ರಾಂಚಿ: ಮಕ್ಕಳು ನಾಲ್ಕು ಅಕ್ಷರ ಕಲಿಯಲಿ, ವಿದ್ಯೆ ಕಲಿತು ಸಮಾಜಕ್ಕೆ ಒಳಿತು ಮಾಡಲಿ. ಉತ್ತಮ ನಾಗರಿಕರಾಗುವ ಜತೆಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಪೋಷಕರು ಮಕ್ಕಳನ್ನು ಶಾಲೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುತ್ತಾರೆ. ಆದರೆ, ಅಂತಹ ಶಿಕ್ಷಣ ಸಂಸ್ಥೆಗಳಲ್ಲಿಯೇ ಶಿಕ್ಷಕರು ಮಾಡುವ ಅನಾಚಾರಗಳು ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಕೂಡ ಹೆದರುವಂತೆ ಮಾಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ರಾಂಚಿಯಲ್ಲೊಬ್ಬ (Ranchi) ಮದರಸಾ ಮೌಲ್ವಿಯು (Madrasa Maulana), ಮದರಸಾದಲ್ಲಿ ಮಕ್ಕಳಿಗೆ ಅಕ್ಷರ ಕಲಿಸುವ ಬದಲು ಅನಾಚಾರ ಎಸಗಿದ್ದಾನೆ. 11 ವರ್ಷದ ಬಾಲಕಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದು, ಪ್ರಕರಣ ಬಯಲಾಗುತ್ತಲೇ ಪರಾರಿಯಾಗಿದ್ದಾನೆ. ಈಗ ಮುಸ್ಲಿಮರು ತಮ್ಮ ಮಕ್ಕಳನ್ನು ಮದರಸಾಗಳಿಗೆ ಕಳುಹಿಸಲು ಕೂಡ ಹೆದರುವಂತಾಗಿದೆ.
ರಾಂಚಿಯಲ್ಲಿರುವ ಮದರಸಾದಲ್ಲಿ 30 ವರ್ಷದ ಇಮಾಮ್ ಅನ್ಸಾರಿ ಎಂಬ ಮೌಲ್ವಿಯು ಮಕ್ಕಳಿಗೆ ಶಿಕ್ಷಣ ಕಲಿಸುವವನ ರೀತಿ ಸೋಗುಹಾಕಿದ್ದಾನೆ. ಈತನನ್ನು ನಂಬಿ ಹಲವು ಪೋಷಕರು ತಮ್ಮ ಮಕ್ಕಳನ್ನು ಮದರಸಾಕ್ಕೆ ಕಳುಹಿಸಿದ್ದಾರೆ. ಆದರೆ, ಬಾಲಕಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದಾರೆ. ಹೆಣ್ಣುಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು, ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ತೋರಿಸಿದ್ದಾನೆ. ಹಾಗೆಯೇ, ಬಾಲಕಿಯರ ದೇಹವನ್ನು ಎಲ್ಲೆಂದರಲ್ಲಿ ಮುಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣ ಬಯಲಾಗಿದ್ದು ಹೇಗೆ?
ಮದರಸಾಗೆ ಹೋಗುತ್ತಿದ್ದ ಬಾಲಕಿಯೊಬ್ಬಳು ಕಳೆದ ಹಲವು ದಿನಗಳಿಂದ ಹೋಗಲು ನಿರಾಕರಿಸಿದ್ದಾಳೆ. ನಾನು ಯಾವುದೇ ಕಾರಣಕ್ಕೂ ಮದರಸಾಗೆ ಹೋಗುವುದಿಲ್ಲ ಎಂದು ಪೋಷಕರಿಗೆ ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಪೋಷಕರು ವಿಚಾರಣೆ ನಡೆಸಿದಾಗ, ಮದರಸಾ ಮೌಲಾನ ಮಾಡಿದ ಅನಾಚಾರವು ಗೊತ್ತಾಗಿದೆ. ಅಲ್ಲದೆ, ಬಾಲಕಿಯ ತಂದೆಯು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಮಾಮ್ ಅನ್ಸಾರಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: Gujarat Shiv Yatra: ಗುಜರಾತ್‌ನಲ್ಲಿ ಶೋಭಾಯಾತ್ರೆ ವೇಳೆ ಮದರಸಾ ಮೇಲಿಂದ ಕಲ್ಲೆಸೆತ; ಪರಿಸ್ಥಿತಿ ಉದ್ವಿಗ್ನ
ಈತ ಯಾರೆಂದೇ ಜನಕ್ಕೆ ಗೊತ್ತಿಲ್ಲ
ಇಮಾಮ್ ಅನ್ಸಾರಿಯು ಕಳೆದ ಎರಡು ವರ್ಷದಿಂದ ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ, ಈತನ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯೇ ಗೊತ್ತಿಲ್ಲ. ಆತ ಯಾರು, ಎಲ್ಲಿಂದ ಬಂದ ಎಂಬುದು ಸೇರಿ ಯಾವುದೇ ಮಾಹಿತಿಯು ಜನರಿಗೆ ಗೊತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಲೇ ಪೊಲೀಸರು ಮದರಸಾಗೆ ತೆರಳಿದ್ದಾರೆ. ಪರಿಶೀಲನೆ ಮಾಡುವಾಗ ಮದರಸಾದಲ್ಲಿ ಯಾರೂ ಇಲ್ಲದಿರುವುದು ಗೊತ್ತಾಗಿದೆ. ಹಾಗೆಯೇ, ಆತನ ಕುರಿತು ಯಾರಿಗೂ ಮಾಹಿತಿ ಇಲ್ಲದಿರುವುದು ಕೂಡ ತಿಳಿದುಬಂದಿದೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.