Site icon Vistara News

ಮಧ್ಯಪ್ರದೇಶ ಸಚಿವರ ಮನೆಯಲ್ಲೆ ಸೊಸೆಯ ಶವ ಪತ್ತೆ

ಭೋಪಾಲ್: ಮಧ್ಯಪ್ರದೇಶದ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಶವ ಮನೆಯಲ್ಲೆ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. 22ವರ್ಷದ ಸವಿತಾ ಪರ್ಮಾರ್ ಕಳೆದ ಮೂರು ವರ್ಷದ ಹಿಂದೆ ಇಂದರ್ ಸಿಂಗ್ ಪರ್ಮಾರ್ ಪುತ್ರನನ್ನು ಮದುವೆ ಆಗಿದ್ದರು.

ಪರ್ಮಾರ್‌ ಪುತ್ರ ದೇವರಾಜ್ ಸಿಂಗ್ ಅವರನ್ನು ವಿವಾಹವಾಗಿದ್ದ ಸವಿತಾ ಪರ್ಮಾರ್ ಶವ ಶಾಜಾಪುರ ಜಿಲ್ಲೆಯಲ್ಲಿರುವ ಮನೆಯಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ “ಕುಟುಂಬದ ಸಮಸ್ಯೆ” ಕಾರಣ ಎಂದು ತಿಳಿಸಲಾಗಿದೆಯಾದರೂ ಇನ್ನೂ ಪೊಲೀಸರು ಏನನ್ನೂ ದೃಢೀಕರಿಸಿಲ್ಲ. ಶವವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ | ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟೆಂಪೋ

Exit mobile version