Site icon Vistara News

Crime News : ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಪತ್ನಿಯನ್ನು ಕೊಂದ ಪತಿ; ಟಾಟಾ ಏಸ್‌ ಪಲ್ಟಿಯಾಗಿ ಇಬ್ಬರು ಸಾವು

Ballary accident

ಕಲಬುರಗಿ: ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ಪತ್ನಿಯನ್ನು ಪತಿಯೊಬ್ಬ ಹಾಡಹಗಲೇ ಕಲ್ಲಿನಿಂದ ಜಜ್ಜಿ ಕೊಲೆ (Man kills wife) ಮಾಡಿದ್ದಾನೆ. ಇನ್ನೊಂದು ಕಡೆದ ಅಪಘಾತದಲ್ಲಿ ಇಬ್ಬರು ಪ್ರಾಣ (Two died in Accident) ಕಳೆದುಕೊಂಡಿದ್ದಾರೆ (Crime News).

ಕಲಬುರಗಿ (Kalaburagi News) ನಗರದ ಶಾಂತಿನಗರದಲ್ಲಿ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಶಾಹೀನಾ ಬಾನು (35) ಎಂಬವರನ್ನು ಆಕೆಯ ಪತಿ ಶೇಕ್‌ ಹೈದರ್‌ ಕೊಂದು ಹಾಕಿದ್ದಾನೆ.

ಬ್ಯೂಟಿಪಾರ್ಲರ್ ನಡೆಸುತ್ತಾ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಶಾಹೀನಾ ಬಾನುವನ್ನು ಶೇಕ್‌ ಹೈದರ್‌ ಕತ್ತು ಹಿಸುಕಿದ್ದಲ್ಲದೆ ಬಳಿಕ ಕಲ್ಲಿನಿಂದ ಹೊಡೆದು‌ ಕೊಲೆ ಮಾಡಿದ್ದಾನೆ. ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸುತ್ತಿದ್ದಾರೆ. ಪತ್ನಿಯನ್ನು ಕೊಲೆ ಮಾಡಿದ ಧೂರ್ತ ಶೇಕ್‌ ಹೈದರ್‌ ಪರಾರಿಯಾಗಿದ್ದಾನೆ.

ಬಳ್ಳಾರಿ ಹೊರವಲಯದಲ್ಲಿ ಅಪಘಾತ: ಇಬ್ಬರು ಸಾವು

ಬಳ್ಳಾರಿಯ (Ballary News) ಹೊರವಲಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಾರ್ಮಿಕರ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಹೊರವಲಯದ ಮಿಂಚೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಏಸ್‌ ಮತ್ತು ಬೊಲೆರೊ ನಡುವೆ ಅಪಘಾತ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಹಸೇನ್ ಹಾಗೂ ಮುಸ್ತಫಾ ಮೃತಪಟ್ಟವರು. ವೇಗವಾಗಿ ಬಂದ ಬೊಲೆರೋವು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.

ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ

ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ವೈ.ಎಸ್.ಶಿವರಾಜು (45) ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸ್ ಠಾಣೆ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ 13 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚೆಗೆ ಗ್ರಾಮದ ಓಂಕಾರ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಕೂಟ ಸೇರಿಕೊಂಡು ನಡೆಸಿದ ಯಾವುದೋ ಚಟುವಟಿಕೆಗೆ ಸಂಬಂಧಿಸಿ ಶಿವಣ್ಣ ನಾಯಕ ಎಂಬವರಿಗೆ ಚಪ್ಪಲಿ ನ್ಯಾಯ ಮತ್ತು 50000 ರೂ. ದಂಡ ವಿಧಿಸಲಾಗಿತ್ತು. ಇದರಿಂದ ಅಪಮಾನಿತನಾದ ಆತ ಆತ್ಮಹತ್ಯೆಗೆ ಮುಂದಾಗಿದ್ದ.

ಈ ವಿಷಯ ತಿಳಿದ ಶಿವರಾಜು ಶಿವಣ್ಣ ನಾಯಕನನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದ. ಇದರಿಂದ ಗ್ರಾಮದ ಕೆಲವರು ಕೆರಳಿ ಶಿವರಾಜು ಅವರಿಗೂ ಗ್ರಾಮದಿಂದ ಬಹಿಷ್ಕಾರ ಹಾಕಿದ್ದರು. ಜತೆಗೆ 6000 ರೂ. ದಂಡ ವಿಧಿಸಿದ್ದರು.

ಇದನ್ನೂ ಓದಿ: Murder Case: ಭೀಮಾ ತೀರದಲ್ಲಿ ಮತ್ತೆ ನೆತ್ತರೋಕುಳಿ, ಯುವಕನ ರುಂಡ ಚೆಂಡಾಡಿದರು

ಇದರಿಂದ ಮನನೊಂದ ಶಿವರಾಜು ಹೆಂಡತಿ ಮಕ್ಕಳು ರಜೆಯ ಹಿನ್ನೆಲೆಯಲ್ಲಿ ಬೇರೆ ಊರಿಗೆ ಹೋದ ಸಮಯವನ್ನು ನೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ಅಪಮಾನವಾಗಿರುವ ವಿಚಾರದ ಬಗ್ಗೆ ಶಿವರಾಜು ತಮ್ಮ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದರು ಎಂದು ಅವರ ಅಣ್ಣ ಹೇಳಿದ್ದಾರೆ. ಹೀಗಾಗಿ ಇದಕ್ಕೆ ಕಾರಣರಾದ ಆರೋಪಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Exit mobile version