Site icon Vistara News

Dead Body Found : ಡ್ಯಾಂನಲ್ಲಿ ಬಿದ್ದಿತ್ತು ವ್ಯಕ್ತಿ ಶವ; ರೈಲು ಬೋಗಿ ಒಳಗೆ ಕೊಳೆಯುತ್ತಿತ್ತು ಮಹಿಳೆಯ ಡೆಡ್‌ಬಾಡಿ

Dead Body Found

ತುಮಕೂರು/ವಿಜಯನಗರ : ಬೋರನಕಣಿವೆ ಡ್ಯಾಂನಲ್ಲಿ ವ್ಯಕ್ತಿಯ ಮೃತದೇಹ (Dead Body Found) ಪತ್ತೆಯಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಡ್ಯಾಂನಲ್ಲಿ ಘಟನೆ ನಡೆದಿದೆ. ಸುಮಾರು 45 ವರ್ಷದ ವ್ಯಕ್ತಿಯ ಮೃತದೇಹ ಎನ್ನಲಾಗುತ್ತಿದ್ದು, ಗುರುತು ಪತ್ತೆಯಾಗಿಲ್ಲ.

ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Dead Body Found

ಇತ್ತ ದುರಸ್ತಿಗಾಗಿ ಬಿಟ್ಟಿದ್ದ ರೈಲು ಬೋಗಿ ಒಳಗೆ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ವಿಜಯನಗರದ ಹೊಸಪೇಟೆ ರೈಲು ನಿಲ್ದಾಣದ ಬಳಿ ಕಂಡಮ್ಡ್ ಕೋಚ್‌ನಲ್ಲಿ ಶವ ಪತ್ತೆಯಾಗಿದೆ. ಒಂದು ವಾರದ ಹಿಂದೆ ರೈಲು ಬೋಗಿಯಲ್ಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ರೈಲು ಬೋಗಿಯಲ್ಲಿ ಕೆಟ್ಟ ವಾಸನೆ ಬಂದ ಬಳಿಕ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ರೈಲ್ವೆ ಪೊಲೀಸರು ಇದು ಕೊಲೆ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆ‌ ಕೈಗೊಂಡಿದ್ದಾರೆ. ಬಳ್ಳಾರಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Dead Body Found

ಇದನ್ನೂ ಓದಿ: Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಲೈಂಗಿಕ ಕಾರ್ಯಕರ್ತರು, ವೇಶ್ಯೆಯರ ನಡುವೆ ವ್ಯತ್ಯಾಸಗಳಿವೆ ಎಂದ ʻಹೀರಾಮಂಡಿʼನಟ!

ಬೆಂಗಳೂರು: ನಟ ಶೇಖರ್ ಸುಮನ್ (Shekhar Suman) ಅವರು ಲೈಂಗಿಕ ಕಾರ್ಯಕರ್ತರು ಮತ್ತು ವೇಶ್ಯೆಯರ ನಡುವಿನ ವ್ಯತ್ಯಾಸದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇವರ ಸಮಾಜದ ಉತ್ಪನ್ನಗಳು ಮತ್ತು ಅವರನ್ನು ಒಟ್ಟಿಗೆ ವರ್ಗೀಕರಿಸಬಾರದು ಎಂದು ಸಂದರ್ಶನದಲ್ಲಿ ಹೇಳಿದರು. ʻʻವೇಶ್ಯೆಯರನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಅನ್ಯಾಯವಾಗಿ ಲೈಂಗಿಕ ಕಾರ್ಯಕರ್ತೆಯರೆಂದು ಲೇಬಲ್ ಮಾಡಲಾಗುತ್ತದೆʼʼ ಎಂದು ಹೇಳಿದರು.

“ವೇಶ್ಯೆಯರನ್ನು ಈ ರೀತಿ ಲೈಂಗಿಕ ಕಾರ್ಯಕರ್ತೆಯರೆಂದು ತೋರಿಸುವಂತೆ ಮಾಡಿದ್ದು ಸಮಾಜವೇ. ಯಾವುದೇ ಮಹಿಳೆ ಆಯ್ಕೆಯಿಂದ ವೇಶ್ಯೆಯಾಗುವುದಿಲ್ಲ. ಆದರೆ ಸಂದರ್ಭಗಳು ಹೆಚ್ಚಾಗಿ ಮಹಿಳೆಯನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಮಾಡುತ್ತವೆ. ಈ ಎಲ್ಲದರ ಹೊರತಾಗಿಯೂ, ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ. ಪುರುಷರ ಲೈಂಗಿಕ ಹಸಿವನ್ನು ಲೈಂಗಿಕ ಕಾರ್ಯಕರ್ತರಿಂದ ನೀಗಿಸಿಕೊಳ್ಳುತ್ತಿದ್ದಾರೆʼʼಎಂದರು.

ಶೇಖರ್ ಸುಮನ್ ಮಾತನಾಡಿ ʻʻಹೀರಾಮಂಡಿಯಲ್ಲಿ ಜನರು ಕಲೆ ಮತ್ತು ಸಂಗೀತದಂತಹ ವಿವಿಧ ಕೌಶಲ್ಯಗಳನ್ನು ಕಲಿಯಲು ಹೋದ ಸ್ಥಳವಾಗಿತ್ತು. ಮಕ್ಕಳನ್ನು ಅಲ್ಲಿಗೆ ಕಳುಹಿಸಲಾಗುತ್ತಿತ್ತು. ನವಾಬರು ಅವರಿಂದ ಅನೇಕ ವಿಚಾರಗಳನ್ನು ಕಲಿಯುತ್ತಿದ್ದರು. ಹೀರಾಮಂಡಿಯವರ ಕೊಡುಗೆ ಅಪಾರವಾಗಿತ್ತು, ಅದೊಂದು ಸಂಸ್ಥೆಯಾಗಿತ್ತು, ಆದರೆ ನಾವು ಯಾವಾಗಲೂ ವೇಶ್ಯೆಯರನ್ನು ವಿಭಿನ್ನ ಅರ್ಥದಲ್ಲಿ ನೋಡುತ್ತಿದ್ದೇವು. ಹೀರಾಮಂಡಿಯಲ್ಲಿ, ಸ್ವಾತಂತ್ರ್ಯ ಚಳವಳಿಗೆ ವೇಶ್ಯೆಯರ ಕೊಡುಗೆಯನ್ನು ಸಹ ತೋರಿಸಲಾಗಿದೆʼʼಎಂದರು. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಶೇಖರ್ ಸುಮನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ನಟ ಶೇಖರ್‌ ಸುಮನ್‌, ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ ಬಿಜೆಪಿ ಸೇರ್ಪಡೆ

ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟ ಶೇಖರ್‌ ಸುಮನ್‌(Shekhar Suman) ಕೆಲವು ದಿನಗಳ ಹಿಂದೆ ಬಿಜೆಪಿ(BJP). ಸೇರ್ಪಡೆಗೊಂಡಿದ್ದರು. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶೇಖರ್‌ ಸುಮನ್‌ ಮತ್ತು ರಾಧಿಕಾರನ್ನು ಬಿಜೆಪಿ ಪ್ರಧಾನ ಕಾರ್ಯಕದರ್ಶಿ ವಿನೋದ್‌ ತಾವ್ಡೆ ಸ್ವಾಗತಿಸಿದ್ದರು.

ಈ ವೇಳೆ ಶೇಖರ್‌ ಸುಮನ್‌ ಮಾತನಾಡಿದ್ದು, ನಿನ್ನೆಯವರೆಗೆ ನಾನು ಇಲ್ಲಿ ಬಂದು ಕೂರುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ. ಜೀವನದಲ್ಲಿ ನಡೆದ ಅನೇಕ ಘಟನೆಗಳಿಂದಾಗಿ ನಾನು ಇಂದು ಇಲ್ಲಿ ಬಂದಿದ್ದೇನೆ. ಬಹಳ ಧನಾತ್ಮಕ ಚಿಂತನೆಯೊಂದಿಗೆ ನಾನು ಇಲ್ಲಿ ಬಂದಿದ್ದೇನೆ. ಇಲ್ಲಿ ಬರಲು ಪ್ರೇರೇಪಿಸಿದ ದೇವರಿಗೆ ನಾನು ಆಭಾರಿ ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version