ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಿಯತಮನಿಂದಲೇ ಹಿಂದು ಯುವತಿ ಶ್ರದ್ಧಾ ವಾಳ್ಕರ್ ಹತ್ಯೆಯಾದ ಬೆನ್ನಲ್ಲೇ ಮತ್ತೊಂದು ಭೀಕರ ಹತ್ಯೆ ನಡೆದಿದೆ. 16 ವರ್ಷದ ಹಿಂದು ಬಾಲಕಿಗೆ ಆಕೆಯ ಬಾಯ್‌ಫ್ರೆಂಡ್ (Delhi Murder) ಸುಮಾರು 40 ಬಾರಿ ಚಾಕು ಇರಿದು, 20ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ, ಒದ್ದು ಭೀಕರವಾಗಿ ಹತ್ಯೆಗೈದಿದ್ದಾನೆ. ಕ್ರೂರವಾಗಿ ಹತ್ಯೆ ಮಾಡಿರುವ ವಿಡಿಯೊ ಈಗ ವೈರಲ್ ಆಗಿದೆ.
ದೆಹಲಿಯ ಉತ್ತರ ರೋಹಿಣಿ ಪ್ರದೇಶದಲ್ಲಿ ಭೀಕರ ಘಟನೆ ನಡೆದಿದೆ. 16 ವರ್ಷದ ಸಾಕ್ಷಿ ಹಾಗೂ 20 ವರ್ಷದ ಸಾಹಿಲ್ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಜಗಳವಾಗಿತ್ತು. ಭಾನುವಾರ (May 28) ಸಾಕ್ಷಿಯು ಬರ್ತ್‌ಡೇ ಪಾರ್ಟಿಗೆಂದು ಗೆಳತಿಯ ಮನೆಗೆ ತೆರಳುತ್ತಿದ್ದಳು. ಇದೇ ವೇಳೆ ಸಾಕ್ಷಿಯನ್ನು ಅಡ್ಡಹಾಕಿದ ಸಾಹಿಲ್ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಲ್ಲಿದೆ ಭೀಕರ ವಿಡಿಯೊ
Video: Live murder of a 16-year-old girl by a boy in Northwest Delhi’s Shahbad Dairy area. The accused first stabbed her multiple times in full public view and then crushed her under the cement brick.#Delhi #DelhiCrime #DelhiMurder #Murder #CrimeAgainstWomen pic.twitter.com/7j3POZz8KT
— Shalini Thakur (@ShaliniThakur05) May 29, 2023
ಸಾಕ್ಷಿಯನ್ನು ಅಡ್ಡಗಟ್ಟಿದವನೇ ಸತತವಾಗಿ ಚಾಕುವಿನಿಂದ ಇರಿದಿದ್ದಾನೆ. ಜನಸಂದಣಿ ಪ್ರದೇಶಲ್ಲಿಯೇ ಬಾಲಕಿಗೆ ಚಾಕು ಇರಿದಿದ್ದು, ಜನ ಬಿಡಿಸಲು ಬಂದರೂ ಆತನು ಚಾಕು ಇರಿದಿದ್ದಾನೆ. ಸುಮಾರು ಸಲ ಚಾಕು ಇರಿದ ಬಳಿಕ ತಲೆಗೆ ಒದ್ದಿದ್ದಾನೆ. ಕೆಳಗೆ ಹಾಕಿ ತುಳಿದಿದ್ದಾನೆ. ಪದೇಪದೆ ಕಲ್ಲು ಹಾಕಿದ್ದಾನೆ. ಬಾಲಕಿ ಮೃತಪಟ್ಟಿದ್ದನ್ನು ನೋಡಿ ಸ್ವಲ್ಪ ದೂರ ಹೋದ ಯುವಕನು ಮತ್ತೆ ಬಂದು ಕಲ್ಲು ಎತ್ತಿಹಾಕಿ ಕ್ರೌರ್ಯ ಮೆರೆದಿದ್ದಾನೆ.
Sahil, accused of the 16-year-old girl murder case in Delhi has been arrested near Bulandshahr, Uttar Pradesh.
— ANI (@ANI) May 29, 2023
(Source: Police) pic.twitter.com/TtGnRAR37B
ಇದನ್ನೂ ಓದಿ: Farmer Suicide: ಸಾಲಭಾದೆ ತಾಳದೆ ಇಬ್ಬರು ರೈತರ ಆತ್ಮಹತ್ಯೆ
ವಿಡಿಯೊ ವೈರಲ್ ಆಗಿ ಜನರಿಂದ ಆಕ್ರೋಶ ವ್ಯಕ್ತವಾಗುತ್ತಲೇ ಪೊಲೀಸರು ತಂಡವನ್ನು ರಚಿಸಿ, ಆರೋಪಿ ಸಾಹಿಲ್‌ನನ್ನು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ. ಇದಾದ ಬಳಿಕ ಸಾಹಿಲ್‌ನನ್ನು ಬುಲಂದ್‌ಶಹರ್‌ನಲ್ಲಿ ಬಂದಿಸಲಾಗಿದೆ.