Site icon Vistara News

Double Murder : ಅಮೆರಿಕಾದಲ್ಲಿ ಮೃತಪಟ್ಟ ದಾವಣಗೆರೆ ದಂಪತಿ ಕೇಸ್‌ಗೆ ಟ್ವಿಸ್ಟ್‌; ಪತಿಯೇ ಗುಂಡಿಟ್ಟು ಕೊಂದನೇ?

Davanagere based Family

ದಾವಣಗೆರೆ : ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಅವರ 6 ವರ್ಷದ ಮಗ ಅನುಮಾನಾಸ್ಪದ ಸಾವು ಪ್ರಕರಣಕ್ಕೆ (Davanagere News) ಟ್ವಿಸ್ಟ್‌ ಸಿಕ್ಕಿದೆ. ಪತ್ನಿ ಹಾಗೂ ಮಗನನ್ನು ಹತ್ಯೆ ಮಾಡಿ (Double Murder) ಪತಿಯು ಗುಂಡು ಹಾರಿಸಿಕೊಂಡು (Self Harming) ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಯೋಗೇಶ್ ಹೊನ್ನಾಳ್ (37), ಪ್ರತಿಭಾ ಹೊನ್ನಾಳ್(35), ಯಶ್ ಹೊನ್ನಾಳ್(6) ಮೃತರು.

ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದ ಬಾಲ್ಟಿಮೋರ್‌ನಲ್ಲಿ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿತ್ತು. ಕಳೆದ 9 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ, ಈ ಮೂವರ ಸಾವು ಹಲವು ಅನುಮಾನಗಳನ್ನು ಹುಟ್ಟಿಸಿತ್ತು.

ಸದ್ಯ ಪ್ರಾಥಮಿಕ ವರದಿಯಲ್ಲಿ ಮೂವರು ಗುಂಡೇಟಿನಿಂದ ಮೃತಪಟ್ಟಿದ್ದಾಗಿ ಅಮೇರಿಕಾದ ಬಾಲ್ಟಿಮೋರ್ ಕೌಂಟಿ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪತಿ, ಪತ್ನಿ ಕಲಹ ಇತ್ತು ಎನ್ನಲಾಗಿದೆ. ಕಳೆದ ಆಗಸ್ಟ್ 15ರಂದು ರಾತ್ರಿ ಮಗ ಯಶ್, ಪತ್ನಿ ಪ್ರತಿಭಾ ಹತ್ಯೆ ನಡೆಸಿ ಬಳಿಕ ಪತಿ ಯೋಗೇಶ್ ಗುಂಡು ಹಾರಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಆಗಸ್ಟ್ 18ರಂದು ಪೊಲೀಸರ ಮಾಹಿತಿಯಿಂದ ಘಟನೆ ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ.

ಇದನ್ನೂ ಓದಿ: Drowned in canal : ನೀರು ಕುಡಿಯಲು ಹೋಗಿ ಕಾಲು ಜಾರಿ ಕಾಲುವೆಗೆ ಬಿದ್ದ ಬಾಲಕ ಮೃತ್ಯು

ಮೃತದೇಹಗಳನ್ನು ಸ್ವದೇಶಕ್ಕೆ ತರುವಂತೆ ಮನವಿ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಈ ದಂಪತಿ ಕಳೆದ 9 ವರ್ಷಗಳ ಹಿಂದೆ ಮದುವೆಯಾದ ನಂತರ ಅಮೆರಿಕದಲ್ಲಿ ನೆಲೆಸಿದ್ದರು. ಮೃತ ಪತಿ ಪತ್ನಿ ಇಬ್ಬರೂ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೊದಮೊದಲು ಇದೊಂದು ಅನುಮಾನಸ್ಪಾದ ಸಾವು ಎನ್ನಲಾಗಿತ್ತು. ಹೀಗಾಗಿ ಸಾವಿಗೆ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತದೇಹಗಳನ್ನು ಸ್ವದೇಶಕ್ಕೆ ತರಲು ವ್ಯವಸ್ಥೆ ಮಾಡುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದರು.

ದಾವಣಗೆರೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಯೋಗೇಶ್ ತಾಯಿ ಶೋಭಾ ಮನವಿ ಪತ್ರ ನೀಡಿದ್ದರು. ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಡಳಿತ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನೆ ಮಾಡಿದೆ. ವಿದೇಶಾಂಗ ಸಚಿವಾಲಯ ಮೂಲಕ ಮೃತದೇಹಗಳನ್ನು ತವರಿಗೆ ತರಿಸಿಕೊಳ್ಳಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಸದ್ಯ ವಿದೇಶಾಂಗ ಸಚಿವಾಲಯದ ಉತ್ತರಕ್ಕೆ ಜಿಲ್ಲಾಡಳಿತ ಮತ್ತು ಮೃತರ ಕುಟುಂಬಸ್ಥರು ಕಾಯುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version