Site icon Vistara News

Crime | ಮಗಳ ರ‍್ಯಾಂಕ್ ತಪ್ಪಿತೆಂದು ಮೊದಲ ರ‍್ಯಾಂಕ್ ಬಂದ ಮಗಳ ಸಹಪಾಠಿಯ ಕೊಂದ ಮಹಿಳೆ!

Crime

ಪುದುಚೆರಿ: ಆಧುನಿಕ ಶಿಕ್ಷಣವು ಮೌಲ್ಯ, ಕೌಶಲ, ವಿಚಾರಗಳ ಆಧಾರದ ಮೇಲೆ ಪರಿಗಣಿಸದೆ ರ‍್ಯಾಂಕ್, ಅಂಕಗಳ ಮೇಲೆ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಂತಾಗಿದೆ. ಹಾಗಾಗಿಯೇ, ಇಂದು ಪೋಷಕರು ತಮ್ಮ ಮಕ್ಕಳ ಮಾರ್ಕ್ಸ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಹೀಗೆ, ಪುದುಚೆರಿಯಲ್ಲಿ ತಮ್ಮ ಮಗಳು ಎರಡನೇ ರ‍್ಯಾಂಕ್ ಬಂದು, ಮಗಳ ಸಹಪಾಠಿಯು ಮೊದಲ ರ‍್ಯಾಂಕ್ ಬಂದ ಕಾರಣ ಮಹಿಳೆಯೊಬ್ಬರು ಮಗಳ ಸಹಪಾಠಿಯನ್ನೇ (Crime) ಕೊಂದಿದ್ದಾರೆ.

ಕರೈಕ್ಕಲ್‌ನ ನೆಹರೂ ನಗರದ ಒಂದೇ ಶಾಲೆಯಲ್ಲಿ ಮಹಿಳೆಯ ಮಗಳು, ಆಕೆಯ ಸಹಪಾಠಿ ಬಾಲಕನು ಎಂಟನೇ ಕ್ಲಾಸ್‌ನಲ್ಲಿ ಓದುತ್ತಿದ್ದು, ಇತ್ತೀಚೆಗೆ ಫಲಿತಾಂಶ ಪ್ರಕಟವಾಗಿದೆ. ಮಗಳ ಸಹಪಾಠಿಯು ಮೊದಲ ರ‍್ಯಾಂಕ್ ಪಡೆದಿದ್ದಾನೆ. ಇದರಿಂದ ಕುಪಿತಗೊಂಡ ವಿಕ್ಟೋರಿಯಾ ಸಹಾಯರಾಣಿ ಎಂಬ ಮಹಿಳೆಯು ಬಾಲಮಣಿಕಂದನ್‌ ಎಂಬ ಬಾಲಕನಿಗೆ ವಿಷವುಣಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಗಳು ದ್ವಿತೀಯ ರ‍್ಯಾಂಕ್ ಬಂದಳು ಎಂಬುದಕ್ಕಿಂತ ಆಕೆಯ ಸಹಪಾಠಿಯು ಮೊದಲ ರ‍್ಯಾಂಕ್ ಬಂದ ಎಂಬುದರಿಂದ ಕುಪಿತಗೊಂಡ ಮಹಿಳೆಯು ಕಳೆದ ಶನಿವಾರ ಶಾಲೆಗೆ ತೆರಳಿದ್ದಾರೆ. ಮಗಳ ಸಹಪಾಠಿಗೆ ಪಾನೀಯದಲ್ಲಿ ವಿಷ ಬೆರೆಸಿ ಕೊಟ್ಟಿದ್ದಾರೆ. ಇದಾವುದರ ಪರಿವೇಯೇ ಇಲ್ಲದ ಮುಗ್ಧ ಬಾಲಕನು ಪಾನೀಯ ಕುಡಿದಿದ್ದಾನೆ. ಇದಾದ ಬಳಿಕ ಬಾಲಕನು ಸತತವಾಗಿ ವಾಂತಿ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಉಪಯೋಗವಾದೆ ಮೃತಪಟ್ಟಿದ್ದಾನೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | ಕಲ್ಲಿನಿಂದ ತಲೆಗೆ ಜಜ್ಜಿ ಹಳೆ ಸ್ನೇಹಿತನ ಕೊಲೆ, 2 ವರ್ಷದ ಹಿಂದೆ ಹೊಡೆದಿದ್ದಕ್ಕೆ ಈಗ ಸೇಡು!

Exit mobile version