Site icon Vistara News

Cricket Fraud: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೆಸರಿನಲ್ಲಿ ಮಹಿಳೆಯಿಂದ 1.5 ಕೋಟಿ ರೂ. ದೋಚಿದ ಗ್ಯಾಂಗ್, 4 ವರ್ಷದ ಬಳಿಕ ಕೇಸ್!

#image_title

ನವದೆಹಲಿ: ಏನೋ ಕಾರ್ಯಕ್ರಮ ಮಾಡುತ್ತೇವೆ, ಅದಕ್ಕೆ ನೀವೇ ಮುಖ್ಯಸ್ಥರು ಎಂದು ಹೇಳಿಕೊಂಡು ಹಣ ದೋಚುವವರನ್ನು ನೋಡಿರುತ್ತೀರಿ. ಆದರೆ ಗುರುಗ್ರಾಮದಲ್ಲಿ ಗ್ಯಾಂಗ್ ಒಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಸುವುದಾಗಿ ನಂಬಿಸಿ (Cricket Fraud) ಮಹಿಳೆಯಿಂದ ಬರೋಬ್ಬರಿ 1.5 ಕೋಟಿ ರೂ. ದೋಚಿದೆ. 2018ರಲ್ಲಿ ನಡೆದ ಈ ವಂಚನೆಯ ಬಗ್ಗೆ ಇದೀಗ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Fraud case: ಮದುವೆಯಾಗುವುದಾಗಿ ನಂಬಿಸಿ ಲೈವ್‌ ಬ್ಯಾಂಡ್‌ ಯುವತಿಗೆ ವಂಚನೆ, ಜೆಡಿಎಸ್ ಜಿಲ್ಲಾಧ್ಯಕ್ಷನಿಗೆ ಧರ್ಮದೇಟು
ಉನ್ನತಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಬಬಿತಾ ಯಾದವ್ ಅವರಿಗೆ ಈ ರೀತಿ ವಂಚನೆ ಮಾಡಲಾಗಿದೆ. ಬಬಿತಾ ಅವರಿಗೆ ಪರಿಚಯಸ್ಥರಾಗಿದ್ದ ಇಂದು ಮತ್ತು ರಾಜೀವ್ ಹೆಸರಿನ ದಂಪತಿ ಈ ರೀತಿ ವಂಚನೆ ಪ್ಲ್ಯಾನ್ ಮಾಡಿದ್ದಾರೆ. 2018ರಲ್ಲಿ ಬಬಿತಾ ಅವರ ಕಚೇರಿಗೆ ಬಂದ ದಂಪತಿ, “ನಮ್ಮ ಸ್ನೇಹಿತರಾದ ಪ್ರವೀಣ್ ಸೇಥಿ ಮತ್ತು ಪವನ್ ಜಂಗ್ಡಾ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಸುತ್ತಿದ್ದಾರೆ. ಅದರಲ್ಲಿ ನೀವು ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಪಡೆಯಬಹುದು” ಎಂದು ನಂಬಿಸಿದ್ದಾರೆ.

ಅವರು ತಮಗೆ ಬೋನಿ ಕಪೂರ್, ಸಲ್ಮಾನ್ ಖಾನ್ ಮತ್ತು ಬಾಲಿವುಡ್‌ನ ಇತರ ಪ್ರಸಿದ್ಧ ಸೆಲೆಬ್ರಿಟಿಗಳು ಪರಿಚಯಸ್ಥರು ಹಾಗೂ ಅವರೆಲ್ಲರೂ ಈ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಿ ಬಬಿತಾ ಅವರನ್ನು ನಂಬಿಸಿದ್ದಾರೆ. ಒಂದು ತಿಂಗಳ ನಂತರ ನಾಲ್ವರು ಜೈಪುರದ ಹೋಟೆಲ್‌ನಲ್ಲಿ ಬಬಿತಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಅದೇ ವೇಳೆ ದೆಹಲಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿದ್ದಾರೆ.

“2018ರ ಅಕ್ಟೋಬರ್ 12ರಂದು ಈ ನಾಲ್ವರು ನನ್ನ ಕಚೇರಿಗೆ ಬಂದಿದ್ದರು. ಪ್ರವೀಣ್ ಮತ್ತು ಪವನ್ ಅವರು ಸಿಗ್ನೇಚರ್ ಕ್ರಿಕೆಟ್ ಲೀಗ್‌ನ ಮಾಲೀಕರು ಮತ್ತು ಬಿಸಿಸಿಐನಲ್ಲಿ ಉನ್ನತ ಹುದ್ದೆಯಲ್ಲಿದ್ದಾಗಿ ಪರಿಚಯ ಮಾಡಿಕೊಂಡಿದ್ದರು. ಡಿಸೆಂಬರ್ 31ರೊಳಗೆ ಪಂದ್ಯಾವಳಿಗೆಂದು 1.5 ಕೋಟಿ ರೂ. ಹೂಡಿಕೆ ಮಾಡುವಂತೆ ಹೇಳಿದರು. ಅದಕ್ಕಾಗಿ ಲಿಖಿತ ಒಪ್ಪಂದವನ್ನೂ ಮಾಡಿಕೊಳ್ಳಲಾಯಿತು. ನನ್ನ ಖಾತೆಯಿಂದ ಒಟ್ಟು 1 ಕೋಟಿ ರೂ. ಅನ್ನು ಅವರ ಖಾತೆಗೆ ವರ್ಗಾಯಿಸಿದೆ. ನಂತರ, ಅವರು ಕಚೇರಿಗೆ ಬಂದು ಮತ್ತೆ 50 ಲಕ್ಷ ರೂ. ತೆಗೆದುಕೊಂಡು ಹೋದರು.”

ಇದನ್ನೂ ಓದಿ: ವಂಚನೆ ಮಾಡಿ ಜಮೀನು ಗುಳುಂ ಆರೋಪ; ಮೂವರು ಮಕ್ಕಳೊಂದಿಗೆ ಮುಂಜಾನೆ 5 ಗಂಟೆಗೇ ಟವರ್‌ ಏರಿದ!
“ಮೂರು ತಿಂಗಳ ಕಾದರೂ ಪಂದ್ಯ ನಡೆಯಲಿಲ್ಲ. ಹಾಗಾಗಿ ನಾನು ಅವರ ಬಳಿ ಹಣ ವಾಪಸು ಕೇಳಲಾರಂಭಿಸಿದೆ. ಆಗ ಅವರು ಹಣವನ್ನು ವಾಪಸು ಕೊಡುವುದಾಗಿ ಹೇಳಿ 2022ರ ಆಗಸ್ಟ್ ತಿಂಗಳವರೆಗೂ ಕಾಯಿಸಿದರು. ಆದರೆ ಹಣವನ್ನು ವಾಪಸು ಮಾಡಲಿಲ್ಲ. ಮತ್ತೆ ನನ್ನ ಕಚೇರಿಗೆ ಬಂದ ಅವರು ಹಣವನ್ನು ಕೊಡುವುದಿಲ್ಲ ಎಂದು ನೇರವಾಗಿ ಹೇಳಿದರು. ಹಾಗೆಯೇ ಹಣವನ್ನು ಮತ್ತೆ ಕೇಳಿದರೆ ಕೊಲೆ ಮಾಡುತ್ತೇವೆ ಎನ್ನುವ ಬೆದರಿಕೆಯನ್ನೂ ಹಾಕಿದರು” ಎಂದು ಬಬಿತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಬಿತಾ ಹೆಸರಿಸಿರುವ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಈ ಬಗ್ಗೆ ವಾಸ್ತವಾಂಶವನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗುರುಗ್ರಾಮದ ಸೆಕ್ಟರ್‌ 50ರ ಪೊಲೀಸ್‌ ಠಾಣೆಯ ಎಸ್‌ಎಚ್‌ಒ ಇನ್‌ಸ್ಪೆಕ್ಟರ್‌ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

Exit mobile version