ಪಾಟ್ನಾ, ಬಿಹಾರ: ಬಿಹಾರದ ಹಾಜಿಪುರದಲ್ಲಿ(Bihar) ಮರ್ಯಾದಾ ಹತ್ಯೆ ನಡೆದಿದ್ದು(Dishonour Killing), ಪೋಷಕರು ತಮ್ಮ 18 ಮತ್ತು 16 ವರ್ಷದ ಇಬ್ಬರು ಪುತ್ರಿಯರನ್ನು ಕೊಲೆ ಮಾಡಿದ್ದಾರೆ. ಮೃತ ಯುವತಿಯರಿಬ್ಬರು ಅನ್ಯ ಜಾತಿಯ ಹುಡುಗರರೊಂದಿಗೆ ಸಂಬಂಧ ಹೊಂದಿದ್ದರು ಎಂದು ಅವರ ತಾಯಿ ರಿಂಕು ದೇವಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪುತ್ರಿಯರನ್ನು ಕೊಲೆ ಮಾಡಿ ಅದೇ ಸ್ಥಳದಲ್ಲಿ ತಾಯಿ ರಿಂಕು ದೇವಿ ಕುಳಿತುಕೊಂಡಿದ್ದಳು. ಆದರೆ, ಆಕೆಯ ಗಂಡ ನರೇಶ್ ಬೈಥಾ ಮಾತ್ರ ಪರಾರಿಯಾಗಿದ್ದಾನೆ. ಪುತ್ರಿಯರು ಇಬ್ಬರು, ಅನ್ಯ ಜಾತಿಯ ಹುಡುಗರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ತಾಯಿ, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ತಿಳಿಸಿದ್ದಾರೆ.
ತಾಯಿಯನ್ನು ವಶಪಕ್ಕೆ ಪಡೆದುಕೊಂಡ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ಇಬ್ಬರೂ ಹುಡುಗಿಯರು ಬೇರೆ ಬೇರೆ ಜಾತಿಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಆಗಾಗ ಪಾಲಕರಿಗೆ ತಿಳಿಸದೆ ಮನೆ ಬಿಟ್ಟು ಹೋಗುತ್ತಿದ್ದ ಬಾಲಕಿಯರನ್ನು ಕೊಂದಿರುವುದಾಗಿ ಹೇಳಿದ್ದಾಳೆ. ಆರಂಭದ ತನಿಖೆ ವೇಳೆ, ಈ ಕೊಲೆಯಲ್ಲಿ ಗಂಡ- ಹೆಂಡತಿ ಇಬ್ಬರೂ ಭಾಗಿಯಾಗಿದ್ದಾರೆ ಎಂಬುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Murder Case | 11 ವರ್ಷಗಳ ಬಳಿಕ ಬೆಳಕಿಗೆ ಬಂತು ಮರ್ಯಾದಾ ಹತ್ಯೆ, ಆರೋಪಿಗಳು ಜೈಲಿಗೆ
ಆರಂಭದಲ್ಲಿ ತಾಯಿ ಈ ಕೊಲೆಗಳನ್ನು ತಾನು ಮಾಡಿಲ್ಲ, ಹುಡುಗಿಯರ ತಂದೆ ಮಾಡಿದ್ದಾರೆ ಎಂದು ಹೇಳುತ್ತಿದ್ದಳು. ಆದರೆ, ವಿಚಾರಣೆಯನ್ನು ತೀವ್ರಗೊಳಿಸುತ್ತಿದ್ದಂತೆ ಹುಡುಗಿಯರ ಕೊಲೆಯಲ್ಲಿ ಇಬ್ಬರು ಪಾತ್ರವಿರುವುದಾಗಿ ಖಚಿತವಾಗಿದೆ ಎಂದು ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಓಂ ಪ್ರಕಾಶ್ ಅವರು ಹೇಳಿದ್ದಾರೆ.