ಯಾದಗಿರಿ: ಹಾಡಹಗಲೆ ದುಷ್ಕರ್ಮಿಯೊಬ್ಬ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು (kidnap case) ಯತ್ನಿಸಿದ್ದಾರೆ. ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ (Crime News) ನಡೆದಿದೆ. 6 ವರ್ಷದ ಸಂಜನಾ ಎಂಬಾಕೆ ಎಂದಿನಂತೆ ಸ್ನೇಹಿತೆ ಮನೆಯಿಂದ ಟ್ಯೂಶನ್‌ಗೆ ತೆರಳುತ್ತಿದ್ದಳು.
ಈ ವೇಳೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಯೊರ್ವ ಬಾಲಕಿಯ ಕಣ್ಣಿಗೆ ಸ್ಪ್ರೇ ಮಾಡಿದ್ದಾನೆ. ಬಳಿಕ ಅಪಹರಿಸಲು ಯತ್ನಿಸಿದಾಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾಳೆ. ಸದ್ಯ ಪೋಷಕರ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಪೊಲೀಸ್ ಪೇದೆಗೆ ಗುದ್ದಿ ಟಿಪ್ಪರ್ ಚಾಲಕ ಪರಾರಿ
ಟಿಪ್ಪರ್ ಮತ್ತು ಪೊಲೀಸ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಪೊಲೀಸ್ ಪೇದೆ ಕಾಲು ಮುರಿದು ಹೋಗಿದೆ. ಗದಗದ ಬೆಟಗೇರಿ ರೈಲ್ವೇ ಅಂಡರ್ ಬ್ರಿಜ್ ಬಳಿ ಅಪಘಾತ ನಡೆದಿದೆ. ವೀರಯ್ಯ ಹಿರೇಮಠ (54) ಗಂಭಿರ ಗಾಯಗೊಂಡವರು. ಪೇದೆ ವೀರಯ್ಯ ಬೆಟಗೇರಿಯಿಂದ ಗದಗ ಕಡೆ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ.
ಇತ್ತ ಅಪಘಾತ ಮಾಡಿದ ಚಾಲಕ ಟಿಪ್ಪರ್ ನಿಲ್ಲಿಸದೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ಗದಗ ನಗರದ ಪಂಚಾಕ್ಷರಿ ನಗರದ ಬಳಿ ಟಿಪ್ಪರ್ ಲಾರಿ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾನೆ. ಗದಗ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಪೇದೆ ಎಡಗಾಲಿಗೆ ಗಂಭೀರ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಧಾರವಾಡದ ಎಸ್‌ಡಿಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ
ಬೆಂಗಳೂರಲ್ಲಿ ಮಹಿಳೆಗೆ ಆಟೋ ಡಿಕ್ಕಿ
ಬೆಂಗಳೂರಲ್ಲಿ ಆಟೋ ಚಾಲಕನಿಂದ ಹಿಟ್ ಆ್ಯಂಡ್ ರನ್ ಮಾಡಿ ಪರಾರಿ ಆಗಿದ್ದಾನೆ. ಏಪ್ರಿಲ್ 29ರ ರಾತ್ರಿ 9.58ಕ್ಕೆ ಬೆಂಗಳೂರಿನ ಗಿರಿನಗರದ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಲಕ್ಷ್ಮೀ (55) ಎಂಬಾಕೆ ಕಸ ಹಾಕಲು ಬಂದಿದ್ದರು. ಈ ವೇಳೆ ಅತಿ ವೇಗದಿಂದ ಬಂದ ಆಟೋ ಚಾಲಕ, ಮಹಿಳೆಗೆ ಗುದ್ದಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಘಟನೆಯಲ್ಲಿ ಲಕ್ಷ್ಮಿ ತಲೆ, ಕಾಲಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಟೋ ಚಾಲಕನ ಪತ್ತೆ ಮಾಡಲು ಸಿಸಿಟಿವಿ ಮೊರೆ ಹೋಗಿದ್ದಾರೆ.
ಸಮುದ್ರದಲ್ಲಿ ಮುಳುಗುತ್ತಿದ್ದ ಮಹಿಳೆಯ ರಕ್ಷಣೆ
ನೀರಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗೆ ಸಿಕ್ಕಿ ನೀರಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ವನ್ನಳ್ಳಿಯ ಹೆಡ್‌ಬಂದರ್ ಬೀಚ್‌ನಲ್ಲಿ ಘಟನೆ ನಡೆದಿದೆ. ಶೋಭಾ (31) ರಕ್ಷಣೆಗೊಳಗಾದವರು. ಗದಗ ಜಿಲ್ಲೆಯ ರೋಣ ಮೂಲದ ಶೋಭಾ ಬೀಚ್‌ಗೆ ಬಂದಿದ್ದರು. ಈ ವೇಳೆ ಅಲೆಗೆ ಸಿಲುಕಿದ್ದರು. ಇದನ್ನೂ ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ಉದಯ ಹರಿಕಂತ್ರ ಹಾಗೂ ಬೀಚ್ ಸೂಪರ್‌ವೈಸರ್ ರವಿ ನಾಯ್ಕ, ಬೋಟಿಂಗ್ ಸಿಬ್ಬಂದಿ ಪ್ರಭಾಕರ್, ಗಣೇಶ್ ನೆರವಿನಿಂದ ಬದುಕುಳಿದಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ