ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್ ನಗರದ ಎನ್ಯೋಬೆನಿ ಟಾವೆರ್ನ್ ಎಂಬ ಕ್ಲಬ್‌ನಲ್ಲಿ ಸುಮಾರು 20 ಮಂದಿಯ ಮೃತದೇಹ ಪತ್ತೆಯಾಗಿದೆ. ಇವರೆಲ್ಲ 18-20ವರ್ಷದವರೇ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ ಹಲವು ಮಂದಿ ಗಾಯಗೊಂಡು ಬಿದ್ದಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯದ ಮಟ್ಟಿಗೆ ಯಾವುದೇ ನಿಖರ ಮಾಹಿತಿ ನೀಡಲು ಆಗುತ್ತಿಲ್ಲ. ಘಟನೆ ನಡೆದ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ನಮಗೆ ಸ್ಪಷ್ಟತೆ ಸಿಗುವವರೆಗೂ ಏನೂ ಹೇಳುವುದಿಲ್ಲ. ತನಿಖೆ ಪ್ರಾರಂಭ ಮಾಡಿದ್ದೇವೆ ಎಂದು ಪೊಲೀಸ್ ವಕ್ತಾರೊಬ್ಬರು ತಿಳಿಸಿದ್ದಾಗಿ ಆಫ್ರಿಕಾ ನ್ಯೂಸ್ ಚಾನೆಲ್ ವರದಿ ಮಾಡಿದೆ.
ಮೃತಪಟ್ಟವರೆಲ್ಲ ಯುವ ವಯಸ್ಸಿನವರೇ ಆಗಿದ್ದಾರೆ. ಇವರ ಶವಗಳೆಲ್ಲ ಕ್ಲಬ್ ಒಳಗೆ ಬಿದ್ದುಕೊಂಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸದ್ಯ ಮೃತದೇಹಗಳ ಪೋಸ್ಟ್‌ಮಾರ್ಟಮ್ ನಡೆಯುತ್ತಿದ್ದು ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಆಫ್ರಿಕಾ ಸಚಿವರೊಬ್ಬರು, ʼನಿಜಕ್ಕೂ ಈ ಘಟನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇನ್ನೂ ಹರೆಯದ ವಯಸ್ಸಿನವರು. ತಮ್ಮ ರಜಾದಿನವನ್ನು ಕಳೆಯಲು ಇಲ್ಲಿ ಬಂದು ಹೀಗೆ ಶವವಾಗಿದ್ದು ನೋವು ತಂದಿದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಸೇವನೆ-ಸಾಗಣೆ ವಿರೋಧಿ ದಿನ; ರಾಜ್ಯದಲ್ಲಿ ಕಳೆದ ವರ್ಷ ಜಪ್ತಿಯಾದ ಮಾದಕ ದ್ರವ್ಯದ ಪ್ರಮಾಣ ಎಷ್ಟು?