ಲಖನೌ: ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರ (Dalit Woman) ಮೇಲೆ ಇಬ್ಬರು ಮುಸ್ಲಿಮರು ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲ, ಅತ್ಯಾಚಾರದ ವಿಡಿಯೊ ಚಿತ್ರೀಕರಣ ಮಾಡಿ, ಆಕೆಗೆ ಬಲವಂತವಾಗಿ ಗೋಮಾಂಸ (Beef) ತಿನ್ನಿಸಿ ವಿಕೃತಿ ಮೆರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಮುಸ್ಲಿಮರನ್ನು ಬಂಧಿಸಿದ್ದಾರೆ.
ದಲಿತ ಮಹಿಳೆಯ ಗೆಳೆತಿಯೊಬ್ಬಳು ಮುಸ್ಲಿಮಳಾಗಿದ್ದು, ಆಕೆಯೇ ದಲಿತ ಮಹಿಳೆಯನ್ನು ಹೋಟೆಲ್‌ಗೆ ಕರೆಸಿದ್ದಾಳೆ. ದಲಿತ ಮಹಿಳೆಯು ಹೋಟೆಲ್ ಕೋಣೆಗೆ ಬಂದ ಬಳಿಕ ಅವರ ಮೇಲೆ ಬಿ ಫಾರ್ಮಾ ವಿದ್ಯಾರ್ಥಿ ಶೋಯಬ್ ಹಾಗೂ ಬಾರ್ಬರ್ ಶಾಪ್ ಇಟ್ಟುಕೊಂಡಿರುವ ನಜೀಮ್ ಎಂಬುವರು ಅತ್ಯಾಚಾರ ಎಸಗಿದ್ದಾರೆ. ಮತ್ತು ಬರುವ ಔಷಧ ನೀಡಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಅತ್ಯಾಚಾರದ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಇದಾದ ಬಳಿಕ ಬಲವಂತವಾಗಿ ಮಹಿಳೆಗೆ ಗೋಮಾಂಸ ತಿನ್ನಿಸಿದ್ದಾರೆ ಎಂದು ತಿಳಿದುಬಂದಿದೆ.
5 ಲಕ್ಷ ರೂ.ಗೆ ಬೇಡಿಕೆ
ಗೆಳತಿಯ ಮೋಸದ ಜಾಲಕ್ಕೆ ಸಿಲುಕಿ ಅತ್ಯಾಚಾರಕ್ಕೀಡಾದ ಮಹಿಳೆಗೆ ಮುಸ್ಲಿಂ ಮಹಿಳೆ ಸೇರಿ ಮೂವರೂ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅತ್ಯಾಚಾರದ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ವಿಡಿಯೊ ವೈರಲ್ ಆಗಬಾರದು ಎಂದರೆ 5 ಲಕ್ಷ ರೂ. ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯ ಭಾವಿ ಪತಿಗೆ ವಿಡಿಯೊ ಕಳುಹಿಸಿದ ಅವರು ಕಾಶ್ಮೀರಕ್ಕೆ ಪರಾರಿಯಾಗಿ, ನಾಜಿಮ್ ಅಂಗಡಿಯಲ್ಲಿ ಅಡಗಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: Raksha Bandhan 2023: ತಂಗಿ ಮೇಲೆಯೇ ಅತ್ಯಾಚಾರ; ದುಷ್ಟನಿಗೆ ರಕ್ಷಾಬಂಧನ ದಿನವೇ 20 ವರ್ಷ ಜೈಲು!
ಗೆಳತಿಯೇ ಮಾಡಿದಳು ಮೋಸ
ಮುಸ್ಲಿಂ ಮಹಿಳೆಯಿಂದ ದಲಿತ ಮಹಿಳೆಯು 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲದ ಹಣವನ್ನು ವಾಪಸ್ ಕೊಡುತ್ತೇನೆ ಎಂದು ದಲಿತ ಮಹಿಳೆಯು ಮುಸ್ಲಿಂ ಮಹಿಳೆಗೆ ತಿಳಿಸಿದ್ದರು. ಆಗ ಮುಸ್ಲಿಂ ಮಹಿಳೆಯು ಹೋಟೆಲ್‌ಗೆ ಬಾ ಎಂದು ಕರೆದಿದ್ದರು. ಆದರೆ, ಸಾಲದ ಹಣ ವಾಪಸ್ ಪಡೆದ ಬಳಿಕ ಇಬ್ಬರು ಮುಸ್ಲಿಮರು ಅತ್ಯಾಚಾರ ಎಸಗಿದ್ದಾರೆ. ಹೀಗೆ, ಗೆಳತಿಯಿಂದಲೇ ಮೋಸ ಹೋದ ದಲಿತ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.