ಮಂಡ್ಯ: ರಾಜ್ಯದ ಸಚಿವ ಚಲುವರಾಯಸ್ವಾಮಿ (Minister Chaluvaraya Swamy) ಅವರ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ (School Head Master) ದುರ್ಮರಣ ರಾಮಕೃಷ್ಣೇ ಗೌಡ ಅವರು ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ (Mandya News) ನಾಗಮಂಗಲ ತಾಲೂಕಿನ H. ಭುವನಹಳ್ಳಿ ಗ್ರಾಮದ ಶಿಕ್ಷಕ ರಾಮಕೃಷ್ಣೇಗೌಡ ಅವರು ಇಜ್ಜಲಘಟ್ಟ ಗ್ರಾಮದಿಂದ ಶಾಲೆ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುವ ವೇಳೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ (Crime News). ಮನೆಗೆ ಮರಳುವ ವೇಳೆ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ದೂರ ಹೋಗಿ ಬಿದ್ದಿದೆ. ರಾಮಕೃಷ್ಣೇಗೌಡ ಅವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರು ಕೂಡಾ ದೂರ ಎಲ್ಲೋ ಹೋಗಿ ನಿಂತಿದ್ದು ಅದರ ಚಾಲಕನಿಗೂ ಗಾಯಗಳಾಗಿವೆ. ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾವೇರಿ: ಡಿಆರ್ ಕಾನ್ಸ್ಟೇಬಲ್ ಆತ್ಮಹತ್ಯೆ
ಹಾವೇರಿ: ಹಾವೇರಿ (Haveri News) ಜಿಲ್ಲಾ ಮೀಸಲು ಪೊಲೀಸ್ ವಿಭಾಗದ ಕಾನ್ಸ್‌ಟೇಬಲ್ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವೇಶ್ವರನಗರ ಸಿ ಬ್ಲಾಕ್ ರೈಲ್ವೆ ಹಳಿ ಸಮೀಪ ಪೊಲೀಸ್ ಸಿಬ್ಬಂದಿ ಈರಣ್ಣ ದೊಡ್ಡಬೂದಿಹಾಳ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈರಣ್ಣ ಅವರು ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಎಲ್ಲ ಕಡೆ ಹುಡುಕಿದ್ದರೂ ಸಿಕ್ಕಿರಲಿಲ್ಲ. ಇದೀಗ ರೈಲ್ವೇ ಹಳಿ ಸಮೀಪ ಅವರ ಶವ ಸಿಕ್ಕಿದೆ. ಈರಣ್ಣ ಅವರ ಮೃತದೇಹದ ಬಳಿ ಮಾತ್ರೆಗಳು ಪತ್ತೆಯಾಗಿದ್ದು, ಅವರು ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : Illicit Relationship : ವಿಜಯಪುರದಲ್ಲಿ ಜೋಡಿ ಕೊಲೆ; ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?
ಚಲಿಸುತ್ತಿದ್ದ ರೈಲಿನಡಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ
ವಿಜಯಪುರ: ವಿಜಯಪುರ ನಗರದ (vijayapura News) ವಜ್ರ ಹನುಮಾನ್ ಗೇಟ್ ಬಳಿಯ ಹಳಿಯಲ್ಲಿ ವ್ಯಕ್ತಿಯೊಬ್ಬರು ರೈಲು ಬರುವಾಗ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕಾಶ ಬಿರಾದಾರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಿಜಯಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರು-ಗೂಡ್ಸ್ ವಾಹನದ ನಡುವೆ ಅಪಘಾತ: ಮಹಿಳೆಗೆ ಗಂಭೀರ ಗಾಯ
ವಿಜಯನಗರ: ಕಾರು ಮತ್ತು ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ನಡೆದ ಘಟನೆ ವಿಜಯನಗರ ಜಿಲ್ಲೆಯ (Vijayanagara News) ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ – 67 ಧರ್ಮಸಾಗರ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿವೆ.
ಬಳ್ಳಾರಿಯಿಂದ ಹೊಸಪೇಟೆಯತ್ತ ಹೊರಟಿದ್ದ ಕಾರು ಮತ್ತು ಹೊಸಪೇಟೆಯಿಂದ ಬಳ್ಳಾರಿಗೆ ಹೊರಟಿದ್ದ ಗೂಡ್ಸ್ ವಾಹನದ ನಡುವೆ ಡಿಕ್ಕಿ ನಡೆದಿದೆ. ಗೂಡ್ಸ್ ವಾಹನ ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಗಾದಿಗನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.