ದಾವಣಗೆರೆ: ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ (Self Harming) ಯತ್ನಿಸಿದ ಘಟನೆ ನಗರದ ಮಹಾನಗರ ಪಾಲಿಕೆಯ ಸ್ಟ್ರಾಂಗ್ ರೂಮ್ ಬಳಿ ನಡೆದಿದೆ. ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೊಲೀಸ್ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ನಿವಾಸಿ ಗುರುಮೂರ್ತಿ (34) ಆತ್ಮಹತ್ಯೆಗೆ ಯತ್ನಿಸಿದ ಪೇದೆ. ಕಳೆದ ಕೆಲ ದಿನಗಳಿಂದ ಇವಿಎಂ ಮಷಿನ್ ಕಾವಲು ಸೇವೆಯಲ್ಲಿ ಗುರುಮೂರ್ತಿ ಇದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ | Physical Abuse: ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯ; 2 ವರ್ಷದ ಮಗುವಿನ ಮೇಲೆ ಕಾಮುಕನ ದೌರ್ಜನ್ಯ
Idli guru Case: ಫ್ರಾಂಚೈಸಿ ಹೆಸರಲ್ಲಿ ಮೋಸ; ಇಡ್ಲಿಗುರು ಹೋಟೆಲ್ ಮಾಲೀಕ ಅರೆಸ್ಟ್
ಬೆಂಗಳೂರು: ಬೆಂಗಳೂರಿನ ಜನಪ್ರಿಯ ಫುಡ್ ಜಾಯಿಂಟ್ (Popular Food Joint) ಆಗಿರುವ ಇಡ್ಲಿ ಗುರು (Idli guru Case) ಮಾಲೀಕ ಕಾರ್ತಿಕ್ ಶೆಟ್ಟಿ (Idli guru Karthik Shetty) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಡ್ಲಿ ಗುರು ಫ್ರಾಂಚೈಸಿ (Idli guru Franchise) ನೀಡುವ ನೆಪದಲ್ಲಿ ಅವರು ಮೂರು ಲಕ್ಷ ರೂ. ಪಡೆದು ಮೋಸ (Fraud Case) ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಕಾರ್ತಿಕ್ ಶೆಟ್ಟಿ (Karthik Shetty Arrested) ಅವರನ್ನು ಮುಂಬಯಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ.
ಕಾರ್ತಿಕ್ ಶೆಟ್ಟಿ ಮತ್ತು ಅವರ ಪತ್ನಿ ಮಂಜುಳಾ ಅವರು ಇಡ್ಲಿ ಗುರು ಎಂಬ ಜನಪ್ರಿಯ ಬ್ರಾಂಡನ್ನು ಸೃಷ್ಟಿ ಮಾಡಿದ್ದು ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಈ ಜನಪ್ರಿಯ ಬ್ರಾಂಡ್‌ನ ಹೋಟೆಲ್‌ನ ಫ್ರಾಂಚೈಸಿ ನೀಡುವ ವಿಚಾರದಲ್ಲಿ ಮೋಸ ಆಗಿದೆ ಎಂದು ಚೇತನ್ ಎಂಬವರು ದೂರು ನೀಡಿದ್ದರು.
ವಂಚನೆ ಸಂಬಂಧ ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆರೋಪಿಗಳು ಫ್ರಾಂಚೈಸಿ ಕೊಡುವ ಭರವಸೆ ನೀಡಿ ವಂಚಿಸಿದ್ದಾರೆ ಎಂದು ದೂರಲಾಗಿದೆ. ಒಟ್ಟು ಮೂರು ಲಕ್ಷ ರೂ. ವಂಚನೆಯ ದೂರು ಇದಾಗಿದೆ.
ಬೆಂಗಳೂರಿನ ಮಾಗಡಿ ಮೇನ್ ರೋಡ್‌ನ ಕೊಟ್ಟಿಗೆ ಪಾಳ್ಯದಲ್ಲಿರುವ ಇಡ್ಲಿ ಗುರು ಕಚೇರಿಯಲ್ಲಿ ಚೇತನ್ ಅವರು ಕಾರ್ತಿಕ್ ಶೆಟ್ಟಿ ಮತ್ತು ಮಂಜುಳಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಇಡ್ಲಿ ಗುರು ಫ್ರಾಂಚೈಸಿಗೆ ಮೂರು ಲಕ್ಷ ಬೇಕಾಗುತ್ತದೆ. ತಿಂಗಳಿಗೆ 50 ಸಾವಿರ ರೂ. ವರಮಾನ ಬರಬಹುದು ಎಂದು ಹೇಳಿದ್ದರು.
ಇದನ್ನೂ ಓದಿ: Fraud Case: ಒಂದು ಸ್ಕ್ರೀನ್‌ಶಾಟ್ ತೋರಿಸಿ ಹತ್ತಾರು ಜನರಿಗೆ ವಂಚಿಸಿದ ಖದೀಮ ಕ್ಯಾಬ್ ಡ್ರೈವರ್!
ಚೇತನ್ ಅವರು ತಮ್ಮ ಮನೆಯ ನೆಲಮಹಡಿಯಲ್ಲಿದ್ದ ಸುಮಾರು 9000 ರೂ. ಬಾಡಿಗೆ ಬರುತ್ತಿದ್ದ ಅಂಗಡಿಯನ್ನು ಖಾಲಿ ಮಾಡಿ ಅದನ್ನು ಫ್ರಾಂಚೈಸಿ ಶಾಪ್ ಮಾಡಲು ಹೆಚ್ಚುವರಿ ಖರ್ಚು ಮಾಡಿ ಸಿದ್ಧಪಡಿಸಿದ್ದರು. ಬಳಿಕ ಮೂರು ಲಕ್ಷ ರೂ ನೀಡಿದ ಬಳಿಕ ಒಂದು ಫುಡ್ ಕಾರ್ಟನ್ನು ಅಲ್ಲಿ ತಂದು ನಿಲ್ಲಿಸಲಾಯಿತು. ಅಲ್ಲಿ ಚೆನ್ನಾಗಿ ವ್ಯಾಪಾರ ಆಗುತ್ತಿದ್ದರೂ ಕೆಲವೇ ದಿನಗಳಿಗೆ ಸೀಮಿತವಾಯಿತು. ಇಲ್ಲಿ ವ್ಯಾಪಾರ ಆಗುತ್ತಿಲ್ಲ. ಹೀಗಾಗಿ ಬೇರೆ ಕಡೆ ಶಿಫ್ಟ್ ಮಾಡುತ್ತೇವೆ ಎಂದು ಹೇಳಿದರು ಎನ್ನುತ್ತಾರೆ ಚೇತನ್. ಆದರೆ, ಹಾಗೆ ಕೊಂಡು ಹೋದ ಬಳಿಕ ಮೂರು ಲಕ್ಷ ರೂ. ವಾಪಸ್ ಕೊಡಬೇಕಾಗಿತ್ತು. ಅದನ್ನು ಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ವಾಗ್ವಾದ ನಡೆದು ಈಗ ಪೊಲೀಸರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ | Bellary News: ಬಳ್ಳಾರಿಯ ಚರಂಡಿಯಲ್ಲಿ 2 ದಿನದ ನವಜಾತ ಶಿಶು ಮೃತ ದೇಹ ಪತ್ತೆ
ಕಾರ್ತಿಕ್ ಶೆಟ್ಟಿ ಅವರು ಕಮಿಷನ್ ಅಥವಾ ಯಾವುದೇ ಮೊತ್ತವನ್ನು ಕೊಡದೆ ಮೋಸ ಮಾಡಿದ್ದಾರೆ ಎಂದು ಚೇತನ್ ನೀಡಿದ ದೂರಿನಂತೆ ಪೊಲೀಸರು ವಂಚನೆ ಆರೋಪದಲ್ಲಿ ಕಾರ್ತಿಕ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ. ಇದೀಗ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.