Site icon Vistara News

Cow Smuggling : ಕಂಟೇನರ್‌, ಮಿಲ್ಕ್‌ ವ್ಯಾನ್‌ನಲ್ಲಿತ್ತು 70ಕ್ಕೂ ಹೆಚ್ಚು ಜಾನುವಾರು; ಹಿಂಸೆ ಕೊಟ್ಟವರು ಅರೆಸ್ಟ್‌

Cow Smuggling

ಕಾರವಾರ/ಮೈಸೂರು: ಪ್ರತ್ಯೇಕ ಕಡೆಗಳಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ (Cow Smuggling) ವಾಹನಗಳ ಮೇಲೆ ಪೊಲೀಸರು ದಾಳಿ, ರಾಸುಗಳನ್ನು ರಕ್ಷಣೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಮಾಸ್ತಿಕಟ್ಟಾ ಸರ್ಕಲ್ ಬಳಿ ಕಂಟೇನರ್‌ನಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟಕ್ಕೆ ಯತ್ನಿಸಲಾಗಿತ್ತು.

ಬೆಳಗಾವಿ ಜಿಲ್ಲೆಯ ಕಿತ್ತೂರಿನಿಂದ ಭಟ್ಕಳಕ್ಕೆ ಕಂಟೇನರ್‌ ಮೂಲಕ ಜಾನುವಾರಗಳನ್ನು ಸಾಗಾಟಕ್ಕೆ ತೆರಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು 23 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಮಂಡ್ಯ ಮೂಲದ ಚಾಲಕ ಸೈಯ್ಯದ್ ಇಸ್ಮಾಯಿಲ್, ಹಾಸನ ಜಿಲ್ಲೆಯ ಹೊಳೆನರಸೀಪುರದ ಮಹಮ್ಮದ್ ಅತೀಕ್, ಇರ್ಫಾನ್ ಬಂಧಿತರು. ಜಾನುವಾರು ಸಾಗಾಟ ಸಂಬಂಧ ಭಟ್ಕಳದ ಮದೀನಾ ಕಾಲೋನಿಯ ಶಾಯ್ ನೂರ್, ಅವುಫ್ ಅಬು ಅಹ್ಮದ್ ಎಂಬುವವರನ್ನು ಬಂಧಿಸಲಾಗಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಿಲ್ಕ್‌ ಟ್ಯಾಂಕ್‌ನಲ್ಲಿದ್ದ ಗೋವು!

ಕಸಾಯಿಖಾನೆಗೆ ಸಾಗಿಸುತ್ತಿದ್ದ 49ಕ್ಕೂ ಹೆಚ್ಚು ರಾಸುಗಳ ರಕ್ಷಣೆ ಮಾಡಲಾಗಿದೆ. ಮೈಸೂರಿನಲ್ಲಿ ಹುಣಸೂರು ಪೊಲೀಸರು ಕಾರ್ಯಾಚರಣೆ ನಡೆಸಿದರು. ಜಾನುವಾರುಗಳನ್ನು ಕೂಡಿ ಹಾಕಿದ್ದ ಗೋಡೌನ್ ಮೇಲೆ ಮಧ್ಯರಾತ್ರಿ ವೇಳೆ ದಾಳಿ ಮಾಡಿದಾಗ ಒಂದು ಮಿಲ್ಕ್ ವ್ಯಾನ್ ಸೇರಿದಂತೆ ಮೂರು ಗೂಡ್ಸ್ ವಾಹನಗಳಲ್ಲಿ ತುಂಬಿದ್ದ 49 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಹುಣಸೂರು ತಾಲೂಕಿನ ರತ್ನಪುರಿಯ ಅಲ್ತಾಫ್, ಶಾಬುದ್ದೀನ್ ಎಂಬುವವರಿಗೆ ಸೇರಿದ ಮನೆ ಪಕ್ಕದ ಗೋಡೌನ್‌ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Family Fighting : ಜಮೀನಿನ ವಿಚಾರದಲ್ಲಿ ಕುಟುಂಬಗಳ ಫೈಟ್; ಕುಡುಗೋಲು, ದೊಣ್ಣೆ ಹಿಡಿದು ಮಾರಾಮಾರಿ

ಅಕ್ರಮ ಗೋ ಸಾಗಾಟದ ವಾಹನ ಬೆನ್ನಟ್ಟಿ ಹಿಡಿದ ಭಜರಂಗದಳದ ಕಾರ್ಯಕರ್ತರು

ಯಾದಗಿರಿ: ಕಸಾಯಿ ಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ (Cow Smugling) ವಾಹನವನ್ನು ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿ ಹಿಡಿದಿದ್ದಾರೆ. ಆ ವಾಹನದಲ್ಲಿ ನಿರ್ದಯವಾಗಿ ಹಾಕಲಾಗಿದ್ದ 7 ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವವರರ ಬಗ್ಗೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಲಾಗಿದ್ದು ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ವರ್ಕನಳ್ಳಿ ಬಳಿ ವಾಹನ ತಡೆದು ಗೋವುಗಳ ರಕ್ಷಣೆ ಮಾಡಲಾಗಿದೆ. ಮಸ್ಕನಳ್ಳಿ ಗ್ರಾಮದಿಂದ ಕಲಬುರಗಿಗೆ ವಾಹನದಲ್ಲಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

ಯಾವುದೇ ಅನುಮತಿಯಿಲ್ಲದೇ ಹಾಗೂ ನಿರ್ದಾಕ್ಷಿಣ್ಯ ರೀತಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮಾಹಿತಿಯನ್ನು ಸ್ಥಳೀಯರು ಬಜರಂಗದಳ ಕಾರ್ಯಕರ್ತರಿಗೆ ನೀಡಿದ್ದರು. ತಕ್ಷಣ ಗೋ ಸಾಗಾಟದ ವಾಹನವನ್ನು ಬೆನ್ನಟ್ಟಿ ತಡೆದು ಬಜರಂಗದಳ ಕಾರ್ಯಕರ್ತರು ಅವುಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ನೀಡಿದ್ದಾರೆ. ಸಾಧಾರಣಾ ಟಾಟಾ ಸುಮೋ ವಾಹನದಲ್ಲಿ 7 ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕಾರಣ ಅವರುಗಳೆಲ್ಲೂ ಗಂಭೀರ ಸ್ಥಿತಿಯಲ್ಲಿದ್ದವು. ಗೋವುಗಳನ್ನು ರಕ್ಷಿಸಿ ವಾಹನ ಸಹಿತ ಪೋಲಿಸ್ ಠಾಣೆಗೆ ಒಪ್ಪಿಸಲಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಇದೇ ವೇಳೆ ಕಾರ್ಯಕರ್ತರು ಆರೋಪಿಸಿದ್ದಾರೆ. ಬಕ್ರಿದ್ ಹಬ್ಬಕ್ಕೆ ಅತೀ ಹೆಚ್ಚು ಗೋವು ಸಾಗಾಣಿಕೆ ಆಗ್ತಿವೆ. ಇದರಿಂದ ಸ್ಥಳೀಯವಾಗಿ ಸಮಸ್ಯೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನಿರುಪದ್ರವಿ ಗೋವುಗಳನ್ನು ತೆಗೆದುಕೊಂಡು ಹೋಗಿ ಮಾಂಸಕ್ಕಾಗಿ ಕಡಿಯಲಾಗಿತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಗೋವಿನ ರಕ್ಷಣೆ ಮಾಡಬೇಕೆಂದು ಬಜರಂಗದಳ ಮುಖಂಡ ಶಿವಕುಮಾರ ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version