Site icon Vistara News

Dalit Boy Thrashed: ಜಮೀನಿನಲ್ಲಿ ಮಲ ವಿಸರ್ಜನೆ; ದಲಿತ ಬಾಲಕನಿಗೆ ಥಳಿಸಿ, ಮಲ ತೆಗೆಸಿದ ವ್ಯಕ್ತಿ

Dalit Boy Thrashed In Uttar Pradesh; Forced To Clean Excreta Manually

Dalit Boy Thrashed In Uttar Pradesh; Forced To Clean Excreta Manually

ಲಖನೌ: ಉತ್ತರ ಪ್ರದೇಶದಲ್ಲಿ ಜಮೀನಿನಲ್ಲಿ ಮಲ ವಿಸರ್ಜನೆ ಮಾಡಿದ ಎಂದು ದಲಿತ ಬಾಲಕನಿಗೆ (Dalit Boy Thrashed) ಥಳಿಸಲಾಗಿದ್ದು, ಬಾಲಕನಿಂದಲೇ ಮಲ ತೆಗೆಸಲಾಗಿದೆ. ಮಧ್ಯಪ್ರದೇಶದಲ್ಲಿ ಆದಿವಾಸಿ ವ್ಯಕ್ತಿ ಮೇಲೆ ಮತ್ತೊಬ್ಬ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ ಕೂಡ ದಲಿತ ಬಾಲಕನ ಮೇಲೆ ದೌರ್ಜನ್ಯ ಎಸಗಲಾಗಿದೆ.

ಎತವಾಹ್‌ ಜಿಲ್ಲೆಯ ಸೈಫಿ ಎಂಬ ಗ್ರಾಮದ ಬಳಿ 15 ವರ್ಷದ ದಲಿತ ಬಾಲಕನು ಜಗರಾಮ್‌ ಯಾದವ್‌ ಎಂಬುವರ ಜಮೀನಿನಲ್ಲಿ ಮಲ ವಿಸರ್ಜನೆ ಮಾಡಿದ್ದಾನೆ. ಇದನ್ನು ಗಮನಿಸಿದ ಜಗರಾಮ್‌ ಯಾದವ್‌, ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೆಯೇ, ಬಾಲಕನೇ ಮಲವನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದಾರೆ. ಕೊನೆಗೆ ಬಾಲಕನು ಸ್ವಚ್ಛಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.

ಜುಲೈ 13ರಂದು ಘಟನೆ ನಡೆದಿದ್ದು, ತಡವಾಗಿ ಸುದ್ದಿಯಾಗಿದೆ. ಆದಾಗ್ಯೂ, ಜಗರಾಮ್‌ ಯಾದವ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಯಾದವ್‌ ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಾಲಕನ ತಂದೆಯು ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗನನ್ನು ರಕ್ಷಿಸಲು ಬಂದ ಆತನ ಚಿಕ್ಕಮ್ಮಳ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮಧ್ಯಪ್ರದೇಶದಲ್ಲಿ ಆದಿವಾಸಿ ಕಾರ್ಮಿಕರೊಬ್ಬರ ಮೇಲೆ ಪ್ರವೇಶ್‌ ಶುಕ್ಲಾ ಎಂಬ ದುರುಳನು ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಅಷ್ಟೇ ಅಲ್ಲ, ಮಧ್ಯಪ್ರದೇಶದ ಶಿವಪುರ ಜಿಲ್ಲೆಯಲ್ಲಿ ಇಬ್ಬರು ದಲಿತರಿಗೆ ಒಂದಷ್ಟು ಜನ ಮನುಷ್ಯರ ಮಲ ತಿನ್ನುವಂತೆ ಒಂದಷ್ಟು ಮುಸ್ಲಿಮರು ಒತ್ತಾಯ ಮಾಡಿದ ಪ್ರಕರಣ ತಡವಾಗಿ ಸುದ್ದಿಯಾಗಿತ್ತು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮತ್ತೊಂದು ‘ಹೊಲಸು’ ಕೃತ್ಯ; ಇಬ್ಬರು ದಲಿತರಿಗೆ ಮಲ ತಿನ್ನುವಂತೆ ಒತ್ತಾಯಿಸಿದ ಮುಸ್ಲಿಮರು

ಶಿವಪುರ ಜಿಲ್ಲೆಯ ವರ್ಖಡಿ ಎಂಬ ಗ್ರಾಮದಲ್ಲಿ ಇಬ್ಬರು ದಲಿತರು ಮುಸ್ಲಿಂ ಸಮುದಾಯದ ಯುವತಿಯರ ಜತೆ ಮಾತನಾಡಿದರು ಎಂಬ ಕಾರಣಕ್ಕಾಗಿ ಮುಸ್ಲಿಂ ಸಮುದಾಯದ ಗುಂಪೊಂದು ಇಬ್ಬರು ದಲಿತರ ಮೇಲೆ ದಾಳಿ ಮಾಡಿತ್ತು. ಅವರ ಮೇಲೆ ಹಲ್ಲೆ ನಡೆಸುವ ಜತೆಗೆ ಮಲ ತಿನ್ನುವಂತೆ ಒತ್ತಾಯ ಮಾಡಿದ್ದರು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Exit mobile version