ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದ ದಿನವೇ ಭೀಕರ (Accident In Delhi) ಅಪಘಾತ (Accident In Delhi) ಸಂಭವಿಸಿದೆ. ಸುಲ್ತಾನ್‌ಪುರಿಯಲ್ಲಿ 20 ವರ್ಷದ ಯುವತಿಯು ಸ್ಕೂಟಿ ಓಡಿಸುವಾಗ ಕಾರು ಡಿಕ್ಕಿಯಾಗಿದೆ. ಅಪಘಾತದ ಬಳಿಕ ಏನಾಗಿದೆ ಎಂಬುದನ್ನೂ ನೋಡದ ಕಾರು ಚಾಲಕ ಹಾಗೆಯೇ ಕಾರು ಚಲಾಯಿಸಿದ್ದಾನೆ. ಆದರೆ, ಕಾರಿನ ಅಡಿಯಲ್ಲಿ ಯುವತಿ ಸಿಲುಕಿದ್ದು, ಆಕೆಯನ್ನು 12 ಕಿ.ಮೀ ಎಳೆದುಕೊಂಡು ಹೋಗಲಾಗಿದೆ. ಇದರಿಂದಾಗಿ ಯುವತಿ ಮೃತಪಟ್ಟಿದ್ದು, ಕಾರಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಸುಲ್ತಾನ್‌ಪುರಿಯಲ್ಲಿ ಅಪಘಾತ ನಡೆದಿದ್ದು, ಯುವತಿಯನ್ನು ಕಂಝಾವಲ್‌ವರೆಗೆ ಎಳೆಯಲಾಗಿದೆ. ಮಾರುತಿ ಸುಜುಕಿ ಬನೇನೊ ಕಾರಿನ ಅಡಿಗೆ ಯುವತಿ ಸಿಲುಕಿರುವುದನ್ನು ಕಂಡ ಅಪರಿಚಿತರು ರೋಹಿಣಿ ಜಿಲ್ಲೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಭಾನುವಾರ ಬೆಳಗಿನ ಜಾವ 3.24ರ ಸುಮಾರಿಗೆ ಕರೆ ಮಾಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲಿ ಮತ್ತೆ ಕರೆ ಬಂದಿದ್ದು, ರಸ್ತೆ ಮೇಲೆ ಯುವತಿಯ ಶವ ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಬಳಿಕ ಕಾರಿನಲ್ಲಿದ್ದ ಐವರನ್ನು ಬಂಧಿಸಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಎಲ್ಲರೂ ಮದ್ಯಪಾನ ಮಾಡಿದ್ದರು ಎಂದು ಶಂಕಿಸಲಾಗಿದೆ. ಕಾರಿನ ಸಂಖ್ಯೆ ಆಧರಿಸಿ ಐವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಯುವತಿಯು ಅಮನ್ ವಿಹಾರ್ ನಿವಾಸಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Road Accident | ಹಲವರ ಬಾಳಲ್ಲಿ ಕತ್ತಲೆ ತಂದ ಹೊಸ ವರ್ಷದ ಮೊದಲ ದಿನ; ವಿವಿಧೆಡೆ ಅಪಘಾತಗಳಿಗೆ 10 ಮಂದಿ ಸಾವು