Site icon Vistara News

Delhi Excise Policy Case | ಮಂಗಳೂರು, ಬೆಂಗಳೂರು ಸೇರಿ ದೇಶದ 40 ಕಡೆ ಇ.ಡಿ ದಾಳಿ

E D

ನವ ದಹೆಲಿ: ದಿಲ್ಲಿ ಲಿಕ್ಕರ್ ಪಾಲಿಸಿ ಹಗರಣಕ್ಕೆ (Delhi Excise Policy Case) ಸಂಬಂಧಿಸಿದಂತೆ ಬೆಂಗಳೂರು, ಮಂಗಳೂರು ಮತ್ತು ಹೈದ್ರಾಬಾದ್ ಸೇರಿದಂತೆ ದೇಶಾದ್ಯಂತ 40 ಕಡೆ ಶುಕ್ರವಾರ ಜಾರಿ ನಿರ್ದೇಶನಾಲಯ(ಇ.ಡಿ)ವು ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 6ರಂದು ಇ.ಡಿ, ದಿಲ್ಲಿ ಸೇರಿದಂತೆ 53ಕ್ಕೂ ಹೆಚ್ಚು ಕಡೆ ದಾಳಿ ನಡೆಸಿತ್ತು. ಇದೀಗ ಎರಡನೇ ಬಾರಿಗೆ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ.

ದಿಲ್ಲಿಯಲ್ಲಿ ಆಪ್ ಸರ್ಕಾರ ಜಾರಿಗೆ ತಂದಿದ್ದ ಲಿಕ್ಕರ್ ನೀತಿ ರಚನೆಯಲ್ಲಿ ನೆರವಾಗಿದ್ದ ಮದ್ಯ ಉತ್ಪಾದಕರು ಸೇರಿದಂತೆ ಮಾರಾಟಗಾರ ಸ್ಥಗಳ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅದರ ಮುದುವರಿದ ಭಾಗವಾಗಿಯೇ, ಇ.ಡಿ ಮತ್ತೆ ದಾಳಿಯನ್ನು ಕೈಗೊಂಡಿದೆ.

ದಿಲ್ಲಿ ಎಕ್ಸೈಜ್ ಪಾಲಿಸಿಯನ್ನು ಆಮ್ ಆದ್ಮಿ ಪಾರ್ಟಿ ಸರ್ಕಾರವು 2021ರ ನವೆಂಬರ್‌ನಲ್ಲಿ ಜಾರಿಗೆ ತಂದಿತ್ತು. ಈ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಸಿಬಿಐ ದಾಖಲಿಸಿದ ಎಫ್ಐಆರ್ ಆಧಾರವಾಗಿಟ್ಟುಕೊಡು ಜಾರಿ ನಿರ್ದೇಶನಾಲಯವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ. ಲಿಕ್ಕರ್ ಪಾಲಿಸಿ ಅನುಷ್ಠಾನದಲ್ಲಿ ಭಾರೀ ಹಗರಣ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಹಗರಣದಲ್ಲಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಭಾಗಿಯಾಗಿದ್ದಾರೆಂದು ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಇತ್ತೀಚೆಗೆ ಅವರ ನಿವಾಸದ ಮೇಲೂ ದಾಳಿ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ | ಅಬಕಾರಿ ಹಗರಣದಲ್ಲಿ ಸಿಸೋಡಿಯಾ ಅರೆಸ್ಟ್‌ ಖಾತ್ರಿ? ಬಿಜೆಪಿ ಮೇಲಿನ ಸರಣಿ ಆರೋಪದಿಂದ ಸುಳಿವು

Exit mobile version