ಪುಣೆ: ಕೆಲವರಿಗೆ ಸಿನಿಮಾ ಗೀಳು ಇರುವುದು ಸರ್ವೇ ಸಾಮಾನ್ಯ. ಅದರಲ್ಲೂ ಮಕ್ಕಳ ಕೈಯಲ್ಲಿ ಮೊಬೈಲ್ ಬಂದಾಗಿಂದಲೂ ಮಕ್ಕಳು ನೋಡುವುದನ್ನು ಹೆಚ್ಚು ಮಾಡಿದ್ದಾರೆ. ಆದರೆ ಇಲ್ಲಿ ಚಿಕ್ಕ ಬಾಲಕ ಹಾರರ್ ಫಿಲ್ಮ್ ನೋಡುವ ಅಭ್ಯಾಸದಿಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಮಹಾರಾಷ್ಟ್ರದ 8 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮುಗ್ದ ಬಾಲಕ ಮೊಬೈಲ್ ಪೋನ್‌ಗಳಲ್ಲಿ ಭಯಾನಕ ಸಿನಿಮಾಗಳನ್ನು ಮಾತ್ರ ಇಷ್ಟ ಪಡುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಭಯಾನಕ ಚಿತ್ರವನ್ನು ವೀಕ್ಷಿಸಿದ್ದ. ಮೊದಲಿಗೆ ತಮಾಷೆಯ ರೀತಿಯಲ್ಲಿ ಗೊಂಬೆಗೆ ನೇಣು ಹಾಕಿದ್ದಾನೆ. ಬಳಿಕ ತಾನೂ ಕೊರಳಿಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ | ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಯಾವುದು ಗೊತ್ತೇ?
8 ವರ್ಷದ ಪುಟ್ಟ ಬಾಲಕ ಪುಣೆಯಲ್ಲಿ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ಥರ್ಗಾವ್ ಕಾಂಪ್ಲೆಕ್ಸ್‌ನಲ್ಲಿ ವಾಸಿಸುತ್ತಿದ್ದ. ಮಧ್ಯಾಹ್ನ ಅವರ ತಾಯಿ ಮನೆಗೆಲಸದಲ್ಲಿ ತೊಡಗಿದ್ದರು. ಸಹೋದರ ಸಹೋದರಿ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಆದರೆ ಈತ ಮಾತ್ರ ಮೊಬೈಲ್‌ನಲ್ಲೆ ರೂಮಿನಲ್ಲಿ ಮುಳುಗಿ ಹೋಗಿದ್ದ. ಸ್ವಲ್ಪ ಸಮಯದ ನಂತರ ಅವನು ತನ್ನ ಸಹೋದರಿಯ ಗೊಬೆಯೊಂದಿಗೆ ಆಟವಾಡಿದ್ದಾನೆ.
ಗೊಂಬೆಯ ಮುಖಕ್ಕೆ ಕಪ್ಪು ಬಟ್ಟೆ ಸುತ್ತಿ, ದನ್ನು ಇಂಗ್ಲಿಷ್ ಚಿತ್ರದಲ್ಲಿ ಇರುವಂತೆ ಶಿಲುಬೆಗೆ ಏರಿಸಿದ್ದಾನೆ. ನಂತರ ತನ್ನ ಈ ಕೃತ್ಯದಿಂದ ಗೊಂಬೆ ತನ್ನನ್ನು ಜಗತ್ತಿನಲ್ಲಿ ಒಂಟಿಯಾಗಿ ಬಿಟ್ಟು ದೇವರ ಮೊರೆ ಹೋಗಿದೆ ಎಂದು ಅರ್ಥೈಸಿಕೊಂಡು ತಾನೂ ಈ ರೀತಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅಮ್ಮ ಬರುವುದರೊಳಗೆ ಬಾಲಕನ ಉಸಿರು ನಿಂತಿತ್ತು. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮರೋಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸಿದೆ.
ಇದನ್ನೂ ಓದಿ |ವಿಸ್ತಾರ Explainer: Char Dham ಯಾತ್ರಾ ಸಾವುಗಳಿಗೆ ಕೋವಿಡ್ ಕಾರಣವೇ?