Site icon Vistara News

Child Death : ಆಟವಾಡುತ್ತಿದ್ದ 3 ವರ್ಷದ ಮಗು ನೀರಿನ ತೊಟ್ಟಿಗೆ ಬಿದ್ದು ಸಾವು; ನಮಾಜ್‌ ವೇಳೆ ದುರ್ಘಟನೆ

Child death Davanagere

ದಾವಣಗೆರೆ: ಮನೆಯವರೆಲ್ಲರೂ ನಮಾಜ್‌ನಲ್ಲಿ (Namaz Prayer) ನಿರತರಾಗಿದ್ದಾಗ ಮೂರು ವರ್ಷದ ಮಗುವೊಂದು (Three year old boy dead) ಆಟವಾಡುತ್ತಾ ಹೋಗಿ ನೀರಿನ ತೊಟ್ಟಿಗೆ ಬಿದ್ದು ಪ್ರಾಣ (Three old boy dead in water Tank) ಕಳೆದುಕೊಂಡಿದೆ. ದಾವಣಗೆರೆ ಜಿಲ್ಲೆಯ (Davanagere News) ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ಈ ದುರ್ಘಟನೆ (Child death) ನಡೆದಿದೆ.

ತುಂಗಭದ್ರಾ ಬಡಾವಣೆಯ ಆ ಮನೆಯಲ್ಲಿ ಎಲ್ಲರೂ ನಮಾಜ್‌ ಮಾಡುತ್ತಿದ್ದರು. ಆಗ ಮಗು ಹೊರಗಡೆ ಆಟವಾಡುತ್ತಿತ್ತು. ಮೂರು ವರ್ಷದ ಮಗು ಅಸದ್ ಅಹಮದ್ ಆಟವಾಡುತ್ತಾ ಹೋಗಿ ನೀರಿನ ತೊಟ್ಟಿಗೆ ಬಿದ್ದಿದ್ದಾನೆ.

ಆದರೆ, ಈ ವಿಚಾರ ಮನೆಯಲ್ಲಿದ್ದ ಯಾರಿಗೂ ಗೊತ್ತಾಗಿರಲಿಲ್ಲ. ನಮಾಜ್‌ ಮುಗಿಸಿ ಹೊರಗೆ ಬಂದಾಗ ಮಗು ಕಾಣಿಸಲಿಲ್ಲ. ಎಲ್ಲರೂ ಸೇರಿ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಎರಡು ಗಂಟೆ ಹುಡುಕಿದ ಬಳಿಕ ನೀರಿನ ತೊಟ್ಟಿಯಲ್ಲಿ ಮಗು ಪತ್ತೆಯಾಗಿದೆ. ಕೂಡಲೇ ಮಗುವನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಾಣ ಉಳಿಯಲಿಲ್ಲ.

ಘಟನೆ ನಡೆದದ್ದು ಬಾಲಕನ ತಾಯಿಯ ತವರು ಮನೆಯಲ್ಲಿ. ಬಾಲಕ ತಾಯಿ ಶಿಕಾರಿಪುರದ ಗಂಡನ ಮನೆಯಿಂದ ತನ್ನ ತವರು ಮನೆಗೆ ಬಂದಿದ್ದರು. ಈ ವೇಳೆ ದುರಂ ಸಂಭವಿಸಿದೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮನೆಯವರ ಅಳು ಹೇಳತೀರದಾಗಿದೆ.

Child Marriage :ಬಾಲ್ಯ ವಿವಾಹದ ಬಲೆಗೆ ಸಿಲುಕಿದ ಬಾಲಕಿ ಆತ್ಮಹತ್ಯೆ; ಗಂಡನ ಬಂಧನ

ಆನೇಕಲ್ (ಬೆಂಗಳೂರು) : ಇನ್ನೂ ಬದುಕಿನ ಬಗ್ಗೆ ಸ್ಪಷ್ಟ ಕಲ್ಪನೆಗಳು ಹುಟ್ಟುವ ಮೊದಲೇ ವೈವಾಹಿಕ ಬದುಕಿನ (Married Life) ಸಂಕೋಲೆಯಲ್ಲಿ (Child Marriage) ಸಿಲುಕಿದ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ (Girl Self Harming). ಆಕೆಯನ್ನು ಮದುವೆಯಾದ ಯುವಕನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಘಟನೆ ನಡೆದಿದೆ. ಮಾರ್ಚ್‌ 13ರಂದು ನೀಲಂ ಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ದಾಖಲಾಗಿದೆ. ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಂಡು ಆಕೆಯ ಮಾನಸಿಕ ತಲ್ಲಣಕ್ಕೆ ಕಾರಣವಾಗಿ, ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಆಕೆಯನ್ನು ಬಾಲ್ಯವಿವಾಹವಾದ ಯುವಕ ವಿಶಾಲ್‌ ಕುಮಾರ್‌ ಸಹಾನಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

ನೀಲಂ ಕುಮಾರ್‌ ಮತ್ತು ವಿಶಾಲ್‌ ಕುಮಾರ್‌ ಇಬ್ಬರೂ ಬಿಹಾರದವರು. ವಿಶಾಲ್‌ ಕುಮಾರ್‌ ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಅರಸಿಕೊಂಡು ಬಂದು ಇಲ್ಲೇ ನೆಲೆಸಿದ್ದ. ಯಶವಂತಪುರದಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಆತ ನೀಲಂ ಕುಮಾರಿ ಎಂಬಾಕೆಯನ್ನು ಬಾಲ್ಯ ವಿವಾಹವಾಗಿದ್ದ. ಕಳೆದ 2023ರ ಫೆಬ್ರವರಿಯಲ್ಲಿ ಅವರಿಬ್ಬರ ನಡುವೆ ಮದುವೆ ನಡೆದಿತ್ತು.

ಆದರೆ, ವಿಶಾಲ್‌ ಇದುವರೆಗೂ ನೀಲಂ ಕುಮಾರಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿರಲಿಲ್ಲ. ಬಿಹಾರದಿಂದ ಕಳೆದ ಇಪ್ಪತ್ತು ದಿನಗಳ ಹಿಂದೆ ವಿಶಾಲ್‌ ನೀಲಂ ಕುಮಾರಿಯನ್ನು ಕರೆದುಕೊಂಡು ಬಂದಿದ್ದ. ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಅವರಿಬ್ಬರೂ ವಾಸವಾಗಿದ್ದರು.

ಇದನ್ನೂ ಓದಿ : Self Harming: ಹಣ ಕದ್ದಳೆಂದು ಬಟ್ಟೆ ಬಿಚ್ಚಿಸಿ ಪರಿಶೀಲಿಸಿದ ಶಿಕ್ಷಕಿಯರು; ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣು

ಕಳೆದ ಮಾರ್ಚ್‌ 13ರಂದು ನೀಲಂ ಕುಮಾರಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಬಾಲ್ಯವಿವಾಹವಾಗಿ ಲೈಂಗಿಕವಾಗಿ ಬಳಸಿಕೊಂಡು ಮಾನಸಿಕ ಹಿಂಸೆ ನೀಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಶ್ರೀದೇವಿ ಎಂಬವರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ವಿಶಾಲ್‌ನನ್ನು ವಶಕ್ಕೆ ಪಡೆದಿದ್ದಾರೆ.

Exit mobile version