Site icon Vistara News

Drown In Lake: ಆಗರ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

Drown In Lake

ಬೆಂಗಳೂರು: ನಗರದ ಹೊರವಲಯದ ತಾತಗುಣಿ ಬಳಿಯ ಆಗರ ಕೆರೆಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ (Drown In Lake) ಮೃತಪಟ್ಟಿದ್ದಾರೆ. ಸ್ನೇಹಿತರ ಜತೆ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ.

ಕೆಂಗೇರಿ ಉಪನಗರ ಸರ್ಕಾರಿ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಪೃಥ್ವಿರಾಜ್, ನವೀನ್ ಮೃತರು. ಇವರು ದೊಡ್ಡಬೆಲೆ ಮೂಲದವರು ಎನ್ನಲಾಗಿದ್ದು, ಒಟ್ಟು 11 ವಿದ್ಯಾರ್ಥಿಗಳು ಆಗರ ಕೆರೆಯಲ್ಲಿ ಈಜಲು ತೆರಳಿದ್ದಾಗ, ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ.

ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಆಗಮಿಸಿ ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ | Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದಲ್ಲಿ Big breaking; ಬಳ್ಳಾರಿಯ ಶಬ್ಬೀರ್‌ NIA ವಶಕ್ಕೆ

ಹಾಡಹಗಲೇ ವಕೀಲನಿಗೆ ಚಾಕು ಇರಿತ

ಆನೇಕಲ್: ಹಾಡಹಗಲೇ ವಕೀಲನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ ಸಮೀಪ ನಡೆದಿದೆ. ಮಂಜುನಾಥ್(30) ಹಲ್ಲೆಗೊಳಗಾದ ವಕೀಲ. ಬೆನ್ನಿಗೆ ಮತ್ತು ಕೈಗೆ ಚಾಕುವಿನಿಂದ ಇರಿಯಲಾಗಿದ್ದು, ನೆರವಿಗೆ ಧಾವಿಸಿದ ಆಟೋ ಡ್ರೈವರ್ ಮೇಲೆಯೂ ಹಲ್ಲೆ ಮಾಡಲಾಗಿದೆ.

ಸದ್ಯ ಗಾಯಾಳುವಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೇ ವೇಳೆ ಸ್ಥಳಿಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಹಳೇ ದ್ವೇಷಕ್ಕೆ ಕೋಲಾರದಲ್ಲಿ ಹರಿಯಿತು ನೆತ್ತರು

ಕೋಲಾರ: ಹಳೆ ದ್ವೇಷ ಹಾಗೂ ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಬರ್ಬರ (Murder Case) ಕೊಲೆಯಾಗಿದೆ. ವಾಸದ ಮನೆಯಲ್ಲಿಯೇ ಸೀನಪ್ಪ (41) ಎಂಬುವವರ ಕೊಲೆಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ದೇವರಾಜ್, ಮಂಜುನಾಥ್, ನರಸಿಂಹಯ್ಯ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಮುರಳಿ ಎಂಬಾತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಕ್ತ ಸಂಬಂಧಿಗಳ ನಡುವೆಯೇ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ. ನರಸಿಂಹಯ್ಯ ಹಾಗೂ ಅವರ ತಮ್ಮ ಅಬ್ಬಯ್ಯ ನಡುವೆ ಪಿತ್ರಾರ್ಜಿತ ಜಮೀನು ವಿವಾದ ಇತ್ತು. ಇದೇ ಜಮೀನು ವಿವಾದಕ್ಕೆ 2015ರಲ್ಲಿ ನರಸಿಂಹಯ್ಯನ ಮೊದಲ ಮಗ ಕೊಲೆಯಾಗಿದ್ದ. ಈ ಕಾರಣಕ್ಕೆ ನರಸಿಂಹಯ್ಯ ಕುಟುಂಬ ಸಿಟ್ಟಾಗಿತ್ತು.

ಇದನ್ನೂ ಓದಿ | Tumkur News: ಶಿರಾದ ಬಳಿ ಅರಣ್ಯಾಧಿಕಾರಿಗಳ ಕಾರ್ಯಾಚರಣೆ; ಆರೋಪಿ ಬಂಧನ

ಹೀಗಾಗಿ ಹಳೇ ವೈಷಮ್ಯ ಹಾಗೂ ಜಮೀನು ಗಲಾಟೆ ಕೋಪಕ್ಕೆ ಅಬ್ಬಯ್ಯನ ಅಳಿಯ ಸೀನಪ್ಪನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version