಟಾಚಾರವನ್ನೂ ಮುನ್ನೆಲೆಗೆ ತಂದಿದೆ. ಒಂದು ಟಿಕೆಟ್‌ಗಾಗಿ ಇಷ್ಟೊಂದು ಹಣ ಸುರಿಯಲು ಮುಂದಾದ ಗೋವಿಂದ ಪೂಜಾರಿ ಅವರ ಆರ್ಥಿಕ ಹಿನ್ನೆಲೆ (Financial Background) ಏನು ಎನ್ನುವ ವಿಚಾರ ತಿಳಿಯಲು ಸಿಸಿಬಿ ಅವರಿಗೂ ನೋಟಿಸ್‌ (CCB Notice) ನೀಡಲು ಸಿದ್ಧತೆ ನಡೆಸುತ್ತಿದೆ.

ಗೊವೀಂದ ಪೂಜಾರಿ ಅವರಿಗೆ ಹೇಗೆ ಅಷ್ಟೋಂದು ಹಣ ಬಂದಿದೆ ಎನ್ನುವ ಆಯಾಮದಲ್ಲಿ ಪೊಲೀಸರು ಪ್ರಶ್ನೆ ಮಾಡಲಿದ್ದಾರೆ. ಅವರು ಹೆಚ್ಚಿನ ಸಂದರ್ಭದಲ್ಲಿ ನಗದು ರೂಪದಲ್ಲೇ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೊಂದು ಹಣವನ್ನು ಕ್ಯಾಶ್‌ ಆಗಿ ಎಲ್ಲಿ ಇಟ್ಟುಕೊಂಡಿದ್ದರು. ಅಥವಾ ಬ್ಯಾಂಕ್‌ನಿಂದ ತೆಗೆದು ಕೊಟ್ಟರೇ ಎನ್ನುವ ಬಗ್ಗೆ ಮಾಹಿತಿ ಕೇಳಲಾಗುತ್ತದೆ.

ಎಲ್ಲ ಆರೋಪಿಗಳ ಬ್ಯಾಂಕ್‌ ಖಾತೆ ಫ್ರೀಜ್‌ ಸಾಧ್ಯತೆ

ಈ ನಡುವೆ ಚೈತ್ರಾ ಕುಂದಾಪುರ ಸೇರಿದಂತೆ ಎಲ್ಲ ಆರೋಪಿಗಳು ಹಣವನ್ನು ಏನು ಮಾಡಿದ್ದಾರೆ. ಬೇರೇನಾದರೂ ವ್ಯವಹಾರ ಮಾಡಿದ್ದಾರಾ ಎಂಬ ಪರಿಶೀಲನೆ ನಡೆಯಲಿದೆ. ಎಲ್ಲ ಆರೋಪಿಗಳ ಬ್ಯಾಂಕ್‌ ಖಾತೆಗಳ ವಿವರ ನೀಡುವಂತೆ ಸೂಚಿಸಲಾಗಿದೆ. ಯಾವ ರೀತಿಯಾಗಿ ವ್ಯವಹಾರ ಆಗಿದೆ ಅನ್ನೊದರ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ನಡೆಯಲಿದೆ. ಸದ್ಯದ ಮಟ್ಟಿಗೆ ಎಲ್ಲಾ ಆರೋಪಿಗಳ ಅಕೌಂಟ್ ಫ್ರೀಜ್‌ ಮಾಡುವ ಸಾಧ್ಯತೆ ಕಂಡುಬಂದಿದೆ.

ಇದನ್ನೂ ಓದಿ : Chaitra Kundapura : ಫೈರ್‌ ಬ್ರಾಂಡ್‌ ವಂಚಕಿ ಚೈತ್ರಾ ಕುಂದಾಪುರ ಟೀಮ್‌ಗೆ 10 ದಿನಗಳ ಸಿಸಿಬಿ ಕಸ್ಟಡಿ; ಮುಂದುವರಿದ ಹೈಡ್ರಾಮಾ

ಗೋವಿಂದ ಪೂಜಾರಿ ಅವರು ಯಾರ್ಯಾರಿಗೆ ಹಣ ಕೊಟ್ಟಿದ್ದಾರೆ?

1.ಚಿಕ್ಕಮಗಳೂರಿನಲ್ಲಿ ಭೇಟಿಯಾದ ಆರೆಸ್ಸೆಸ್‌ ಪ್ರಚಾರಕರು ಎಂದು ಹೇಳಲಾದ ವಿಶ್ವನಾಥ್‌ಜೀ ಅವರನ್ನು ಭೇಟಿಯಾದ ವೇಳೆ 50 ಲಕ್ಷ ರೂ. ನೀಡುವಂತೆ ಸೂಚಿಸಲಾಗಿದೆ. ಅದನ್ನು ಶಿವಮೊಗ್ಗದ ಆರೆಸ್ಸೆಸ್‌ ಕಚೇರಿಯ ಬಳಿ ಪ್ರಸಾದ್‌ ಎಂಬಾತನಿಗೆ ಹಸ್ತಾಂತರ ಮಾಡಿದ್ದು, ಅದು ಗಗನ್‌ ಕಡೂರ್‌ಗೆ ತಲುಪಿದೆ.

2.ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಹಿರೇಹಡಗಲಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರು ಟಿಕೆಟ್‌ ತೆಗೆಸಿಕೊಡುವುದಕ್ಕಾಗಿ 1.5 ಕೋಟಿ ರೂ. ಕೇಳಿದ್ದರು. ಅದನ್ನು ಅವರಿಗೇ ಒಪ್ಪಿಸಲಾಗಿದೆ.

3. ಬೆಂಗಳೂರಿನ ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿ ಭೇಟಿಯಾದ ಬಿಜೆಪಿಯ ಚುನಾವಣಾ ಸಮಿತಿಯ ಉನ್ನತ ನಾಯಕ ಶ್ರೀಯುತ ನಾಯ್ಕ್‌ (ವಾಸ್ತವದಲ್ಲಿ ಕೆ.ಆರ್‌. ಮಾರ್ಕೆಟ್‌ನ ಕಬಾಬ್‌ ವ್ಯಾಪಾರಿ) ಹೇಳಿದಂತೆ ಮೂರು ಕೋಟಿ ರೂ.ಗಳನ್ನು ಮಂಗಳೂರಿನಲ್ಲಿ ಹಸ್ತಾಂತರಿಸಲಾಗಿದೆ. ಇದು ಕೈಗೆ ಸಿಕ್ಕಿದೆ ಎಂದು ಚೈತ್ರಾ ಎಂಡ್‌ ಕಂಪನಿ ಗೋವಿಂದ ಪೂಜಾರಿ ಅವರಿಗೆ ಹೇಳಿತ್ತು.

ವಿಧಾನಸಭಾ ಕ್ಷೇತ್ರದ ಟಿಕೆಟ್‌ ಐದು ಕೋಟಿ ರೂ. ವಂಚನೆ ಉದ್ಯಮಿ ಗೋವಿಂದ ಪೂಜಾರಿ Govinda Poojari ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ Chaitra Kundapura ಸಿಸಿಬಿ ಪೊಲೀಸರು CCB Police ಗೋವಿಂದ ಪೂಜಾರಿ ಆರ್ಥಿಕ ಹಿನ್ನೆಲೆ Financial Background ಸಿಸಿಬಿ ನೋಟಿಸ್‌ CCB Notice

Exit mobile version