ರಾಯ್ಪುರ: ತನ್ನನ್ನು ಮದುವೆಯಾಗುವುದಕ್ಕೆ ಒಪ್ಪದ 16 ವರ್ಷದ ಬಾಲಕಿಯನ್ನು 47 ವರ್ಷದ ವ್ಯಕ್ತಿ ನಡು ರಸ್ತೆಯಲ್ಲಿ ಚಾಕು ಹಿಡಿದು, ಎಳೆದೊಯ್ದಿರುವ ಭಯಾನಕ ಘಟನೆ ಛತ್ತೀಸ್ಗಢದ ರಾಯ್ಪುರದಲ್ಲಿ (Chhattisgarh Crime) ನಡೆದಿದೆ.
ಇದನ್ನೂ ಓದಿ: Murder Case: ಹಾಸನದಲ್ಲಿ ಐಫೋನ್ ಆಸೆಗೆ ಡೆಲಿವರಿ ಬಾಯ್ಗೆ ಚಾಕು ಇರಿದು ಯುವಕ
ಬಾಲಕಿಯು ನಗರದ ಗುಧಿಯಾರಿ ಪ್ರದೇಶದಲ್ಲಿ ಓಂಕಾರ್ ತಿವಾರಿ(47) ಹೆಸರಿನ ವ್ಯಕ್ತಿಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಓಂಕಾರ್ ಆಕೆಯನ್ನು ಇಷ್ಟಪಡಲು ಆರಂಭಿಸಿದ್ದು, ಇತ್ತೀಚೆಗೆ ತನ್ನನ್ನು ಮದುವೆಯಾಗು ಎಂದು ಬಾಲಕಿಯನ್ನು ಕೇಳಿದ್ದ. ಅದಕ್ಕೆ ಒಪ್ಪದ ಬಾಲಕಿ ಅಲ್ಲಿನ ಕೆಲಸವನ್ನೂ ಬಿಟ್ಟಿದ್ದಳು.
ಈ ಸಿಟ್ಟಿನಲ್ಲಿದ್ದ ಓಂಕಾರ್ ಶನಿವಾರ ಸಂಜೆ ಕಂಠ ಪೂರ್ತಿ ಬಾಲಕಿಯ ಮನೆಗೆ ನುಗ್ಗಿ ಮನೆಯವರನ್ನು ಬೈಯಲು ಆರಂಭಿಸಿದ್ದ. ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ. ಅವಳು ಓಡಿಹೋಗಲು ಪ್ರಯತ್ನಿಸಿದಾಗಿ ಆಕೆಯ ಕೂದಲನ್ನು ಹಿಡಿದುಕೊಂಡು ರಸ್ತೆಯಲ್ಲಿ ಎಳೆದುಕೊಂಡು ಹೋಗಲಾರಂಭಿಸಿದ್ದಾನೆ. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆರೋಪಿಯು ಎಡಗೈನಲ್ಲಿ ಬಾಲಕಿಯ ಕೂದಲು ಹಿಡಿದಿದ್ದರೆ, ಬಲಗೈನಲ್ಲಿ ಚಾಕು ಹಿಡಿದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಇದನ್ನೂ ಓದಿ: Murder Case: ಕ್ರೀಡಾಂಗಣದಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತಾ?; ಯುವಕರಿಬ್ಬರಿಗೆ ಚಾಕು ಇರಿದು ಪರಾರಿ
ಈ ಸಂಬಂಧ ರಾಯ್ಪುರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಓಂಕಾರ್ ಮತ್ತು ಯುವತಿ ನಡುವೆ ಹಣದ ವ್ಯವಹಾರ ಇತ್ತು ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಬಾಲಕಿಯ ಸ್ಥಿತಿ ಗಂಭೀರವಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.