Site icon Vistara News

Director Krish: ಡ್ರಗ್ಸ್ ಪ್ರಕರಣ: ಕೇಳಿ ಬಂತು ಖ್ಯಾತ ನಿರ್ದೇಶಕನ ಹೆಸರು!

Director Krish among 10 VIPs named in drug case

ಬೆಂಗಳೂರು: ಸಿನಿರಂಗದಲ್ಲಿ ಡ್ರಗ್ಸ್‌ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸದ್ಯದ ಮಟ್ಟಿಗೆ ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಸ್ವತಃ ಪೊಲೀಸರೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಇದೀಗ ಡ್ರಗ್ಸ್‌ ಪ್ರಕರಣದಲ್ಲಿ ಪವನ್ ಕಲ್ಯಾಣ್ ಅವರಂತಹ ನಟರಿಗೆ ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕನ (Director Krish) ಹೆಸರು ಕೇಳಿ ಬಂದಿದೆ. 10 ವಿಐಪಿಗಳಲ್ಲಿ ನಿರ್ದೇಶಕ ಕ್ರಿಶ್, ನಟ ಲಿಶಿ ಗಣೇಶ್ (Lishi Ganesh) ಮತ್ತು ನಿರ್ಮಾಪಕ ಕೇದಾರ್ ಸೆಲಗಂಸೆಟ್ಟಿ (Kedar Selagamsetty) ಹೆಸರಿದೆ ಎಂದು ವರದಿಯಾಗಿದೆ.

ಆಂಧ್ರದ ಗಚಿಬೌಲಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್‍ ಸೇವಿಸಿದ್ದಾರೆ ಎನ್ನುವ ಆರೋಪದಡಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಈ ಒಂಬತ್ತು ಜನರಲ್ಲಿ ಖ್ಯಾತ ನಿರ್ದೇಶಕ ಕ್ರಿಶ್ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಎಫ್‌ಐಆರ್ ದಾಖಲಾಗಿದ್ದರೂ ಕ್ರಿಶ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ನಿರ್ದೇಶಕ ಕ್ರಿಶ್‌ ಅವರು ಪೊಲೀಸರ ಮುಂದೆ ʻʻಹೊಟೇಲ್‌ನಲ್ಲಿ ನಾನು 30 ನಿಮಿಷಗಳ ಕಾಲ ಇದ್ದೆ. ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದೆ. ಸಂಜೆ 6:45ರ ಸುಮಾರಿಗೆ ಅಲ್ಲಿಂದ ಹೊರಟೆʼʼ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಕ್ರಿಶ್ ಹೆಸರಾಂತ ಚಿತ್ರಗಳ ನಿರ್ದೇಶಕರು. ಪವನ್ ಕಲ್ಯಾಣ್ ನಟನೆಯ ʻಹರಿ ಹರ ವೀರ ಮಲ್ಲುʼ ಚಿತ್ರವನ್ನು ಸದ್ಯ ನಿರ್ದೇಶನ ಮಾಡುತ್ತಿದ್ದಾರೆ. 

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ರಶ್ಮಿಕಾ ಮಂದಣ್ಣ?

ಈ ಕುರಿತಂತೆ ಸ್ವತಃ ತೆಲಂಗಾಣದ ಡಿಸಿಪಿ ವಿನೀತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ʻʻಈಗಾಗಲೇ ಪೆಡ್ಲರ್ ಅಬ್ಬಾಸ್ ಎನ್ನುವವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಶ್ವೇತಾ, ಸಂದೀಪ್ ಸೇರಿದಂತೆ ಹಲವರು ತಪ್ಪಿಸಿಕೊಂಡಿದ್ದಾರೆ. ನಿರ್ದೇಶಕ ಕ್ರಿಶ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೋ ಎಲ್ಲವೋ ಎನ್ನುವುದು ತನಿಖೆ ಆಗುತ್ತಿದೆʼʼ ಎಂದಿದ್ದಾರೆ ಡಿಸಿಪಿ.

ಸೈಬರಾಬಾದ್ ಸಿಪಿ ಅವಿನಾಶ್ ಮೊಹಂತಿ ಅವರು ನಿರ್ಮಾಪಕ ಕೇದಾರ್ ಡ್ರಗ್ಸ್ ಸೇವಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಂಧಿತರಲ್ಲಿ ಒಬ್ಬರಾದ ಬಿಜೆಪಿ ಮುಖಂಡ ಯೋಗಾನಂದ್ ಅವರ ಪುತ್ರ ಗಜ್ಜಲ ವಿವೇಕಾನಂದ ಹೆಸರು ಕೂಡ ಕೇಳಿ ಬಂದಿದೆ. 2022ರಲ್ಲಿ ಅದೇ ಹೋಟೆಲ್‌ನಲ್ಲಿ ಮಿಂಕ್ ಪಬ್ ಡ್ರಗ್ ಪ್ರಕರಣದಲ್ಲಿ ಲಿಶಿ ಮತ್ತು ಅವರ ಸಹೋದರಿ ಕುಶಿತಾ ಅವರ ಹೆಸರೂ ಇತ್ತು. ಹೈದರಾಬಾದ್‌ನಲ್ಲಿ ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಟಾಲಿವುಡ್‌ನಲ್ಲಿ ಖ್ಯಾತರು ಇರುವುದು ಇದೇನು ಮೊದಲಲ್ಲ. ಇತ್ತೀಚೆಗಷ್ಟೆ ಬಿಗ್‌ಬಾಸ್‌ ಷಣ್ಮುಖ್ ಜಸ್ವಂತ್ ಗಾಂಜಾ ಸೇವೆನೆಯಲ್ಲಿ ಸಿಲುಕಿಕೊಂಡಿದ್ದಾರೆ.

Exit mobile version