ಬೆಂಗಳೂರು: ಡ್ರೋನ್ ಪ್ರತಾಪ್ (Drone Prathap) `ಬಿಗ್ ಬಾಸ್ ಸೀಸನ್ʼ 10ರ ಫಿನಾಲೆ ವೀಕ್ ತಲುಪಿದ್ದಾರೆ. ಆಟಗಳನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಡ್ರೋನ್ ಪ್ರತಾಪ್ ಅವರು ಮನೆಯಲ್ಲಿ ಕೆವಲ ಆಟ ಮಾತ್ರವಲ್ಲ ವೈಯಕ್ತಿಕ ವಿಚಾರಗಳಿಗೂ ಸುದ್ದಿಯಾಗಿದ್ದರು. ಈಗಾಗಲೇ ಪ್ರತಾಪ್ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದೀಗ ಮತ್ತೆ ಡ್ರೋನ್ ಪ್ರತಾಪ್ ಅವರ ಮತ್ತೊಂದು ದೋಖಾ ಬಟಾ ಬಯಲಾಗಿದೆ. ಬ್ಯೂಸಿನೆಸ್ ಪಾರ್ಟನರ್ ʻಸಾರಂಗ್ ಮಾನೆಗೆʼ ಪ್ರತಾಪ್ ಮೋಸ ಮಾಡಿರುವ ಸುದ್ದಿ ಇದೀಗ ಬೆಳಕಿಗೆ ಬಂದಿದೆ.
ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವರು ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್‌ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು. ಪ್ರತಾಪ್ ಅವರ ಕಂಪನಿ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ʼ ಜತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದರು ಸಾರಂಗ್. ಎಂಟು ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರು ಬ್ಯೂಸಿನೆಸ್ ಪಾರ್ಟನರ್ ಸಾರಂಗ್ ಅವರನ್ನು ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ದರು. ಪ್ರತಾಪ್ ಅವರು ಸಾರಂಗ್ ಅವರಿಗೆ ಒಂಬತ್ತು ಡ್ರೋನ್ ನೀಡಬೇಕಿತ್ತು. ಹೀಗಾಗಿ ಸಾರಂಗ್ ಅವರು ಪ್ರತಾಪ್‌ಗೆ 35 ಲಕ್ಷದ 75 ಸಾವಿರ ನೀಡಿದ್ದರು. ಆದರೆ ಡ್ರೋನ್ ನೀಡಲು ಪ್ರತಾಪ್ ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದರು. ಇದಾದ ಬಳಿಕ ಎರಡು ಡ್ರೋನ್ ಅನ್ನು ಸಾರಂಗ್ ಅವರಿಗೆ ಪ್ರತಾಪ್ ನೀಡಿದ್ದರು. ಇದಾದ ಮೇಲೆ ಇನ್ನರೆಡು ಡ್ರೋನ್‌ಗಳನ್ನು ಸಾರಂಗ್‌ಗೆ ಕಳುಹಿಸಿಕೊಟ್ಟಿದ್ದರು. ಆದರೀಗ ಸಾರಂಗ್ ಈ ಬಗ್ಗೆ ಧ್ವನಿ ಎತ್ತಿದ್ದು, ನಾಲ್ಕು ಡ್ರೋನ್‌ಗಳು ಈಗ ಕೆಲಸ ಮಾಡುತ್ತಿಲ್ಲ ಬ್ಯಾಟರಿಗಳ ಕ್ಯಾಲಿಟಿ ಸರಿಯಿಲ್ಲ. ಮತ್ತೊಂದು ಹಾರಬೇಕಾದರೆ, ಕೆಳಗಡೆ ಬಿದ್ದು ಹೋಯಿತು. ನಾವೀಗ ತುಂಬಾ ಲಾಸ್ ನಲ್ಲಿದ್ದೀವಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: BBK SEASON 10: ಹೆದರೋ ಕಾಲ ಹೋಯ್ತು; ʻವಿನಯ್ʼ ಏಟಿಗೆ ತಿರುಗೇಟು ಕೊಟ್ಟ ಪ್ರತಾಪ್!
ಈ ಬಗ್ಗೆ ವಿಸ್ತಾರ ಜತೆ ಸಾರಂಗ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸಾರಂಗ್ ಮಾತನಾಡಿ ʻʻನಾನು ಇ-ಮೇಲ್ ಮೂಲಕ ವಾರ್ನಿಂಗ್ ನೀಡಿದ್ದೇನೆ ನಾನು ಲೋನ್ ಮೂಲಕ ದುಡ್ಡು ತಂದು, ರೈತರ ಬಳಿ ದುಡ್ಡು ಇಸ್ಕೋಂಡು ಪ್ರತಾಪ್‌ಗೆ ಕೊಟ್ಟಿದ್ದೆ. ಆದರೆ ಇಲ್ಲಿಯವರೆಗೆ ಆತ ಹಣ ಕೊಟ್ಟಿಲ್ಲ. ಅವರ ಪಿಎ ಸಾಗರ್ ನನಗೆ ಹೇಳಿದ್ದಾರೆ. ಪ್ರತಾಪ್ ಕಾರ್ ಸೇಲ್ ಮಾಡಿದ್ದಾನೆ ಅವನ ಬಳಿ ಹಣವಿಲ್ಲ ಎಂದು. ಕಾರ್ ಇರೋದು ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ. ಅವರ ಜತೆ ನನಗೆ ಸಂಪರ್ಕ ಇಲ್ಲ. ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಬಂದು ಕೊಡ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಸುಮ್ಮನ್ನಿದ್ದೇ. ಪ್ರತಾಪ್‌ಗೆ ಕಿರಣ್ ಮಾಧವ್ ಬೆಂಬಲ ನೀಡುತ್ತಿದ್ದರು. ನನಗೆ ಅವರಿಬ್ಬರು ಸೇರಿ ಬೆಂಗಳೂರಿನಲ್ಲಿ 20 ಸಾವಿರದ ಹೋಟೆಲ್ ಫೆಸಿಲಿಟಿ ನೀಡಿ ಬ್ಯುಸಿನೆಸ್ ಮಾಡಿದ್ದರು. ಈಗ ನೋಡಿದ್ರೆ ಈ ರೀತಿ ಮಾಡ್ತಿದ್ದಾರೆ. ನನಗೀಗ ಬಡ್ಡಿ ಎಲ್ಲವೂ ಸೇರಿ 83 ಲಕ್ಷ ರೂ. ಖರ್ಚಾಗಿದೆ. ನಮ್ಮದು ಸ್ಟಾರ್ಟ್ ಅಪ್ ಕಂಪನಿ. ನಮಗೆ ತುಂಬ ಕಷ್ಟ ಆಗಿದೆ ಡ್ರೋನ್ ಪ್ರತಾಪ್ ನಿಂದʼʼ ಎಂದು ಸಾರಂಗ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Drone Prathap: ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನ; ಆಗಿದ್ದೇನು?
ಮತ್ತೊಂದೆಡೆ ಪ್ರತಾಪ್ ವಿರುದ್ಧ ಪ್ರಯಾಗ್ ರಾಜ್ (Prayag Raj) 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ.