ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ತಂದಿದ್ದ ಕೋಟಿ ಕೋಟಿ ಮೌಲ್ಯದ ಕೊಕೇನ್ ಅನ್ನು ವಶಕ್ಕೆ (Drugs Seized) ಪಡೆಯಲಾಗಿದೆ. ಕಸ್ಟಮ್ಸ್ ತಂಡದ ಕಾರ್ಯಾಚರಣೆ ವೇಳೆ ವಿದೇಶದಿಂದ ತಂದಿದ್ದ ಮೂವತ್ತು ಕೋಟಿ ಮೌಲ್ಯದ ಮೂರು ಕೆಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ.
ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6E1302 ವಿಮಾನದಲ್ಲಿ ಸ್ಮಗ್ಲರ್ ಬಂದಿದ್ದ. ಲಗೇಜ್ ಬ್ಯಾಗ್‌ನಲ್ಲಿ3 ಕೆಜಿ ಕೊಕೇನ್ ಅಡಗಿಸಿಟ್ಟುಕೊಂಡು ಬಂದಿದ್ದ. ಆದರೆ ಲಗೇಜ್ ಬ್ಯಾಗ್ ಚೆಕ್ಕಿಂಗ್ ವೇಳೆ ಕೊಕೇನ್ ಇರುವುದು ಪತ್ತೆಯಾಗಿದೆ. ಸದ್ಯ ಕೊಕೇನ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.
ಕಲಬುರಗಿಯಲ್ಲಿ ಚಲಾಕಿ ಕಳ್ಳರ ಬಂಧನ
ಕಲಬುರಗಿ ಜಿಲ್ಲೆಯ ನಿಂಬರ್ಗಾ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳ ಜಪ್ತಿ ಮಾಡಿದ್ದಾರೆ. 10 ಬೈಕ್, ಟ್ರ್ಯಾಕ್ಟರ್ ಟ್ರಾಲಿ, ಟ್ರ್ಯಾಕ್ಟರ್ ಇಂಜಿನ್ ಸೇರಿದಂತೆ 14 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಬೈಕ್ ಕಳ್ಳತನ ಪ್ರಕರಣ ಭೇದಿಸಲು ಹೋದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ಖತರ್ನಾಕ್ ಟೀಂ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬನ ಬೈಕ್ ಕದ್ದಿದ್ದರು. ಪ್ರಥ್ವಿ ಬಿಳಗಿ, ಮಹಿಬೂಬ್, ರಾಹುಲ್ ಕ್ಷೇತ್ರಿ, ಮುನ್ನಾ ಜೈನೋದ್ದಿನ್ಣ ಕರೀಂ ಬಾಗವಾನ್, ಅಮಿನ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಬೈಕ್ ಮತ್ತು ಟ್ರ್ಯಾಕ್ಟರ್ ಇಂಜಿನ್ ಮತ್ತು ಟ್ರಾಲಿಗಳನ್ನ ಕದಿಯುತ್ತಿದ್ದರು. ಈ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: KSRTC Ticket Price Hike: ಸಾರಿಗೆ ಬಸ್ ಪ್ರಯಾಣಿಕರಿಗೆ ಶಾಕ್; ಟಿಕೆಟ್ ದರ ಏರಿಕೆ ಸುಳಿವು ನೀಡಿದ KSRTC ಅಧ್ಯಕ್ಷ!
ಬಾರ್‌ನಲ್ಲಿ ಕುಡುಕನ ಮೊಬೈಲ್ ಎಗರಿಸಿದ ಕಳ್ಳ
ಬಾರ್‌ವೊಂದರಲ್ಲಿ ಖದೀಮರು ಕೈಚಳಕ ತೋರಿದ್ದಾರೆ. ತುಮಕೂರಿನ ಜೆ.ಸಿ ರಸ್ತೆಯಲ್ಲಿರುವ ರೇಣುಕಾ ವೈನ್ಸ್‌ನಲ್ಲಿ ಮದ್ಯ ಸೇವಿಸುವ ಸೋಗಿನಲ್ಲಿ ಗ್ಯಾಂಗ್‌ವೊಂದು ಎಂಟ್ರಿ ಕೊಟ್ಟಿತ್ತು. ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ. ಇತ್ತ ಕಳ್ಳರ ಗ್ಯಾಂಗ್ ಅತ್ತಿಂದಿತ್ತ ಓಡಾಡಿ, ಮಾತಾಡಿಸುವ ನೆಪದಲ್ಲಿ ಹತ್ತಿರ ಹೋಗಿ ಕ್ಷಣಾರ್ಧದಲ್ಲಿ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಇದೇ ತಿಂಗಳ 8ರಂದು ಸಂಜೆ 5 ಗಂಟೆಯಲ್ಲಿ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಖದೀಮರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ