ನಾಗ್ಪುರ: 40 ವರ್ಷದ ವ್ಯಕ್ತಿಯೊಬ್ಬ ನಾಗಪುರದ ಶಾಹು ನಗರದ ಮೈದಾನವೊಂದರಲ್ಲಿ ಹೆಣ್ಣು ಬೀದಿ ನಾಯಿಯ ಮೇಲೆ ಅತ್ಯಾಚಾರ ನಡೆಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ(Disgusting Act). ಈ ವಿಷಯ ಗೊತ್ತಾಗುತ್ತಿದ್ದಂತೆ ನಾಗ್ಪುರ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ನಾಯಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ಆರೋಪಿ 40 ವರ್ಷದ ವ್ಯಕ್ತಿಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಈ ಆರೋಪಿಯು ಮಧ್ಯಪ್ರದೇಶ ರಾಜ್ಯದ ಬಾಲಘಾಟ್ ಜಿಲ್ಲೆಯವನಾಗಿದ್ದು, ನಾಗ್ಪುರದಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ಎಂದು ಹುದಕೇಶ್ವರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಲಿತ್ ವರ್ಟಿಕರ್ ಅವರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ತಡೆ ಕಾಯ್ದೆಯಡಿ 377(ಅನೈಸರ್ಗಿಕ ಲೈಂಗಿಕ ಕ್ರಿಯೆ) ಹಾಗೂ 294(ಅಶ್ಲೀಲತೆ) ಮತ್ತು ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ | ಹೈದರಾಬಾದ್ ಅಪ್ರಾಪ್ತೆ ಗ್ಯಾಂಗ್ ರೇಪ್; ಟಿಆರ್ಎಸ್ ಮುಖಂಡನ ಪುತ್ರ ಸೇರಿ ಇಬ್ಬರ ಬಂಧನ