Site icon Vistara News

Blackmail Case : ಶಾಸಕ ಜೆ.ಟಿ ಪಾಟೀಲ್‌ ಪಿಎ ಬ್ಲ್ಯಾಕ್‌ಮೇಲ್‌; ದಿನೇಶ್‌ ಗುಂಡೂರಾವ್‌ ಆಪ್ತ ಕಾರ್ಯದರ್ಶಿ ದೂರು

Blackmail case against Beelagi MLAs Personal Assistance

ಬೆಂಗಳೂರು: ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರ ಆಪ್ತ ಕಾರ್ಯದರ್ಶಿ ಕೆ.ಎ ಹಿದಾಯತುಲ್ಲಾ ವಿರುದ್ಧ ಬಾಗಲಕೋಟೆ ಬೀಳಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಜೆ.ಟಿ. ಪಾಟೀಲ್ (Congress MLA) ಸ್ಪೀಕರ್‌ಗೆ ದೂರು ನೀಡಿದ್ದರು. ಇದೀಗ ಹಿದಾಯತುಲ್ಲಾ ಅವರು ಜಿ.ಟಿ. ಪಾಟೀಲ್‌ ಪಿ.ಎ ಪ್ರಕಾಶ್‌ ಬೀಳಗಿ ವಿರುದ್ಧ ವಿಧಾನ ಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕಾಶ್‌ ಬೀಳಗಿ ವಿರುದ್ಧ ಬ್ಲ್ಯಾಕ್‌ ಮೇಲ್‌ ಆರೋಪ (Blackmail Case) ಮಾಡಲಾಗಿದೆ.

ಆರೋಗ್ಯ ಸಚಿವ ಕೆ.ಎ. ಹಿದಾಯತುಲ್ಲಾ ಅವರ ಬಳಿ ನಮ್ಮ ಕ್ಷೇತ್ರದ ಯಾವುದೇ ಸಮಸ್ಯೆ ಹೇಳಿದರೂ ಸ್ಪಂದನೆ ಇಲ್ಲ. ಸರಿಯಾದ ಮಾಹಿತಿ ಕೊಡುವುದಿಲ್ಲ, ತೀರಾ ಒರಟುತನ ಮತ್ತು ಧಿಮಾಕಿನಿಂದ ಉತ್ತರಿಸುತ್ತಾರೆ. ಅವರ ವರ್ತನೆಯಿಂದ ನೋವಾಗಿದೆ ಮತ್ತು ಕ್ಷೇತ್ರದ ಕೆಲಸಗಳಿಗೆ ತೊಂದರೆಯಾಗಿದೆ ಎಂದು ಜೆ.ಟಿ. ಪಾಟೀಲ್‌ ಅವರು ಸ್ಪೀಕರ್‌ ಅವರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು.

ಈಗ ಹಿದಾಯತುಲ್ಲಾ ಸರದಿ, ಜೆ.ಟಿ. ಪಾಟೀಲ್‌ ಮೇಲೆ ದೂರು

ಶಾಸಕ ಜೆ.ಟಿ ಪಾಟೀಲ್ ಅವರ ಆಪ್ತ ಸಹಾಯಕ ಪ್ರಕಾಶ್ ಬೀಳಗಿ ವರ್ಗಾವಣೆಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆ.ಎ ಹಿದಾಯತುಲ್ಲಾ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕಾಶ್ ಬೀಳಗಿ ಅವರು ಬೇರೆ ಬೇರೆ ಇಲಾಖೆಯ ಸಚಿವರ ಪತ್ರಗಳನ್ನ ನೀಡಿ ವರ್ಗಾವಣೆಗೆ ಒತ್ತಡ ಹೇರುತ್ತಿದ್ದರು. ಶಾಸಕ ಜೆ.ಟಿ ಪಾಟೀಲ್ ಅವರಿಗೆ ಸಂಬಂಧವೇ ಇಲ್ಲದ ಕೆಲಸಗಳನ್ನು ಮಾಡಿಕೊಡುವಂತೆ ಪಟ್ಟು ಹಿಡಿಯುತ್ತಿದ್ದರು. ಅವರ ಬ್ಲಾಕ್ ಮೇಲ್ ತಂತ್ರಗಳಿಗೆ ಬಗ್ಗದಿದ್ದಾಗ, ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಬೆದರಿಕೆ ಹಾಕಿದ್ದಾರೆ. ಅವರು ವರ್ಗಾವಣೆ ದಂಧೆ ನಡೆಸುತ್ತಿರುವ ಸಾಧ್ಯತೆ ಇದೆ ಎಂದು ಎಂದು ಅರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಕೆ.ಎ ಹಿದಾಯತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಕೆಲವು ದಾಖಲೆಗಳು, ವಾಟ್ಸ್ ಅಪ್ ಸಂದೇಶಗಳನ್ನು ಕೂಡಾ ದೂರಿನೊಂದಿಗೆ ನೀಡಿದ್ದಾರೆ.

ನನ್ನ ವಿರುದ್ಧ ಪತ್ರ ಬರೆದಿರುವುದು ಕೂಡಾ ಶಾಸಕರ ದಾರಿ ತಪ್ಪಿಸಿ ಮಾಡಿದ ಕೃತ್ಯವಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿ ಕೆಲಸಗಳನ್ನು ಸಚಿವರ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಆದರೆ, ಪ್ರಕಾಶ್‌ ಬೀಳಗಿ ಅವರು ಬೇರೆ ಬೇರೆ ಇಲಾಖೆಯ ಸಚಿವರ ಪತ್ರ ಹಿಡಿದು ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಅದಕ್ಕೆ ಸೊಪ್ಪು ಹಾಕದೆ ಇದ್ದಾಗ ಬೆದರಿಕೆ ಹಾಕುವ ತಂತ್ರ ಅನುಸರಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಫಾರ್ಮಸಿ ಕಾಲೇಜಿಗೆ ಅನುಮತಿ ಕೇಳಿದ್ದ ಪ್ರಕಾಶ್‌ ಬೀಳಗಿ!

ಪ್ರಕಾಶ್‌ ಬೀಳಗಿ ಅವರು ಶಾಸಕರ ಪಿಎ ಎಂಬ ಪದನಾಮದ ಅಡಿಯಲ್ಲಿ ವರ್ಗಾವಣೆ ದಂಧೆ ಮತ್ತಿತರ ಕೃತ್ಯಗಳನ್ನು ಮಾಡಿಕೊಂಡಿರುವ ಶಂಕೆ ಇದೆ. ಅವರು ಚಿತ್ರದುರ್ಗದಲ್ಲಿ ಮೈಲಾರ ಲಿಂಗೇಶ್ವರ ಫಾರ್ಮಸಿ ಕಾಲೇಜಿಗೆ ಅನುಮತಿ ಕೋರಿ ಪತ್ರ ಸಲ್ಲಿಸಿದ್ದರು. ಆದರೆ, ಫಾರ್ಮಸಿ ಕಾಲೇಜಿಗೂ, ಶಾಸಕ ಜೆ.ಟಿ ಪಾಟೀಲ್ ಅವರಿಗೂ ಯಾವುದೇ ಸಂಬಂಧವೇ ಇಲ್ಲ ಎಂಬ ಉದಾಹರಣೆಯನ್ನು ನೀಡಿದ್ದಾರೆ. ಅವರ ಮೇಲೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ನೀಡಿದ ವರ್ಗಾವಣೆ ಕೋರಿಕೆಗಳನ್ನು ತಡೆ ಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Dinesh Gundurao : ಅನ್ನ ಹಳಸಿತ್ತು, ನಾಯಿ ಹಸಿದಿತ್ತು; JDS-BJP ಮೈತ್ರಿ ಗೇಲಿ ಮಾಡಿದ ದಿನೇಶ್‌ ಗುಂಡೂರಾವ್‌ಗೆ ಸಖತ್‌ ಕ್ಲಾಸ್

ಕಚೇರಿಯ ಸಿಬ್ಬಂದಿಗಳಿಗೂ ಬೆದರಿಕೆ

ಪ್ರಕಾಶ್‌ ಬೀಳಗಿ ಅವರು ನನಗೆ ಮಾತ್ರವಲ್ಲ ನಮ್ಮ ಕಚೇರಿಯ ಸಿಬ್ಬಂದಿಗೂ ಬೆದರಿಕೆ ಹಾಕಿದ್ದಾರೆ. ನಾನು ಕಚೇರಿಯಲ್ಲಿ ಇಲ್ಲದಿರುವಾಗ, ನಮ್ಮ ಕಚೇರಿಯ ಸಿಬ್ಬಂದಿಗಳಿಗೆ ಹೆದರಿಸಿ, ಬೆದರಿಕೆ ಹಾಕುವ ಯತ್ನ ನಡೆಸಿದ್ದಾರೆ. ಇದಲ್ಲದಕ್ಕೂ ಬಗ್ಗದಿರುವಾಗ ಅಪಪ್ರಚಾರದ ದಾರಿ ಹಿಡಿದಿದ್ದಾರೆ ಎಂದು ಕೆ.ಎ. ಹಿದಾಯತುಲ್ಲಾ ಆರೋಪ ಮಾಡಿದ್ದಾರೆ.

Exit mobile version