ವಿಜಯಪುರ: ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಪಟು ರಾಜೇಶ್ವರಿ ಗಾಯಕವಾಡ ಅವರು ಸೂಪರ್ ಮಾರ್ಕೆಟ್ ಒಂದರಲ್ಲಿ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.
ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್‌ನಲ್ಲಿ ನಿನ್ನೆ ಸಾಯಂಕಾಲ ಘಟನೆ ನಡೆದಿದೆ. ಕಾಸ್ಮೆಟಿಕ್ ಐಟಂ ಖರೀದಿಗೆ ಹೋಗಿದ್ದ ವೇಳೆ ಅಂಗಡಿಯವರೊಂದಿಗೆ ಕಿರಿಕ್ ಮಾಡಿಕೊಂಡಿದ್ದು ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ರಾಜೇಶ್ವರಿ ಗಾಯಕವಾಡ ಹಾಗೂ ಅವರ ಸ್ನೇಹಿತೆ ಇಬ್ಬರೂ ಹೋಗಿದ್ದ ವೇಳೆ ಕಾಸ್ಮೆಟಿಕ್ ವಸ್ತುಗಳ ಪರಿಶೀಲನೆ ಸಂದರ್ಭ ಸೂಪರ್ ಮಾರ್ಕೆಟ್ ಸಿಬ್ಬಂದಿಗೂ ರಾಜೇಶ್ವರಿಗೂ ವಾಗ್ವಾದ ನಡೆದಿದೆ. ಬಳಿಕ 8ರಿಂದ 10 ಗೂಂಡಾಗಳನ್ನು ಕರೆಯಿಸಿ ರಾಜೇಶ್ವರಿ ದೂರದಲ್ಲಿ ನಿಂತು ಹಲ್ಲೆ ಮಾಡಿಸಿದ್ದಾರೆ ಎಂದು ಉಮದಿ ಸೂಪರ್ ಮಾರ್ಕೆಟ್ ಮಾಲೀಕ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ. ಮಲ್ಲಿಕಾರ್ಜುನ್ ಉಮದಿ ಹಾಗೂ ಅವರ ಪುತ್ರ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ.
ರಾಜೇಶ್ವರಿ ಗಾಯಕವಾಡ ಅವರು ಘಟನೆಯನ್ನು ಅಲ್ಲಗಳೆದಿದ್ದು, ಉಮದಿ ಸೂಪರ್ ಮಾರ್ಕೆಟ್‌ಗೆ ಹೋಗಿದ್ದು ನಿಜ, ಆದ್ರೆ ಯಾವುದೇ ರೀತಿಯ ಗಲಾಟೆ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರ್ಶನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | Kannada Flag | ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗಳಿಗೆ ಪೊಲೀಸರಿಂದಲೂ ಥಳಿತ, ಸ್ಪಷ್ಟನೆ